More

    ಮಾರುಕಟ್ಟೆ ಅರಿತು ವ್ಯವಹರಿಸಿದರೆ ಯಶಸ್ಸು ಸಾಧ್ಯ

    ಹುಬ್ಬಳ್ಳಿ: ಯಾವುದೇ ವ್ಯಾಪಾರ ಅಥವಾ ಉದ್ಯಮ ಆರಂಭಿಸುವ ಮುನ್ನ ಅದಕ್ಕೆ ಸಂಬಂಧಪಟ್ಟ ಮಾರುಕಟ್ಟೆ ಅರಿತು ವ್ಯವಹಾರ ಆರಂಭಿಸಿದರೆ ಯಶಸ್ಸು ಖಂಡಿತ ದೊರೆಯುತ್ತದೆ ಎಂದು ಕ್ರೀಮ್ ಸ್ಟೋನ್ ಕಾನ್ಸೆಪ್ಟ್ಸ್ ಸಿಇಒ ಶೀತಲ ಪಾಟೀಲ ಹೇಳಿದರು.
    ಅಂತಾರಾಷ್ಟ್ರೀಯ ಲಿಂಗಾಯತ ಯುವ ವೇದಿಕೆ (ಐಲೈಫ್) ವತಿಯಿಂದ ವಿದ್ಯಾನಗರದ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಆವರಣದಲ್ಲಿ ವೀರಶೈವ ಲಿಂಗಾಯತ ಜಾಗತಿಕ ಉದ್ಯಮ ಸಮಾವೇಶ-2024ದಲ್ಲಿ ಭಾನುವಾರ ಬೆಳಗ್ಗೆ ಏರ್ಪಡಿಸಿದ್ದ ನವೋದ್ಯಮ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
    ‘ಭಾರತದಲ್ಲಿ ಫ್ರಾೃಂಚೈಸಿ ಮಾದರಿಯ ಮೂಲಕ ಉದ್ಯಮದಲ್ಲಿ ಪ್ರಗತಿ ಸಾಧಿಸುವ ಕಲೆ’ ಎಂಬ ವಿಷಯ ಕುರಿತು ಮಾತನಾಡಿದ ಅವರು, ಮೊದಲನೆಯದಾಗಿ ಗುಣಮಟ್ಟದ ವಸ್ತುಗಳ ಮಾರಾಟದ ಫ್ರಾೃಂಚೈಸಿ ಪಡೆಯಬೇಕು. ಹೆಚ್ಚು ಜನರು ಸೇರುವ ಮಾರುಕಟ್ಟೆ ಸ್ಥಳದಲ್ಲಿ ಅಂಗಡಿ ತೆರೆಯಬೇಕು. ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡಬೇಕು. ಇದರಿಂದ ವ್ಯವಹಾರದಲ್ಲಿ ನಿಗದಿತ ಗುರಿ ಸಾಧಿಸಲು ಸಾಧ್ಯ ಎಂದರು.
    ಐಲೈಫ್ ಮೈಸೂರು ಶಾಖೆಯ ಚೇರ್ಮನ್ ಧರ್ಮಪ್ರಸಾದ ಮಾತನಾಡಿ, ಐಲೈಫ್‌ನಲ್ಲಿ ಸದಸ್ಯತ್ವ ಪಡೆದ ಬಳಿಕ ನಮ್ಮ ಜಿಲ್ಲೆಯ ಸದಸ್ಯರ ವ್ಯವಹಾರ ಗಣನೀಯವಾಗಿ ಏರಿಕೆಯಾಗಿದೆ. ಇದು ಒಂದು ಕುಟುಂಬದಂತಿದ್ದು, ಸದಸ್ಯರು ತಮಗೆ ಬೇಕಾದ ವಸ್ತುಗಳ ಬಗ್ಗೆ ಗ್ರುಪ್‌ನಲ್ಲಿ ಮಾಹಿತಿ ಹಂಚಿಕೊಳ್ಳುತ್ತಾರೆ. ಆಯಾ ವಸ್ತುಗಳನ್ನು ಮಾರಾಟ ಮಾಡುವವರು ಅವರನ್ನು ಸಂಪರ್ಕಿಸಿ ಗುಣಮಟ್ಟದ ವಸ್ತುಗಳನ್ನು ಪೂರೈಸುತ್ತಾರೆ. ಇದರಿಂದ ಸದಸ್ಯರಲ್ಲಿ ಬಂಧ ಇನ್ನಷ್ಟು ಗಟ್ಟಿಯಾಗುತ್ತದೆ ಎಂದರು. ಐಲೈಫ್ ಮೈಸೂರು ಜಿಲ್ಲೆಯಲ್ಲಿ ಅನೇಕ ಚಟುವಟಿಕೆ ಕೈಗೊಂಡಿದೆ. ವೀರಶೈವ ಲಿಂಗಾಯತ ಸಮಾಜದ ಬಡ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಸಹಾಯಧನ, ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರಿಗೆ ಶಸ್ತ್ರ ಚಿಕಿತ್ಸೆಗೆ ನೆರವು ನೀಡಿದ್ದೇವೆ ಎಂದರು.
    ಐಲೈಫ್ ಹುಬ್ಬಳ್ಳಿ ವಿಭಾಗದ ಅಧ್ಯಕ್ಷ ಅವಿನಾಶ ಪಳ್ಳೆಗಾರ, ಸಮಾವೇಶದ ಮುಖ್ಯ ಸಂಚಾಲಕ ಸಂತೋಷ ಕೆಂಚಾಂಬ, ಸಹಸಂಚಾಲಕ ರಮೇಶ ಪಾಟೀಲ, ಚನ್ನು ಹೊಸಮನಿ, ರವಿರಾಜ ಕಮ್ಮಾರ, ಶಶಿಧರ ಶೆಟ್ಟರ್, ಸಿದ್ದು ಮಠದ, ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts