More

    ಆರ್ಥಿಕ ಸ್ಥಿತಿಗತಿ ಅಳೆಯುವ ದಿಕ್ಸೂಚಿ ಬಜೆಟ್

    ಮದ್ದೂರು: ಬಜೆಟ್‌ಗಳು ಪ್ರತಿಯೊಂದು ಸರ್ಕಾರ ಆರ್ಥಿಕ ಸ್ಥಿತಿಗತಿಯನ್ನು ಅಳೆಯುವ ದಿಕ್ಸೂಚಿ ಎಂದು ಮದ್ದೂರು ಮಹಿಳಾ ಪದವಿ ಕಾಲೇಜಿನ ಅರ್ಥಶಾಸ್ತ್ರ ಪ್ರಾಧ್ಯಾಪಕ ಮಾದೇಗೌಡ ಅಭಿಪ್ರಾಯಪಟ್ಟರು.

    ತಾಲೂಕಿನ ಕೊಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗ ಹಾಗೂ ಐಕ್ಯೂಎಸಿ ವತಿಯಿಂದ ಏರ್ಪಡಿಸಿದ್ದ ‘2024-25ರ ಬಜೆಟ್ ಮುನ್ನೋಟಗಳು’ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು. ಬಜೆಟ್ ತಯಾರಿಸುವ ಬಗ್ಗೆ, ಅನುಸರಿಸುವ ಮಾರ್ಗಸೂಚಿಗಳು, ಅಂಕಿ-ಅಂಶಗಳ ಸಂಗ್ರಹ, ಇಲಾಖಾವಾರು ಮುಖ್ಯಸ್ಥರ ಸಭೆ, ಮೊದಲಾದ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು. 2024-25ರ ಬಜೆಟ್ ಮುನ್ನೋಟದ ಬಗ್ಗೆ ಬೆಳಕು ಚೆಲ್ಲಿದ ಅವರು, ಅದರಲ್ಲಿನ ಸಾಧಕ-ಬಾಧಕಗಳನ್ನು ವಿದ್ಯಾರ್ಥಿಗಳಿಗೆ ಅಂಕಿ-ಅಂಶಗಳ ಸಮೇತ ಮನದಟ್ಟು ಮಾಡಿಕೊಟ್ಟರು.

    ಪ್ರಾಸ್ತಾವಿಕವಾಗಿ ಮಾತನಾಡಿದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಜಿ.ಯಶೋದಾ ಅವರು, ಮಾನವನ ದೇಹಕ್ಕೆ ರಕ್ತ, ಮಾಂಸಗಳು ಎಷ್ಟು ಮುಖ್ಯವೋ ದೇಶದ ಆರ್ಥಿಕ ಅಭಿವೃದ್ಧಿಗೆ ಬಜೆಟ್ ಕೂಡ ಅಷ್ಟೇ ಮುಖ್ಯ ಎಂದು ಬಣ್ಣಿಸಿದರು. ಬಜೆಟ್ ನಡೆದು ಬಂದ ಹಾದಿಯನ್ನು ವಿದ್ಯಾರ್ಥಿಗಳಿಗೆ ಸಂಕ್ಷಿಪ್ತವಾಗಿ ವಿವರಿಸಿದರು. ಪ್ರಾಂಶುಪಾಲ ಡಾ.ಅಣ್ಣಯ್ಯ ತೈಲೂರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಐಕ್ಯೂಎಸಿ ಸಂಚಾಲಕ ಡಾ.ಉಮೇಶ್, ಅರ್ಥಶಾಸ್ತ್ರ ಉಪನ್ಯಾಸಕ ಡಾ. ರಾಜ ನಾಯಕ್ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts