More

    ನಿರ್ಲಕ್ಷಿಸಿದರೆ ಸುರಕ್ಷತೆ ಪ್ರಾಣಕ್ಕೆ ಬರಲಿದೆ ಕುತ್ತು; ಗಣಿ ಜಾಗೃತಿ ದಿನ

    | ಬೇಲೂರು ಹರೀಶ ಬೆಂಗಳೂರು

    ಗಣಿಗಾರಿಕೆಯಿಂದ ಸರ್ಕಾರಕ್ಕೆ ಹೆಚ್ಚಿನ ಆದಾಯ ಸಿಗುತ್ತಿದೆ ನಿಜ. ಆದರೆ, ಅದೇ ಗಣಿಗಾರಿಕೆಯಿಂದ ಪರಿಸರ ಹಾಗೂ ಮಾನವನ ಮೇಲೆ ಗಂಭೀರ ಪರಿಣಾಮ ಉಂಟಾ ಗುತ್ತಿದೆ. ವರ್ಷದಿಂದ ವರ್ಷಕ್ಕೆ ಅಮೂಲ್ಯ ಸಂಪತ್ತು ಬರಿದಾಗುತ್ತಿದೆ. ಗಣಿಗಾರಿಗೆ ವೇಳೆ ಸಂಭವಿಸುವ ಸ್ಪೋಟದಂತಹ ಅನಾಹುತಗಳಿಂದ ಪ್ರಾಣಹಾನಿಯಾಗುತ್ತಿದೆ. ಗಣಿಗಾರಿಕೆ ಸಂದರ್ಭದಲ್ಲಿ ಸುರಕ್ಷತಾ ಕ್ರಮಗಳ ಅನುಸರಿಸಲು ಸರ್ಕಾರ ನಿಯಮ ರೂಪಿಸಿದ್ದರೂ ಮಾಲೀಕರು ಪಾಲನೆ ಮಾಡುತ್ತಿಲ್ಲ. ವರ್ಷದಿಂದ ವರ್ಷಕ್ಕೆ ಗಣಿ ಸ್ಪೋಟದಿಂದ ಉಂಟಾಗುವ ಅನಾಹುತವನ್ನು ಕಡಿಮೆಗೊಳಿಸುವುದು ವಿಶ್ವಸಂಸ್ಥೆಯ ಮುಖ್ಯ ಉದ್ದೇಶ. ಹಾಗಾಗಿ, ಪ್ರತಿ ವರ್ಷ ಏ.4ರಂದು ಗಣಿ ಜಾಗೃತಿ ದಿನ ಆಚರಿಸುತ್ತಿದೆ. ಕಳೆದ ವರ್ಷ ವಿಶ್ವಸಂಸ್ಥೆಯ ಗಣಿ ಕ್ರಿಯಾ ಸಮುದಾಯ, ಕೋವಿಡ್-19 ಸಾಂಕ್ರಾಮಿಕ ಸಂದರ್ಭದಲ್ಲಿ ಈ ದಿನವನ್ನು ಆಚರಿಸಿ ಗಣಿ ಜಾಗೃತಿ ಬಗ್ಗೆ ಬೆಳಕು ಚೆಲ್ಲಿತ್ತು. ಈ ಬಾರಿ ‘ಪರಿಶ್ರಮ, ಸಹಭಾಗಿತ್ವ ಹಾಗೂ ಪ್ರಗತಿ’ಯಡಿ ಗಣಿ ಜಾಗೃತಿ ದಿನ ಆಚರಿಸಲಾಗುತ್ತಿದೆ. ಭೂಕುಸಿತ ತಡೆಯುವುದು, ಸ್ಪೋಟದಿಂದ ಉಂಟಾಗುವ ಪ್ರಾಣಹಾನಿ ತಡೆಯಲು ಸುರಕ್ಷತಾ ಕ್ರಮ ಅಳವಡಿಕೆ, ಸ್ಪೋಟಕ ಸಾಧನಗಳ ಬಗ್ಗೆ ಇರುವ ಭಯವನ್ನು ಹೋಗಲಾಡಿಸುವುದು, ಮಾಲೀಕರಿಗೆ ಗಣಿಗಾರಿಕೆ ವೇಳೆ ಸುರಕ್ಷತೆ ಕ್ರಮಗಳನ್ನು ಪಾಲಿಸುವುದು ಸೇರಿ ಇನ್ನಿತರ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.

    ಪರಿಸರಕ್ಕೆ ಹಾನಿ: ಜಲ್ಲಿ, ಸೈಜುಗಲ್ಲು, ಬೋಲ್ಡರ್ಸ್, ದಿಂಡಿಗಲ್ಲು, ಕಲ್ಲುಪುಡಿ, ಅಲಂಕಾರಿಕಾ ಶಿಲೆ ಮತ್ತು ಗ್ರಾನೈಟ್ ಗಣಿಗಾರಿಕೆಯಿಂದಾಗಿ ಪರಿಸರಕ್ಕೆ ಅಪಾರ ಹಾನಿಯಾಗುತ್ತಿದೆ. ಕ್ವಾರಿಗಳಿಂದ ಬರುವ ಧೂಳು ಹಾಗೂ ಸ್ಪೋಟಕ ವಸ್ತು ಬಳಕೆಯಿಂದ ಸ್ಥಳೀಯರಿಗೆ ತೊಂದರೆಯಾಗುತ್ತಿದೆ. ಹಾಗಾಗಿ, ಅಧಿಕೃತ ಮತ್ತು ಅನಧಿಕೃತ ಕಲ್ಲು ಗಣಿಗಾರಿಕೆಯನ್ನು ಸಂಪೂರ್ಣವಾಗಿ ರದ್ದು ಮಾಡಬೇಕೆಂದು ಪರಿಸರವಾದಿಗಳು, ರೈತರು ಸೇರಿ ನಾನಾ ಸಂಘಟನೆಗಳು ಈಗಾಗಲೆ ಸಾಕಷ್ಟು ಬಾರಿ ಹೋರಾಟ ನಡೆಸಿದ್ದರೂ ಸರ್ಕಾರ ಸುರಕ್ಷತಾ ಕ್ರಮ ಕೈಗೊಂಡಿಲ್ಲ.

    ಶೇ.70 ಕ್ವಾರಿಗಳು ನಿಯಮ ಪಾಲಿಸುತ್ತಿಲ್ಲ: ರಾಜ್ಯದಲ್ಲಿ ಶೇ.90 ಕಲ್ಲು ಗಣಿಗಾರಿಕೆಗಳು ಸರಿಯಾದ ನಿಯಮಗಳನ್ನು ಪಾಲಿಸುತ್ತಿಲ್ಲ. ಕ್ವಾರಿಯಲ್ಲಿ ಕಲ್ಲುಗಳನ್ನು ಸ್ಪೋಟಿಸುವಾಗ ಮಾಲೀಕರು ಕಟ್ಟುನಿಟ್ಟಾಗಿ ನಿಯಮಗಳನ್ನು ಪಾಲಿಸಬೇಕು. ಆದರೆ, ಎಷ್ಟೋ ಪ್ರಕರಣಗಳಲ್ಲಿ ಸರಿಯಾಗಿ ನಿಯಮ ಪಾಲಿಸದ ಹಿನ್ನೆಲೆಯಲ್ಲಿ ಅಮಾಯಕರ ಜೀವಗಳು ಬಲಿಯಾಗುತ್ತಿವೆ. ಗಣಿಗಾರಿಕೆ ನಡೆಯುವ ಸ್ಥಳದ ಸುತ್ತಮುತ್ತ ಗ್ರಾಮದ ಜನರು ಸಹ ಭಯದಿಂದ ಜೀವನ ನಡೆಸುತ್ತಿದ್ದಾರೆ. ಜತೆಗೆ, ಅನೇಕ ಕಾಯಿಲೆಗಳು ತುತ್ತಾಗುತ್ತಿದ್ದಾರೆ. ಹಾಗಾಗಿ, ಸಂಪೂರ್ಣವಾಗಿ ಗಣಿಗಾರಿಕೆಯನ್ನು ನಿಲ್ಲಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.

    ಕಾರ್ವಿುಕರ ಸುರಕ್ಷತೆ ಮುಖ್ಯ: ಕಾರ್ವಿುಕರಿಗಾಗಿ ಮೂಲಭೂತ ಸೌಕರ್ಯಗಳಾದ ವಸತಿ, ಕುಡಿಯುವ ನೀರು, ಶೌಚಗೃಹ ನಿರ್ವಣ, ಕಾರ್ವಿುಕರಿಗೆ ನಿಗದಿತ ವೇತನ, ಜೀವವಿಮೆ ಮಾಡಿಸುವುದು, ಕಲ್ಲುಗಣಿ ಗುತ್ತಿಗೆ ಪ್ರದೇಶಗಳಲ್ಲಿ ಕೆಲಸ ಮಾಡುವ ಕಾರ್ವಿುಕರ ಸುರಕ್ಷಾ ಉಪಕರಣ (ಕೈಗವಸು, ಹೆಲ್ಮೆಟ್, ಮಾಸ್ಕ್, ಪ್ರಥಮ ಚಿಕಿತ್ಸೆ ಕಿಟ್) ನೀಡುವುದು, ಕಾರ್ವಿುಕರ ಆರೋಗ್ಯ ತಪಾಸಣೆ, ದಾಸ್ತಾನಿನ ಮೇಲೆ ಮತ್ತು ಸಾಗಾಣೆ ಮಾಡುವ ಉಪಖನಿಜ ಮೇಲೆ ಹೊದಿಗೆ ಹಾಕುವುದು, ಸ್ಪೋಟಕ ವಸ್ತುಗಳ ಶೇಖರಣೆಗೆ ಲೈಸೆನ್ಸ್ ಹೊಂದುವುದು, ಮ್ಯಾಗಜಿನ್ ಕಟ್ಟಡದಲ್ಲಿ ಹೊರತುಪಡಿಸಿ ಯಾವುದೇ ಪ್ರದೇಶದಲ್ಲಿ ಸ್ಪೋಟಕ ವಸ್ತುಗಳ ಶೇಖರಣೆಗೆ ಕಾನೂನಿನಲ್ಲಿ ಅವಕಾಶ ಇಲ್ಲ.

    ಮುನ್ನೆಚ್ಚರಿಕೆ ಕ್ರಮ ಅನುಸರಿಸಿ

    • ಕಂಟ್ರೋಲ್ ಬ್ಲಾಸ್ಟ್ ನಡೆಸುವುದು
    • ಕಲ್ಲುಗಳು ಹಾರದಂತೆ ನಿಯಂತ್ರಕ ಕ್ರಮಗಳನ್ನು ಅನುಸರಿಸಬೇಕು
    • ಸ್ಪೋಟಕ ಬಳಕೆ ವೇಳೆ ಸಾರ್ವಜನಿಕರ ಸುರಕ್ಷತೆಗೆ ಅನುಸರಿಸುವ ಮಾನದಂಡಗಳನ್ನು ಪಾಲಿಸುವುದು
    • ಸ್ಪೋಟಕಗಳನ್ನು ಸಾಗಾಣೆಗೆ ಸುರಕ್ಷತೆಯನ್ನು ಹೊಂದಿರುವ ವಾಹನವನ್ನು ಬಳಸುವುದು
    • ಪರವಾನಿಗೆ ಹೊಂದಿರುವ ನುರಿತ ತಜ್ಞರಿಂದ ಸ್ಪೋಟಕ ಉಪಯೋಗಿತಕ್ಕದ್ದು
    • ಸ್ಪೋಟದ ಬಳಿಕ ಉಳಿಯುವ ಸ್ಪೋಟಕ ವಸ್ತುಗಳ ಸುರಕ್ಷಿತ ಶೇಖರಣೆಗೆ ಕ್ರಮ ವಹಿಸುವುದು
    • ಮಕ್ಕಳು ಮತ್ತು ವೃದ್ಧರನ್ನು ಕೆಲಸಗಳಿಗೆ ಬಳಸಬಾರದು
    • ಕಾರ್ವಿುಕ ಸುರಕ್ಷತೆಗಳ ಬಗ್ಗೆ ಫಲಕ ಅಳವಡಿಸಬೇಕು
    • ತುರ್ತು ಸಂದರ್ಭಗಳಲ್ಲಿ ನಿರ್ವಹಣೆಗೆ ಸನ್ನದ್ಧರಾಗಬೇಕು ಸ್ಪೋಟಕಗಳ ಬಳಕೆ, ನಿಬಂಧನೆ ಗಣಿಗಾರಿಕೆ ಪ್ರದೇಶದಿಂದ 200 ಮೀ. ಅಂತರದೊಳಗೆ ಸಾರ್ವಜನಿಕರ ರಚನೆ ಇದ್ದರೆ ಸ್ಪೋಟಕಗಳನ್ನು ಬಳಸುವುದು ನಿಷೇಧ, ಸ್ಪೋಟಕ ಸಹಿತ ಗಣಿಗಾರಿಕೆ ಲೈಸೆನ್ಸ್ ನೀಡಲು ಎಕ್ಸ್​ಪ್ಲೋಸಿವ್ಸ್ ಆಕ್ಟ್ 1984 ಮತ್ತು ನಿಯಮ 2008ರಂತೆ ಪ್ರಾದೇಶಿಕ ಸ್ಪೋಟಕ ಪ್ರಾಧಿಕಾರಿಗಳಾಗುತ್ತಾರೆ, ಸ್ಥಳೀಯವಾಗಿ ಸ್ಪೋಟಕ ಬಳಸಲು ಜಿಲ್ಲಾಧಿಕಾರಿಗಳು ನಿರಾಕ್ಷೇಪಣಾ ಪತ್ರ/ಅನುಮತಿ ಪ್ರತಿ ನೀಡುತ್ತಾರೆ. ಸ್ಪೋಟಕ ಬಳಸಲು ಕಡ್ಡಾಯವಾಗಿ ಮಿನಿಷ್ಟ್ರಿ ಆಫ್ ಎಕ್ಸ್​ಪ್ಲೋಸಿವ್ಸ್ ಅವರಿಂದ ಅನುಮತಿ ಪಡೆದು ತಜ್ಞರಿಂದ ಒಡಂಬಡಿಕೆ ಮಾಡಿಕೊಂಡು ಎಲ್ಲ ದಾಖಲೆಗಳನ್ನು ಕಚೇರಿಗೆ ಸಲ್ಲಿಸತಕ್ಕದು, ಕಡ್ಡಾಯವಾಗಿ ಸ್ಪೋಟಕ ಕಾಯ್ದೆ ಅನ್ವಯ ಸ್ಪೋಟಕಗಳನ್ನು ಬಳಸುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts