More

    ಭೂಮಿಗೊಂದು ಗಂಟೆ ಮೀಸಲು; ಅರ್ಥ್ ಅವರ್​

    ಹೆಚ್ಚುತ್ತಿರುವ ಜಾಗತಿಕ ತಾಪಮಾನ ನಿಯಂತ್ರಣ ಮತ್ತು ಪರಿಸರ ಸಂರಕ್ಷಣೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ವರ್ಲ್ಡ್ ವೈಲ್ಡ್ ಫಂಡ್ ಸಂಸ್ಥೆ ‘ಅರ್ತ್ ಅವರ್’ ಆಂದೋಲನ ಆಯೋಜಿಸಿದೆ. ವಿಶ್ವಮಟ್ಟದಲ್ಲಿ ಏಕಕಾಲದಲ್ಲಿ ನಡೆಯಲಿರುವ ಈ ಆಯೋಜನೆ ಮೂಲಕ ಅನಗತ್ಯ ವಿದ್ಯುತ್ ಬಳಕೆಗೆ ನಿಯಂತ್ರಣ, ತಾಪಮಾನ ಕಡಿಮೆ ಮಾಡುವುದು ಪ್ರಮುಖ ಉದ್ದೇಶವಾಗಿದೆ.

    ಜಾಗತಿಕ ತಾಪಮಾನ ನಿಯಂತ್ರಣಕ್ಕೆ ವಿಶ್ವದ ಬಹುತೇಕ ರಾಷ್ಟ್ರಗಳು ಪ್ರಯತ್ನಿಸುತ್ತಿವೆ. ಅದಕ್ಕಾಗಿ ಪ್ಯಾರಿಸ್ ಒಪ್ಪಂದ ಮಾದರಿಯ ಹಲವು ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಆದರೂ, ಜಾಗತಿಕ ತಾಪಮಾನದಲ್ಲಿ ಮಾತ್ರ ಇಳಿಕೆಯಾಗುತ್ತಿಲ್ಲ. ಇದನ್ನು ಮನಗಂಡು ಭೂಮಿಗೆ ಒಂದು ಸಮಯ ನೀಡುವ ಸಲುವಾಗಿ ಪ್ರತಿ ವರ್ಷ ಮಾರ್ಚ್ 27ರಂದು ‘ಅರ್ತ್ ಅವರ್’ ಅಭಿಯಾನ ನಡೆಸಲಾಗುತ್ತಿದೆ. ಕಳೆದ 14 ವರ್ಷಗಳಿಂದ ಈ ಅಭಿಯಾನ ನಡೆಯುತ್ತಿದೆ.

    ಏನಿದು ಅರ್ತ್ ಅವರ್?: ಜಾಗತಿಕ ತಾಪಮಾನ ಏರಿಕೆಯಲ್ಲಿ ವಿದ್ಯುತ್ ದೀಪಗಳ ಕೊಡುಗೆಯೂ ಬಹಳಷ್ಟಿದೆ. ಹೀಗಾಗಿ ವರ್ಷದಲ್ಲಿ ಒಂದು ದಿನ ಒಂದು ಗಂಟೆ ಕಾಲ ಅನಗತ್ಯ ವಿದ್ಯುತ್ ದೀಪ ಹಾಗೂ ವಸ್ತುಗಳ ಬಳಕೆ ನಿಲ್ಲಿಸುವುದಕ್ಕೆ ‘ಅರ್ತ್ ಅವರ್’ ಎಂದು ಹೇಳಲಾಗುತ್ತದೆ.

    ಹೆಚ್ಚುತ್ತಿದೆ ತಾಪಮಾನ: ವರ್ಷದಿಂದ ವರ್ಷಕ್ಕೆ ತಾಪಮಾನ ಹೆಚ್ಚಳದಿಂದಾಗಿ ಧ್ರುವ ಪ್ರದೇಶಗಳಲ್ಲಿನ ಹಿಮ ಕರಗಿ ಸಮುದ್ರ ಮಟ್ಟ ಹೆಚ್ಚುತ್ತಿದೆ. 2020ರಲ್ಲಿ ಧ್ರುವ ಪ್ರದೇಶಗಳಲ್ಲಿ 1.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿತ್ತು. ಅದೇ ರೀತಿ ಒಂದು ಅಧ್ಯಯನದ ಪ್ರಕಾರ 2044ರ ವೇಳೆಗ ಧ್ರುವ ಪ್ರದೇಶದ ಉಷ್ಣಾಂಶ 1.5 ಡಿಗ್ರಿ ಸೆಲ್ಸಿಯಸ್​ಗೆ ಏರಿಕೆಯಾಗುವ ಭೀತಿಯಿದೆ. ಪರಿಣಾಮ ಹಿಮ ಪ್ರದೇಶ ಕರಗುವ ತೀವ್ರತೆ ಹೆಚ್ಚುತ್ತಿದೆ. ಹೀಗೆ ಉಷ್ಣಾಂಶ ಹೆಚ್ಚಾದ ಪರಿಣಾಮ 1900ರಿಂದ 2016ರವರೆಗೆ ಸಮುದ್ರ ಮಟ್ಟ 16ರಿಂದ 21 ಸೆ.ಮೀ.ನಷ್ಟು ಏರಿಕೆಯಾಗಿದೆ. ಇದು ಭೂಪ್ರದೇಶ ಕಡಿಮೆಯಾಗುವ ಮುನ್ಸೂಚನೆಯಾಗಿದೆ.

    ಆಸ್ಟ್ರೇಲಿಯನ್ನರ ಕೊಡುಗೆ: ವಿಶ್ವದಲ್ಲಿ ಮೊದಲು ‘ಅರ್ತ್ ಅವರ್’ ಆಚರಣೆಗೊಂಡಿದ್ದು 2007ರಲ್ಲಿ. ಜಾಗತಿಕ ತಾಪಮಾನ ನಿಯಂತ್ರಣ ಪ್ರಕ್ರಿಯೆಯಲ್ಲಿ ಆಸ್ಟ್ರೇಲಿಯನ್ನರನ್ನು ತೊಡಗಿಸುವ ಸಲುವಾಗಿ ವರ್ಲ್ಡ್ ವೈಲ್ಡ್ ಫಂಡ್ ಸಂಸ್ಥೆ ಈ ಪರಿಕಲ್ಪನೆಯನ್ನು ಜಾರಿಗೆ ತಂದಿತು. ಮೊದಲ ಅರ್ತ್ ಅವರ್​ನಲ್ಲಿ 22 ಲಕ್ಷ ಆಸ್ಟ್ರೇಲಿಯನ್ನರು ಪಾಲ್ಗೊಂಡಿದ್ದರು. ಸದ್ಯ 190 ದೇಶಗಳ 7 ಸಾವಿರಕ್ಕೂ ಹೆಚ್ಚಿನ ನಗರಗಳು ಇದರಲ್ಲಿ ಪಾಲ್ಗೊಳ್ಳುತ್ತಿವೆ.

    • ಇಂದು (ಶನಿವಾರ) ರಾತ್ರಿ 8.30ರಿಂದ 9.30ರವರೆಗೆ ಅರ್ತ್ ಅವರ್ ಆಚರಿಸಲಾಗುತ್ತಿದೆ.
    • ಭಾರತ ಸೇರಿ ವಿಶ್ವದ 190 ರಾಷ್ಟ್ರಗಳು, 7 ಸಾವಿರ ನಗರಗಳು ಭಾಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts