More

    ವಿದೇಶಿ ಕರೆನ್ಸಿ ಸಹಿತ ಓರ್ವ ವಶಕ್ಕೆ, 5.52 ಲಕ್ಷ ರೂ. ಮೌಲ್ಯದ ನೋಟು ವಿಮಾನ ನಿಲ್ದಾಣದಲ್ಲಿ ಪತ್ತೆ

    ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಸೋಮವಾರ 5,52,678 ರೂ. ಮೌಲ್ಯದ ವಿದೇಶಿ ಕರೆನ್ಸಿ ವಶಪಡಿಸಿಕೊಂಡು ಪ್ರಯಾಣಿಕನನ್ನು ಬಂಧಿಸಿದ್ದಾರೆ.

    ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ಮೂಲದ ಮುಝಕೀರ್ ಅಹ್ಮದ್ ಫಕಿ ಅಹ್ಮದ್ ಆರೋಪಿ. ಕರೆನ್ಸಿಗಳನ್ನು ವಿದೇಶಕ್ಕೆ ಕಳ್ಳಸಾಗಣೆಗೆ ಯತ್ನಿಸುತ್ತಿದ್ದ ವೇಳೆ ಡಿಪಾರ್ಚ್‌ರ್ ಟರ್ಮಿನಲ್‌ನಲ್ಲಿ ಸಿಕ್ಕಿಬಿದ್ದಿದ್ದಾನೆ. ಗುಪ್ತಚರ ಮೂಲದ ಖಚಿತ ಮಾಹಿತಿಯಂತೆ ಅಧಿಕಾರಿ ತಪಾಸಣೆಗೆ ಒಳಪಡಿಸಿದಾಗ ಆರೋಪಿ ಒಳ ವಸ್ತ್ರದಲ್ಲಿ ಪೌಂಡ್ ಸ್ಟರ್ಲಿಂಗ್, ಡಾಲರ್, ಕುವೈತ್ ದಿನಾರ್ ನೋಟುಗಳನ್ನು ಬಚ್ಚಿಟ್ಟುಕೊಂಡಿರುವುದು ಪತ್ತೆಯಾಗಿದೆ. ಮಂಗಳೂರಿನ ದುಬೈಗೆ ತೆರಳುವ ಉದ್ದೇಶದಿಂದ ನಿಲ್ದಾಣಕ್ಕೆ ಬಂದಿದ್ದ.

    ನೋಟುಗಳನ್ನು ವಿದೇಶಕ್ಕೆ ತೆಗೆದುಕೊಂಡು ಹೋಗುತ್ತಿರುವುದಕ್ಕೆ ಆತನಲ್ಲಿ ಯಾವುದೇ ದಾಖಲೆಗಳು ಇರಲಿಲ್ಲ. ವಿದೇಶಿ ನೋಟುಗಳ ಕಳ್ಳಸಾಗಣೆಗೆ ಸಂಬಂಧಿಸಿ ಇತ್ತೀಚಿನ ದಿನಗಳಲ್ಲಿ ಕಸ್ಟಮ್ಸ್ ಅಧಿಕಾರಿಗಳು ದಾಖಲಿಸಿದ ಮೊದಲ ಪ್ರಕರಣ ಇದಾಗಿದ್ದು, ತನಿಖೆ ಮುಂದುವರಿದಿದೆ. ಕಸ್ಟಮ್ ಉಪ ಆಯುಕ್ತ ಅವಿನಾಶ್ ಕಿರಣ್ ರೋಂಗಾಲಿ, ಅಧೀಕ್ಷಕರಾದ ರಾಕೇಶ್ ಮತ್ತು ವಿಕಾಸ್ ನೇತೃತ್ವದ ತಂಡ ಕಾರ್ಯಾಚರಣೆ ನೇತೃತ್ವ ವಹಿಸಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts