More

    ನಗರಸಭೆಯ ಎದುರೇ ಅಪಾಯಕಾರಿ ಕೃತಕ ಕೆರೆ

    ಉಡುಪಿ: ನಗರದ ಹೃದಯಭಾಗದ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆ ಹಳೇಕಟ್ಟಡವನ್ನು ಕೆಡವಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತಳ ಅಂತಸ್ತು ನಿರ್ಮಾಣಕ್ಕೆ ಖಾಸಗಿ ಕಂಪನಿ ಹೊಂಡ ಅಗೆತ ಕಾರಣ ಮಳೆ ನೀರು ಶೇಖರಣೆಯಾಗಿ ಕೃತಕ ಕೆರೆ ಸೃಷ್ಟಿಯಾಗಿದೆ.

    ಕೂಸಮ್ಮ ಶಂಭುಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ನಿರ್ವಹಣೆಗಾಗಿ ಪ್ರಸ್ತುತ ಜಾಗದಲ್ಲಿ ಬಿಆರ್‌ಎಸ್ ಸಂಸ್ಥೆ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಸರ್ಕಾರ ಒಡಂಬಡಿಕೆ ಮಾಡಿಕೊಂಡಿದ್ದು, ಅದರಂತೆ ಬಹುಮಹಡಿಯ ಕಟ್ಟಡ ಕಾಮಗಾರಿ ಪ್ರಾರಂಭವಾಗಿತ್ತು. ನಂತರ ಕಾನೂನಾತ್ಮಕ ತೊಡಕಿನಿಂದ ನಿರ್ಮಾಣ ಹಂತದ ಕಾಮಗಾರಿ ಹಲವು ತಿಂಗಳ ಹಿಂದೆ ಸ್ಥಗಿತಗೊಂಡಿದ್ದು, ಕಳೆದ 2 ದಿನದ ಹಿಂದೆ ಸುರಿದ ಭಾರಿ ಮಳೆಗೆ ಈ ಹೊಂಡದಲ್ಲಿ ನೀರು ತುಂಬಿದ್ದು, ನಗರಸಭೆಯ ಎದುರೇ ಸುಮಾರು 1.39 ಎಕರೆ ಜಾಗದಲ್ಲಿ ದೊಡ್ಡ ಕೆರೆ ನಿರ್ಮಾಣವಾಗಿದೆ.

    ಭೂಕುಸಿತ ಭೀತಿ: ಮೂರು ಮಹಡಿ ನೆಲ ಅಂತಸ್ತು ನಿರ್ಮಾಣ ಉದ್ದೇಶದಿಂದ ಬೃಹತ್ ಹೊಂಡ ತೆಗೆಯಲಾಗಿದ್ದು, ನೀರು ನಿಂತಿರುವುದರಿಂದ ಅಕ್ಕಪಕ್ಕದ ಬಹುಮಹಡಿ ಕಟ್ಟಡಗಳಿಗೂ ಅಪಾಯ ಸಂಭವಿಸುವ ಭೀತಿ ಎದುರಾಗಿದೆ. ಕಟ್ಟಡ ಕಾಮಗಾರಿಯ ಕೆಲ ಸಾಮಗ್ರಿಗಳು ಇಲ್ಲಿ ಇರುವುದರಿಂದ ನೀರು ನಿಂತು ಸೊಳ್ಳೆಗಳ ತಾಣವಾಗಿ ಮಾರ್ಪಾಡಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಸ್ಥಳೀಯರು.
    ಕೂಡಲೇ ಜಿಲ್ಲಾಡಳಿತ ಇತ್ತ ಗಮನಹರಿಸಿ ಹೊಂಡ ಮುಚ್ಚಿಸುವ ಕಾರ್ಯ ಮಾಡಬೇಕು. ಇಲ್ಲದಿದ್ದರೆ ಅಗತ್ಯ ಮುಂಜಾಗ್ರತಾಕ್ರಮ ಕೈಗೊಳ್ಳಲು ಸಂಬಂಧಪಟ್ಟವರಿಗೆ ಸೂಚನೆ ನೀಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಗಣೇಶ್‌ರಾಜ್ ಸರಳೇಬೆಟ್ಟು ಒತ್ತಾಯಿಸಿದ್ದಾರೆ.

     ಕಾನೂನಾತ್ಮಕ ತೊಡಕು ಇರುವುದರಿಂದ ಆಸ್ಪತ್ರೆ ನಿರ್ಮಾಣ ಕಾರ್ಯ ಸ್ಥಗಿತಗೊಳಸಲು ನಗರಸಭೆಯಿಂದ 2 ನೋಟಿಸ್ ನೀಡಲಾಗಿದೆ. ಇದರಲ್ಲಿ ಅಕ್ಕಪಕ್ಕದ ಕಟ್ಟಡಗಳಿಗೆ ಹಾನಿಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿತ್ತು. ಪ್ರಸ್ತುತ ಮಳೆ ನೀರು ತುಂಬಿರುವುದರಿಂದ ಪಂಪ್ ಮೂಲಕ ಖಾಲಿ ಮಾಡುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗುವುದು.
    ಮೋಹನ್‌ರಾಜ್ ಕಾರ್ಯಪಾಲಕ ಅಭಿಯಂತ, ನಗರಸಭೆ

    https://www.vijayavani.net/in-3-years-china-doubled-its-air-bases-air-defences-and-heliports-along-india-frontier-report/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts