More

    ಭಾರತದ ಕಿರಿಯರಿಗೆ ಹ್ಯಾಟ್ರಿಕ್ ಗೆಲುವು: ಅರ್ಶಿನ್ ಕುಲಕರ್ಣಿ ಶತಕ

    ಬ್ಲೋಮಾಂಟೇನ್: ಅರ್ಶಿನ್ ಕುಲಕರ್ಣಿ (108 ರನ್, 118 ಎಸೆತ, 8 ಬೌಂಡರಿ, 3 ಸಿಕ್ಸರ್) ಆಕರ್ಷಕ ಶತಕ ಹಾಗೂ ನಮನ್ ತಿವಾರಿ (20ಕ್ಕೆ 4) ಬಿಗಿ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ತಂಡ 19 ವಯೋಮಿತಿಯ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅಮೆರಿಕ ಎದುರು 201 ರನ್‌ಗಳಿಂದ ಹ್ಯಾಟ್ರಿಕ್ ಗೆಲುವು ದಾಖಲಿಸಿದೆ.

    ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಭಾರತ, ಅರ್ಶಿನ್ ಕುಲಕರ್ಣಿ ಹಾಗೂ ಮುಶೀರ್ ಖಾನ್ (73 ರನ್, 76 ಎಸೆತ, 6 ಬೌಂಡರಿ, 1 ಸಿಕ್ಸರ್) ಜತೆಯಾಟದ ನೆರವಿನಿಂದ 5 ವಿಕೆಟ್‌ಗೆ 326 ರನ್ ಪೇರಿಸಿತು. ಪ್ರತಿಯಾಗಿ ಅಮೆರಿಕ 8 ವಿಕೆಟ್‌ಗೆ 125 ರನ್‌ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಭಾರತ ಅಜೇಯವಾಗಿ ಸೂಪರ್-ಸಿಕ್ಸ್ ಹಂತಕ್ಕೇರಿತು.

    ಭಾರತ: 5 ವಿಕೆಟ್‌ಗೆ 326 (ಆದರ್ಶ್ 25, ಅರ್ಶಿನ್ 108, ಮುಶೀರ್ 73, ಉದಯ್ 35, ಪ್ರಿಯಾಂಶು 27*, ಎ. ಸುಬ್ರಮಣಿಯನ್ 45ಕ್ಕೆ 2). ಅಮೆರಿಕ: 8 ವಿಕೆಟ್‌ಗೆ 125 (ಪ್ರಣವ್ 2, ಸಿದ್ದಾರ್ಥ್ 18, ಉತ್ಕರ್ಷ್ 40, ಅಮೋಘ್ 27, ನಮನ್ ತಿವಾರಿ 20ಕ್ಕೆ 4, ರಾಜ್ ಲಿಂಬಾನಿ 16ಕ್ಕೆ 1). ಪಂದ್ಯಶ್ರೇಷ್ಠ: ಅರ್ಶಿನ್ ಕುಲಕರ್ಣಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts