More

    ಆರೋಗ್ಯ ಅಧಿಕಾರಿಯಿಂದ ಬೆತ್ತದ ರುಚಿ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ 

    ಬೆಂಗಳೂರು: ಅನಗತ್ಯವಾಗಿ ರಸ್ತೆಯಲ್ಲಿ ತಿರುಗುತ್ತಿದ್ದ ಸಾರ್ವಜನಿಕರ ಮೇಲೆ ಸಿಟ್ಟಿಗೆದ್ದ ಹೊಸಕೋಟೆ ತಾಲೂಕು ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ಬೆತ್ತದ ರುಚಿ ತೋರಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಹೊಸಕೋಟೆಯ ಬೈಲನರಸಾಪುರ ಕೆಂಪುವಲಯವಾಗಿ ಗುರುತಿಸಿಕೊಂಡಿರುವುದರಿಂದ ಜಿಲ್ಲಾಡಳಿತ ಈ ಭಾಗದಲ್ಲಿ ಹೆಚ್ಚಿನ ನಿಗಾವಹಿಸಿದೆ. ಈಗಾಗಲೇ ಇಡೀ ಗ್ರಾಮ ಸೇರಿ ಸುತ್ತಮುತ್ತಲ ಪ್ರದೇಶಗಳಲ್ಲಿ ಲಾಕ್‌ಡೌನ್ ಬಿಗಿಗೊಳಿಸಲಾಗಿದೆ. ಹಗಲಿರುರು ಪೊಲೀಸ್ ಸಿಬ್ಬಂದಿ ಪಹರೆ ತಿರುಗುತ್ತಿದ್ದರೂ, ಕೆಲವು ಮಂದಿ ಅನವಶ್ಯಕವಾಗಿ ವಾಹನಗಳಲ್ಲಿ ತಿರುಗುತ್ತಿರುವುದು ಆರೋಗ್ಯಾಧಿಕಾರಿಯೊಬ್ಬರಿಗೆ ಕೋಪ ತರಿಸಿದೆ.

    ಇದರಿಂದ ಬೇಸತ್ತ ಅಧಿಕಾರಿ ಕೈಯಲ್ಲಿ ಬೆತ್ತ ಹಿಡಿದು ಬುಧವಾರ ಬ್ಯಾಟಿಂಗ್ ಶುರುಮಾಡಿದ್ದಾರೆ.

    ವಾಹನಗಳ ಪಂಕ್ಚರ್: ಪಾಸ್ ಇಲ್ಲದೆ, ಸಕಾರಣವೂ ಇಲ್ಲದೆ ಜಾಲಿರೈಡ್‌ನಂತೆ ದ್ವಿಚಕ್ರವಾಹನಗಳಲ್ಲಿ ಸಂಚರಿಸುತ್ತಿದ್ದ ಕೆಲವು ಸಾರ್ವಜನಿಕರಿಗೆ ್ದ ಬೆತ್ತದ ರುಚಿ ತೋರಿಸಿದ್ದಾರೆ. ಅಲ್ಲದೆ ಅಂಥ ವಾಹನಗಳನ್ನು ಪಂಕ್ಚರ್ ಮಾಡಿ ವಾಹನಗಳನ್ನು ತಳ್ಳಿಕೊಂಡು ಹೋಗುವ ಶಿಕ್ಷೆ ನೀಡಿದ್ದಾರೆ. ಇಲಾಖೆ ವಾಹನದಲ್ಲಿ ಗಸ್ತು ತಿರುಗುತ್ತಾ ಸಾರ್ವಜನಿಕರಿಗೆ ಎಚ್ಚರಿಕೆ ನೀಡುತ್ತಿರುವ ದೃಶ್ಯ ವೈರಲ್ ಆಗಿದೆ. ಅಧಿಕಾರಿಯ ಈ ಕ್ರಮಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಮತ್ತೆ ಅನೇಕರು ಅಧಿಕಾರಿ ಕೋಲು ಹಿಡಿದ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಸೂಕ್ಷ್ಮ ವಲಯ: ಬೈಲನರಸಾಪುರ ಸೂಕ್ಷ್ಮ ವಲಯವಾಗಿದ್ದು, ಕರೊನಾ ನಿಯಂತ್ರಣಕ್ಕೆ ಇಲಾಖೆ ಸಾಕಷ್ಟು ಬೆವರು ಹರಿಸುತ್ತಿದೆ. ಆದರೂ ಕೆಲವರು ನಿಯಮ ಉಲ್ಲಂಸುವುದು ಕಂಡುಬರುತ್ತಿದೆ. ಇವರನ್ನು ನಿಯಂತ್ರಿಸಲು ಅಧಿಕಾರಿ ಬೆತ್ತ ಹಿಡಿದ್ದಾರೆ. ಅಧಿಕಾರಿಗೆ ತಿಳಿಹೇಳಲಾಗಿದೆ. ಅನಗತ್ಯವಾಗಿ ತಿರುಗಾಡದಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಜುಳಾದೇವಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts