More

    ಕಳ್ಳಬೇಟೆ ಪ್ರಕರಣದ ಆರೋಪಿ ಬಂಧನ

    ಗುಂಡ್ಲುಪೇಟೆ: ವನ್ಯ ಜೀವಿಗಳ ಕಳ್ಳಬೇಟೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದವನನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ್ದ ನಾಡ ಬಂದೂಕನ್ನು ವಶಕ್ಕೆ ಪಡೆದಿದ್ದಾರೆ.

    ತಾಲೂಕಿನ ಅಣ್ಣೂರು ಕೇರಿ ಗ್ರಾಮದ ಮಹೇಶ್ ಅಲಿಯಾಸ್ ಮುತ್ತಪ್ಪಿ(23) ಬಂಧಿತ ಆರೋಪಿ. ಕಳೆದ ತಿಂಗಳು ಗೋಪಾಲಸ್ವಾಮಿ ಬೆಟ್ಟ ವಲಯದ ಹಗ್ಗದಹಳ್ಳ ಬಳಿ ಮೂರು ಜಿಂಕೆಗಳನ್ನು ಮುತ್ತಪ್ಪಿ ಕೊಂದು ಪರಾರಿಯಾಗಿದ್ದ. ಬಳಿಕ ಆತನ ಪತ್ತೆಗಾಗಿ ಬಲೆ ಬೀಸಲಾಗಿತ್ತು. ಬಫರ್ ವಲಯ ಆರ್‌ಎಫ್‌ಒ ಡಾ.ಲೋಕೇಶ್ ಹಾಗೂ ಎಸ್‌ಟಿಪಿ ಎಫ್ ಸಿಬ್ಬಂದಿ ಬಂಧಿಸಿ, ನ್ಯಾಯಾಲಯದ ಆದೇಶದಂತೆ ನ್ಯಾಯಾಂಗ ಬಂಧನಕ್ಕೆ ನೀಡಲಾಯಿತು.

    ಮೂಲೆಹೊಳೆ ಆರ್‌ಎಫ್‌ಒ ಎನ್.ಪಿ.ಮಹದೇವ, ಎಸಿಎಫ್ ಪರಮೇಶ್, ಎಸ್‌ಟಿಪಿ ಎಫ್ ಸಿಬ್ಬಂದಿ ಇದ್ದರು.

    ಅಕ್ರಮ ಬಂದೂಕುಗಳ ಪತ್ತೆಗೆ ಪೊಲೀಸರಿಗೆ ಮನವಿ: ತಾಲೂಕಿನ ಅಣ್ಣೂರುಕೇರಿ, ಕೋಡಹಳ್ಳಿ, ಭೀಮನಬೀಡು, ಬನ್ನಿತಾಳಪುರ ಮುಂತಾದ ಗ್ರಾಮಗಳಲ್ಲಿ ನಾಡಬಂದೂಕು ತಯಾರಿಸಿ ವನ್ಯಜೀವಿಗಳ ಬೇಟೆಗೆ ಬಳಸಲಾಗುತ್ತಿದೆ. ಹೀಗಾಗಿ ಬಂದೂಕುಗಳನ್ನು ಜಪ್ತಿ ಮಾಡಬೇಕಿದೆ. ಅಲ್ಲದೆ ಅಕ್ರಮವಾಗಿ ಬಂದೂಕು ಹೊಂದಿರುವವರ ಮೇಲೆ ಅರಣ್ಯ ಇಲಾಖೆ ದಾಳಿ ನಡೆಸುವ ಸಂದರ್ಭದಲ್ಲಿ ಸೂಕ್ತ ಭದ್ರತೆ ನೀಡುವಂತೆ ಪೊಲೀಸರಿಗೆ ಮನವಿ ಮಾಡಲಾಗಿದೆ ಎಂದು ಆರ್‌ಎಫ್‌ಒ ಡಾ.ಲೋಕೇಶ್ ವಿಜಯವಾಣಿಗೆ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts