More

    ‘ಗ್ಯಾಂಗ್​​ಸ್ಟರ್​ ವಿಕಾಸ್​ ದುಬೆ ಬಂಧನದ ಬಗ್ಗೆಯೇ ಅನುಮಾನ…’

    ಲಖನೌ: ಕಾನ್ಪುರದಲ್ಲಿ ಎಂಟು ಪೊಲೀಸರನ್ನು ಹತ್ಯೆ ಮಾಡಿದ ಗ್ಯಾಂಗ್​ಸ್ಟರ್​ ವಿಕಾಸ್​ ದುಬೆಯನ್ನು ಇಂದು ಮಧ್ಯಪ್ರದೇಶದ ಪೊಲೀಸರು ಉಜ್ಜಯಿನಿಯ ಮಹಾಕಾಳ ದೇವಸ್ಥಾನದಲ್ಲಿ ಬಂಧಿಸಿದ್ದಾರೆ.

    ಈಗ ಇದರ ಬಗ್ಗೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್​ ಯಾದವ್​ ಅನುಮಾನ ವ್ಯಕ್ತಪಡಿಸಿದ್ದಾರೆ. ವಿಕಾಸ್​ ದುಬೆಯನ್ನು ನಿಜಕ್ಕೂ ಬಂಧಿಸಲಾಗಿದೆಯೋ ಅಥವಾ ಅವನೇ ಬಂದು ಶರಣಾಗಿದ್ದಾನೋ ಎಂದು ಪ್ರಶ್ನಿಸಿದ್ದಾರೆ.

    ಕಾನ್ಪುರ ಪೊಲೀಸ್​ ಎನ್​​ಕೌಂಟರ್​ ಆರೋಪಿ ವಿಕಾಸ್​ ದುಬೆ ಇದೀಗ ಪೊಲೀಸ್ ಕಸ್ಟಡಿಯಲ್ಲಿದ್ದಾನೆಂಬ ಸುದ್ದಿ ನೋಡಿದೆ. ಆದರೆ ದುಬೆಯನ್ನು ಅರೆಸ್ಟ್​ ಮಾಡಲಾಗಿದೆಯೋ ಅಥವಾ ಅವನೇ ಬಂದು ಶರಣಾಗಿದ್ದಾನೋ ಎಂಬುದನ್ನು ಉತ್ತರ ಪ್ರದೇಶ ಸರ್ಕಾರ ಸ್ಪಷ್ಟಪಡಿಸಬೇಕು. ಹಾಗೇ ಆತನ ಕಾಲ್​ ಡಿಟೇಲ್​ ರೆಕಾರ್ಡ್​​ಗಳನ್ನೂ ಸಾರ್ವಜನಿಕರ ಎದುರು ಪ್ರಸ್ತುತ ಪಡಿಸಬೇಕು. ಹಾಗೇ ವಿಕಾಸ್​ ದುಬೆಗೆ ಯಾರ ಬೆಂಬಲವಿದೆ ಎಂಬುದನ್ನೂ ಬಹಿರಂಗ ಮಾಡಬೇಕು ಎಂದು ಅಖಿಲೇಶ್​ ಯಾದವ್​ ಒತ್ತಾಯಿಸಿದ್ದಾರೆ. ಇದನ್ನೂ ಓದಿ:  ಭಾರತವಷ್ಟೇ ಅಲ್ಲ, ಭಾರತದ ಔಷಧದ ಮೇಲೂ ಅತೀವ ನಂಬಿಕೆ ಬ್ರೆಜಿಲ್​ ಅಧ್ಯಕ್ಷರಿಗೆ…!

    ವಿಕಾಸ್​ ದುಬೆ ಪೊಲೀಸರು ತನ್ನನ್ನು ಕೊಲ್ಲುತ್ತಾರೆ ಎಂಬ ಭಯದಿಂದ ಶರಣಾಗಿದ್ದಾನೆ ಎಂಬ ಸುದ್ದಿಯೂ ವ್ಯಾಪಕವಾಗಿ ಹರಡುತ್ತಿದೆ. ಈ ಬೆನ್ನಲ್ಲೇ ಅಖಿಲೇಶ್​ ಯಾದವ್​ ಕೂಡ ಆತನ ಬಂಧನದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

    ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯವರು ಕೂಡ ಪೊಲೀಸ್​ ಎನ್​ಕೌಂಟರ್​ ಪ್ರಕರಣವನ್ನು ಉತ್ತರ ಪ್ರದೇಶ ಸರ್ಕಾರ ಸರಿಯಾಗಿ ನಿರ್ವಹಿಸಲಿಲ್ಲ. ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಟ್ವೀಟ್​ ಮೂಲಕ ಆಗ್ರಹಿಸಿದ್ದಾರೆ. (ಏಜೆನ್ಸೀಸ್​)

    ಕರೊನಾ ಸೋಂಕಿತರ ಪತ್ತೆಗೆ ನಿಯೋಜಿತಗೊಂಡ ಶಿಕ್ಷಕರಿಗಿಲ್ಲ ಸುರಕ್ಷತಾ ಕಿಟ್, ಆನ್‌ಲೈನ್ ಮಾಹಿತಿಗೆ ನೆಟ್‌ವರ್ಕ್ ಸಮಸ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts