More

    ಟಿಪ್ಪುವಿನ ಪೇಟ ವಿರೂಪದ ಚಿತ್ರ ಪೋಸ್ಟ್

    ಮದ್ದೂರು: ಇನ್ಸ್ಟಾಗ್ರಾಂನಲ್ಲಿ ಹಂದಿ ಚಿತ್ರಕ್ಕೆ ಟಿಪ್ಪುವಿನ ಪೇಟ ಹೋಲುವ ಚಿತ್ರವನ್ನು ಹಾಕಿ ಪೋಸ್ಟ್ ಮಾಡಿದ ಆರೋಪದಡಿ ಮದ್ದೂರು ಪೊಲೀಸರು ಬುಧವಾರ ಸಂಜೆ ಯುವಕನನ್ನು ಬಂಧಿಸಿ ವಿಚಾರಣೆ ನಡೆಸಿದರು.

    ಪಟ್ಟಣದ ಚನ್ನೇಗೌಡ ಬಡಾವಣೆಯ ಸ್ವಾಮಿ ಬಂಧಿತ ಯುವಕ. ಈತ ತನ್ನ ಇನ್ಸ್ಟಾಗ್ರಾಂ ನಲ್ಲಿ ಹಂದಿ ಚಿತ್ರಕ್ಕೆ ಟಿಪ್ಪುವಿನ ಪೇಟ ಹೋಲುವ ಚಿತ್ರ ಅಂಟಿಸಿ ಪೋಸ್ಟ್ ಮಾಡಿದ್ದಾನೆ ಎಂದು ಆರೋಪಿಸಿ ಮುಸ್ಲಿಂ ಮುಖಂಡರಾದ ಫೈರೋಜ್ ಹಾಗೂ ಆದಿಲ್ ಖಾನ್ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಸ್ವಾಮಿಯನ್ನು ಬಂಧಿಸಿ ಠಾಣೆಗೆ ಕರೆತಂದು ವಿಚಾರಣೆಗೆ ಒಳಪಡಿಸಿದ್ದಾರೆ.

    ಪ್ರತಿಭಟನೆ: ಯುವಕನ ಬಂಧನ ವಿಷಯ ತಿಳಿದ ಹಿಂದುಪರ ಸಂಘಟನೆ ಮುಖಂಡರು ಪೊಲೀಸ್ ಠಾಣೆಗೆ ಆಗಮಿಸಿ ಸಿಪಿಐ ಶಿವಕುಮಾರ್ ಅವರೊಂದಿಗೆ ಮಾತುಕತೆ ನಡೆಸಿದರು. ‘ಸ್ವಾಮಿ ಯಾವುದೇ ತಪ್ಪು ಮಾಡಿಲ್ಲ. ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಹಿಂದು ಪರ ಸಂಘಟನೆಯ ಬಾಲು, ರವಿ, ನೈದಿಲೆ ಚಂದ್ರು, ಬಾಬು, ಗೌತಮ್, ಅಭಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts