More

    ಭಾರತದ ಗಡಿ ರಕ್ಷಕರಾಗಿ ಜೇನುಹುಳಗಳು; ಭಾರತ, ಬಾಂಗ್ಲಾದೇಶದ ಬೇಲಿಯಲ್ಲಿ ಬಿಎಸ್ಎಫ್ ಜತೆ ಕಾವಲು…

    ನವದೆಹಲಿ: ಭಾರತದ ಗಡಿಯೊಳಗೆ ನುಸುಳುವವರೇ ಎಚ್ಚರ. ಯಾಕೆಂದ್ರೆ ಈಗ ಜೇನುಹುಳಗಳನ್ನು ಎದುರಿಸಬೇಕಾಗುತ್ತದೆ. ಭಾರತ-ಬಾಂಗ್ಲಾದೇಶ ಗಡಿಯ ಕೆಲವು ಪ್ರದೇಶಗಳಲ್ಲಿ, ಗಡಿಭಾಗದ ತಂತಿಬೇಲಿಯಲ್ಲಿ ಜೇನು ಕೃಷಿ ನಡೆಯುತ್ತಿದೆ.  ಗಡಿ ಭದ್ರತಾ ಪಡೆ ಅಂದರೆ ಬಿಎಸ್ ಎಫ್ ಯೋಜನೆ ಸಿದ್ಧಪಡಿಸಿದೆ.

    ಪ್ರಸ್ತುತ ಇದನ್ನು ಪ್ರಾಯೋಗಿಕ ಯೋಜನೆಯಾಗಿ ಆರಂಭಿಸಲಾಗಿದೆ. ಈ ಯೋಜನೆಯಡಿಯಲ್ಲಿ, ಕೇಂದ್ರ ಸರ್ಕಾರವು ಭಾರತ-ಬಾಂಗ್ಲಾದೇಶ ಗಡಿಯನ್ನು ಪ್ರಾಯೋಗಿಕ ಯೋಜನೆಯಾಗಿ ಆಯ್ಕೆ ಮಾಡಿದೆ.  ಇದು ಯಶಸ್ವಿಯಾದರೆ ದೊಡ್ಡ ಪ್ರಮಾಣದಲ್ಲಿ ಜೇನು ಕೃಷಿ ಕೈಗೊಳ್ಳಲಾಗುವುದು.

    ಭಾರತ ಮತ್ತು ಬಾಂಗ್ಲಾದೇಶದ ನಡುವೆ 4.96 ಕಿಮೀ ಉದ್ದದ ಗಡಿ ಇದೆ. ಇಲ್ಲಿ ಮುಳ್ಳು ತಂತಿ ಅಳವಡಿಸಲಾಗಿದೆ. ಇದೀಗ ಗಡಿ ಭದ್ರತಾ ಪಡೆ ಸಿಬ್ಬಂದಿ ಈ ಮುಳ್ಳುತಂತಿಗಳ ಪಕ್ಕದಲ್ಲಿಯೇ ಜೇನುಗೂಡುಗಳನ್ನು ಸ್ಥಾಪಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ಉಪಕ್ರಮದ ಮೇರೆಗೆ ಬಿಎಸ್ಎಫ್ ಈ ಯೋಜನೆಯನ್ನು ಪ್ರಾರಂಭಿಸಿದೆ. ಸದ್ಯ ಚಾಪ್ರಾ, ಬಾನ್‌ಪುರ, ಕಡಿಪುರ, ಅಂಚಾಸ್‌ ಗಡಿಯಲ್ಲಿ ಕೆಲವೆಡೆ ಜೇನುಗೂಡುಗಳನ್ನು ನಿರ್ಮಿಸಲಾಗುತ್ತಿದೆ.

    ಕೃಷ್ಣಗಂಜ್ ಪ್ರದೇಶದಲ್ಲಿ ಬಿಎಸ್ಎಫ್ 20 ಜೇನು ಪೆಟ್ಟಿಗೆಗಳನ್ನು ಸ್ಥಾಪಿಸಿದೆ. ಇಲ್ಲಿ ಸ್ಥಳೀಯ ಜನರು ಈ ಪೆಟ್ಟಿಗೆಗಳ ನಿರ್ವಹಣೆಯ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ. ಜೇನು ಸಂಗ್ರಹಿಸುವ ಜವಾಬ್ದಾರಿಯನ್ನೂ ಅವರೇ ತೆಗೆದುಕೊಳ್ಳುತ್ತಾರೆ. ಇದರಿಂದ ಆರ್ಥಿಕವಾಗಿಯೂ ಲಾಭವಾಗಲಿದೆ. ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಜೇನುಸಾಕಣೆಯ 200 ಬಾಕ್ಸ್‌ಗಳನ್ನು ಸ್ಥಾಪಿಸುವುದು ಗುರಿಯಾಗಿದೆ. ಈ ಉದ್ದೇಶಕ್ಕಾಗಿ ಜೇನುನೊಣಗಳು ಇಷ್ಟಪಡುವ ಕೆಲವು ಹೂವಿನ ಗಿಡಗಳನ್ನು ಗಡಿಯ ಮುಳ್ಳುತಂತಿಯ ಬೇಲಿಯಲ್ಲಿಯೂ ಬೆಳೆಸಲಾಗುತ್ತದೆ. ಇಲ್ಲಿಯೇ ಜೇನು ಸಾಕಾಣಿಕೆ ಪೆಟ್ಟಿಗೆ ಇಡಲಾಗಿದೆ. ಇಲ್ಲಿನ ಪರಿಸರವನ್ನು ಜೇನುನೊಣಗಳಿಗೆ ತುಂಬಾ ನೈಸರ್ಗಿಕವಾಗಿ ಕಾಣುವ ರೀತಿಯಲ್ಲಿ ಜೋಡಿಸಲಾಗಿದೆ.

    ಜೇನುಸಾಕಣೆ ಪೆಟ್ಟಿಗೆಗಳನ್ನು ಗಡಿಯಲ್ಲಿ ಇರಿಸಲಾಗುತ್ತದೆ. ಗಡಿಯಲ್ಲಿ ಯಾವುದೇ ಅನುಚಿತ ಚಟುವಟಿಕೆ ನಡೆದರೆ ಜೇನು  ದಾಳಿ ನಡೆಸುತ್ತವೆ. ಮುಳ್ಳುತಂತಿಯ ಬಳಿ ಬರುವವರಿಗೆ ಜೇನುನೊಣಗಳು ದೊಡ್ಡ ಅಪಾಯ ಎಂದು ದಕ್ಷಿಣ ಬಂಗಾಳದ ಗಡಿ ಡಿಐಜಿಯ ಬಿಎಸ್ಎಫ್ ಸಾರ್ವಜನಿಕ ಸಂಪರ್ಕ ಅಧಿಕಾರಿ ಹೇಳಿದ್ದಾರೆ. ಪ್ರಸ್ತುತ ಪೈಲಟ್ ಯೋಜನೆಯಡಿ ಕಾಮಗಾರಿಗಳು ನಡೆಯುತ್ತಿವೆ. ಪ್ರಯೋಗ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಬೇರೆ ಕಡೆಗಳಲ್ಲಿಯೂ ಈ ಜೇನು ಬಳ್ಳಿಗಳ ಬೇಸಾಯಕ್ಕೆ ಚಾಲನೆ ದೊರೆಯಲಿದೆ ಎಂದು ತಿಳಿದುಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts