More

    4 ಬಾರಿ ಕರೆ ಮಾಡಿದರೂ ಆಪ್ತನ ಕರೆ ಸ್ವೀಕರಿಸಲಿಲ್ಲ ದೀದಿ! ಇಡಿ ವಶದಲ್ಲಿರುವ ಪಾರ್ಥ ಚಟರ್ಜಿ ಕಂಗಾಲು

    ಕೋಲ್ಕತ್ತಾ: ಶಿಕ್ಷಕರ ನೇಮಕಾತಿ ಹಾಗೂ ಆಪ್ತೆಯ ಮನೆಯಲ್ಲಿ ದೊರೆತ ಕೋಟ್ಯಾಂತರ ರೂಪಾಯಿಗಳ ದೊರೆತ ಪ್ರಕರಣಕ್ಕೆ ಸಂಬಂಧಿಸಿದಂತೆ  ತನಿಖೆ ಕೈಗೊಂಡಿರುವ ಜಾರಿ ನಿರ್ದೇಶನಾಲಯ ಪಶ್ಚಿಮ ಬಂಗಾಳದ ಕೈಗಾರಿಕೆ ಮತ್ತು ವಾಣಿಜ್ಯ ಸಚಿವರಾಗಿದ್ದ ಪಾರ್ಥ ಚಟರ್ಜಿಯನ್ನು ಕಳೆದ ಶನಿವಾರ ಬಂಧಿಸಿದೆ. ಸದ್ಯ ಮಮತಾ ಅವರ ಆಪ್ತರಾಗಿರುವ ಚಟರ್ಜಿ ಮುಖ್ಯಮಂತ್ರಿಗೆ ಕರೆ ಮಾಡಿದ್ದು,ಅತ್ತಲಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದು ಚಟರ್ಜಿಗೆ ಮತ್ತಷ್ಟು ಸಂಕಷ್ಟವನ್ನು ತಂದೊಡ್ಡಿದೆ.

    ವಿಶೇಷವೆಂದರೆ ಬಂಧನಕ್ಕೊಳಗಾಗಿರುವ ಪಾರ್ಥ ಸಾರಥಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಪ್ತರಲ್ಲಿ ಒಬ್ಬರು. ಇದೇ ಭರವಸೆ ಮೇಲೆ ಬಂಧನಕ್ಕೊಳಗಾಗಿರುವ ಸಚಿವ ಈಗ ಇಡಿ ವಶದಿಂದ ಹೊರಬರಲು ಯತ್ನಿಸಿ ವಿಫಲರಾಗಿದ್ದಾರೆ. ಇದಕ್ಕಾಗಿಯೇ ಮಮತಾ ಬ್ಯಾನರ್ಜಿ ಅವರನ್ನು 4 ಬಾರಿ ಕರೆ ಮಾಡಿದ್ದು, ಒಮ್ಮೆಯೂ ಮುಖ್ಯಮಂತ್ರಿ ಕರೆ ಸ್ವೀಕರಿಸಿಲ್ಲ ಎನ್ನಲಾಗಿದೆ. ಕಳೆದ ರಾತ್ರಿ 2.30 ರಿಂದ ಮುಂಜಾನೆ ವರೆಗೂ ನಾಲ್ಕು ಬಾರಿ ಕರೆ ಮಾಡಿದ್ದಾರಂತೆ ಆದರೆ ಮುಖ್ಯಮಂತ್ರಿ ಒಂದೂ ಕರೆಗೂ ಉತ್ತರಿಸಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ಸಿಎಂ ಆಪ್ತನಾಗಿರುವ ತನಗೆ ಈ ಪ್ರಕರಣದಿಂದ ಬೇಗ ಮುಕ್ತಿ ಸಿಗಬಹುದು ಎಂದುಕೊಂಡಿದ್ದ ಚಟರ್ಜಿಗೆ ಈಗ ಭ್ರಮನಿರಸನವಾಗಿದೆ.

    ಸಾಕ್ಷ್ಯ ಸಮೇತ ಬಂಧನಕ್ಕೊಳಗಾಗಿರುವುದರಿಂದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಪಾರ್ಥ ಚಟರ್ಜಿ ಪ್ರಕರಣದಲ್ಲಿ ತಲೆ ಹಾಕಿಲ್ಲ. ಇದರಲ್ಲಿ ಏನಾದರೂ ಹೇಳಿಕೆ ನೀಡಿದರೂ, ಅದು ಜನರ ಕೆಂಗಣ್ಣಿಗೆ ಗುರಿಯಾಗಬಹುದೆಂಬ ಮುನ್ನೆಚ್ಚರಿಕೆಯಾಗಿ ಟಿಎಂಸಿ ಸರ್ಕಾರದ ಯಾವೊಬ್ಬ ಸಚಿವರೂ ಈ ಬಗ್ಗೆ ಬಾಯಿಬಿಟ್ಟಿಲ್ಲ. ಸದ್ಯ ಇಡಿ ತನಿಖೆ ಎದುರಿಸುತ್ತಿರುವ ಪಾರ್ಥ ಚಟರ್ಜಿ ಮಾತ್ರ ಸಿಎಂ ಸಹಾಯ ಮಾಡುವರೆಂಬ ಭ್ರಮೆಯಿಂದ ಹೊರಬಂದಿದ್ದಾರೆ.  ತನಿಖಾ ಹಂತದಲ್ಲಿರುವ ಈ ಪ್ರಕರಣ ಎಲ್ಲಿ ಸಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.

    ಚಟರ್ಜಿ ಪ್ರಸ್ತುತ ಕೈಗಾರಿಕೆ ಮತ್ತು ವಾಣಿಜ್ಯ ಸಚಿವರಾಗಿದ್ದು, ಈ ಹಿಂದೆ ಶಿಕ್ಷಣ ಸಚಿವರಾಗಿದ್ದಾಗ ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗದಿಂದ (ಡಬ್ಲ್ಯುಬಿಎಸ್‌ಎಸ್‌ಸಿ) ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಅಕ್ರಮ ನೇಮಕಾತಿಗಳನ್ನು ನಡೆಸಿರುವ ಗಂಭೀರ ಆರೋಪ ಕೇಳಿಬಂದಿದೆ. ಅರ್ಪಿತಾ ಮುಖರ್ಜಿ ಅಲ್ಲದೆ, ಬಂಗಾಳದ ಶಿಕ್ಷಣ ಸಚಿವ ಪರೇಶ್​ ಸಿ ಅಧಿಕಾರಿ ಮತ್ತು ಶಾಸಕ ಮಾಣಿಕ್​ ಭಟ್ಟಾಚಾರ್ಯ ಸೇರಿದಂತೆ ಇತರರ ಮನೆಗಳ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. (ಏಜೆನ್ಸೀಸ್​)

    ಆಪ್ತೆಯ ಮನೆಯಲ್ಲಿ 20 ಕೋಟಿ ನಗದು ಪತ್ತೆ: ಇಡಿ ಅಧಿಕಾರಿಗಳಿಂದ ಬಂಗಾಳ ಸಚಿವನ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts