More

    ಏಳು ದಿನಗಳಲ್ಲಿ ಅನುರಾಗ್ ಬಂಧನವಾಗದಿದ್ದರೆ ಪ್ರತಿಭಟನೆ … ಅಠಾವಳೆ ಎಚ್ಚರಿಕೆ

    ಮುಂಬೈ: ಬಾಲಿವುಡ್​ ನಿರ್ದೇಶಕ ಅನುರಾಗ್​ ವಿರುದ್ಧ ವಿರುದ್ಧ ಸೂಕ್ತ ಆ್ಯಕ್ಷನ್​ ತೆಗೆದುಕೊಳ್ಳಿದಿದ್ದರೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಅವರ ಮೇಲೆ ಅತ್ಯಾಚಾರದ ಆರೋಪ ಹೊರಿಸಿರುವ ನಟಿ ಪಾಯಲ್​ ಘೋಶ್​ ಸೋಮವಾರವಷ್ಟೇ ಬೆದರಿಕೆ ಹಾಕಿದ್ದರು.

    ಈಗ ಅವರ ಬೆನ್ನಿಗೆ ನಿಂತಿರುವ ಕೇಂದ್ರ ಸಚಿವ ರಾಮದಾಸ್​ ಅಠಾವಳೆ ಸಹ ಅನುರಾಗ್​ ಕಶ್ಯಪ್​ ಅವರನ್ನು ಏಳು ದಿನಗಳೊಳಗಾಗಿ ಬಂಧಿಸುವುದಕ್ಕೆ ಆಗ್ರಹಿಸಿದ್ದಾರೆ. ಇಲ್ಲವಾದರೆ ಮುಂಬೈನಲ್ಲಿ ಪ್ರತಿಭಟನೆ ಎಚ್ಚರಿಕೆ ನೀಡಿದ್ದಾರೆ.

    ಇದನ್ನೂ ಓದಿ: ಅಲ್ಲು ಅರ್ಜುನ್​ ‘ಪುಷ್ಪ’ ಚಿತ್ರದಲ್ಲಿ ಡಾಲಿ ಧನಂಜಯ ಬದಲಿಗೆ ಈ ಖ್ಯಾತ ನಟ ವಿಲನ್

    2013ರಲ್ಲಿ ಅನುರಾಗ್​ ಕಶ್ಯಪ್​ ತನನ್ನು ವರ್ಸೋವಾದ ತಮ್ಮ ಆಫೀಸಿಗೆ ಕರೆಸಿಕೊಂಡು ಬಹಳ ಕೆಟ್ಟದಾಗಿ ನಡೆಸಿಕೊಂಡಿದ್ದರು ಎಂದು ಪಾಯಲ್​ ಇತ್ತೀಚೆಗಷ್ಟೇ ವರ್ಸೋವಾ ಪೊಲೀಸ್​ ಸ್ಟೇಶನ್​ನಲ್ಲಿ ದೂರು ದಾಖಲಿಸಿದ್ದರು. ಅಷ್ಟೇ ಅಲ್ಲದೆ, ಡ್ರಗ್ಸ್​​ ಆಕ್ಟ್​ನಡಿ ಅನುರಾಗ್​ ಕಶ್ಯಪ್​ ವಿರುದ್ಧ ಪಾಯಲ್ ಇನ್ನೊಂದು ಕೇಸನ್ನು ದಾಖಲಿಸಿದ್ದರು. ಆದರೆ, ವರ್ಸೋವಾ ಪೊಲೀಸರು ಇನ್ನೂ ಅನುರಾಗ್​ ಅವರನ್ನು ಕರೆದು ವಿಚಾರಣೆ ಮಾಡಿಲ್ಲ.

    ಈ ಕುರಿತು ಮಾತನಾಡಿದ್ದ ಪಾಯಲ್​, ಅನುರಾಗ್​ ವಿರುದ್ಧ ದೂರು ಕೊಟ್ಟು ಒಂದು ವಾರವಾದರೂ ಅವರನ್ನು ಪೊಲೀಸರು ಕರೆಸಿ ವಿಚಾರಣೆ ನಡೆಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು. ಅನುರಾಗ್​ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಉಪವಾಸ ಸತ್ಯಾಗ್ರಹ ಸಹ ಮಾಡುವುದಾಗಿ ಹೇಳಿದ್ದರು. ಈ ಸಂಬಂಧ, ಅವರು ಮುಂಬೈನಲ್ಲಿ ಇಂದು ಕೇಂದ್ರ ಸಚಿವ ರಾಮದಾಸ್​ ಅಠಾವಳೆ ಅವರನ್ನು ಭೇಟಿ ಮಾಡಿ, ತಮ್ಮ ಮೇಲಾಗಿರುವ ಅನ್ಯಾಯದ ಬಗ್ಗೆ ಮಾತನಾಡಿದ್ದಾರೆ.

    ಇದನ್ನೂ ಓದಿ: ಕರೊನಾ ಎಫೆಕ್ಟ್​: ತರಕಾರಿ ಮಾರ್ತಿದ್ದಾರೆ ‘ಬಾಲಿಕಾ ವಧು’ ನಿರ್ದೇಶಕರು

    ಈ ಕುರಿತು ಮಾತನಾಡಿರುವ ಕೇಂದ್ರ ಸಚಿವರು, ಪಾಯಲ್​ಗೆ ತಮ್ಮ ಸಂಪೂರ್ಣ ಸಹಾಯಹಸ್ತವನ್ನು ಚಾಚಿದ್ದಾರೆ. ಅಷ್ಟೇ ಅಲ್ಲ, ಮುಂಬೈಗೆ ಏಳು ದಿನಗಳ ಗಡುವು ನೀಡಿರುವ ಅವರು, ಏಳು ದಿನಗಳೊಳಗಾಗಿ ಅನುರಾಗ್​ ಕಶ್ಯಪ್​ ಅವರನ್ನು ಬಂಧಿಸದಿದ್ದರೆ, ಮುಂಬೈನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಹೇಳಿದ್ದಾರೆ.

    ಇದುವರೆಗೂ ಅನುರಾಗ್​ ಅವರಿಂದ ದೂರವೇ ಉಳಿದಿದ್ದ ಮುಂಬೈ ಪೊಲೀಸರು, ಈಗಲಾದರೂ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರಾ ಮತ್ತು ಅನುರಾಗ್​ ಅವರನ್ನು ಕರೆಸಿ ವಿಚಾರಣೆ ನಡೆಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

    ಜಗತ್ತಿನ ಅತ್ಯಂತ ಅಸಮರ್ಥ ಮುಖ್ಯಮಂತ್ರಿ ಯಾರು ಎಂದು ಹೇಳಿದ ಕಂಗನಾ ರಣಾವತ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts