More

    ಪಾಕ್​ ಉಗ್ರರ ಶಸ್ತ್ರಾಸ್ತ್ರ ಕಳ್ಳಸಾಗಣೆ ಯತ್ನ ವಿಫಲ: ಭಾರತೀಯ ಸೇನೆಯ ಸ್ಫೋಟಕ ಕಾರ್ಯಾಚರಣೆ!

    ಶ್ರೀನಗರ: ಪಾಕಿಸ್ತಾನ ಸೇನಾ ನೆರವಿನಿಂದ ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಮಾಡುವ ಪಾಕ್​ ಉಗ್ರರ ಪ್ರಯತ್ನವನ್ನು ಭಾರತೀಯ ಸೇನೆ ದಕ್ಷಿಣ ಕಾಶ್ಮೀರದ ಕೀರನ್​ ವಲಯದಲ್ಲಿ ಶನಿವಾರ ವಿಫಲಗೊಳಿಸಿದೆ.

    ಜಾಗತಿಕವಾಗಿ ಉಗ್ರರ ಚಟುವಟಿಕೆಯ ಮೇಲೆ ಸದಾ ಕಣ್ಣಿಡುವ ಹಣಕಾಸು ಕ್ರಿಯಾ ಕಾರ್ಯಪಡೆ (ಎಫ್​ಎಟಿಎಫ್​) ಈ ತಿಂಗಳಲ್ಲಿ ಸಭೆ ಆಯೋಜಿಸಿದ್ದರೂ, ಕ್ಯಾರೆ ಎನ್ನದೇ ಪಾಪಿ ಪಾಕ್​ ಉಗ್ರರಿಗೆ ನೆರವಾಗುವುದನ್ನು ದುಷ್ಕೃತ್ಯವನ್ನು ಮುಂದುವರಿಸಿದೆ.

    ಕೀರನ್​ ವಲಯದಲ್ಲಿ ನಡೆದ ಸೇನಾ ಕಾರ್ಯಾಚರಣೆಯಲ್ಲಿ ನಾಲ್ಕು ಎಕೆ-74 ರೈಫಲ್ಸ್​, 8 ಸ್ಫೋಟಕ ವಸ್ತು, 240 ಎಕೆ ರೈಫಲ್​ ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದ್ದು, ಸೇನಾ ಕಾರ್ಯಾಚರಣೆ ಮುಂದುವರಿದಿದೆ.

    ಇದನ್ನೂ ಓದಿ: ಸಿನಿಮಾದಲ್ಲಿ ಚಾನ್ಸ್​ ಕೊಡಿಸ್ತೀನಿ ಎಂದವ 50ಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿ ಪರಾರಿ!

    ಈ ಬಗ್ಗೆ ಮಾತನಾಡಿರುವ ಚಿನಾರ್​ ಕಾರ್ಫ್ಸ್​ನ ಜಿಒಸಿ ಲೆಫ್ಟಿನೆಂಟ್​ ಜನರಲ್​ ಬಿ.ಎಸ್​. ರಾಜು, ನಮ್ಮ ಪಡೆಗಳು ಕಣ್ಗಾವಲು ಸಾಧನಗಳ ಮೂಲಕ ಪಾಕ್​ನಿಂದ ಶಸ್ತ್ರಾಸ್ತ್ರಗಳ ಕಳ್ಳಸಾಗಣೆಯನ್ನು ಪತ್ತೆಹಚ್ಚಿ, ಯತ್ನವನ್ನು ವಿಫಲಗೊಳಿಸಿದೆ. ಇದು ಪಾಕ್​ ಕುತಂತ್ರವನ್ನು ಮತ್ತೊಮ್ಮೆ ಸಾಬೀತು ಮಾಡಿದೆ. ಪಾಕ್​ ನೀಚ ಬುದ್ಧಿಯ ವಿರುದ್ಧ ಹೋರಾಡಲು ನಮ್ಮ ಸೇನೆ ಸನ್ನದ್ಧ ಸ್ಥಿತಿಯಲ್ಲಿದೆ ಎಂದು ತಿಳಿಸಿದ್ದಾರೆ.

    ಶುಕ್ರವಾರ ರಾತ್ರಿ 8.30ರ ಸುಮಾರಿಗೆ ಗಡಿ ನಿಯಂತ್ರಣ ರೇಖೆಯ ಬಳಿ ಅಳವಡಿಸಲಾಗಿರುವ ಕಣ್ಗಾವಲು ಯಂತ್ರವು ಕಿಶೆನ್​ ಗಂಗಾ ನದಿ (ಕೆಜಿಆರ್​) ದಡದಲ್ಲಿ ಕೆಲ ಚಲನಾವಲನವನ್ನು ಪತ್ತೆಚ್ಚಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಸೇನೆಯು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜತೆ ಜಂಟಿ ಕಾರ್ಯಾಚರಣೆ ನಡೆಸಿ ಉಗ್ರರ ಯತ್ನವನ್ನು ವಿಫಲಗೊಳಿಸಿದೆ.

    ಮತ್ತೆ ರಾತ್ರಿ 10 ಗಂಟೆ ಸುಮಾರಿಗೆ 2 ರಿಂದ 3 ಉ್ರಗರು ನದಿಯ ದಡದಲ್ಲಿ ರೋಪ್​ ಅಳವಡಿಸಿ ಕೆಲ ವಸ್ತುಗಳನ್ನು ಟ್ಯೂಬ್​ನಲ್ಲಿಟ್ಟು ಸಾಗಿಸುವುದನ್ನು ಕಣ್ಗಾವಲು ಯಂತ್ರ ಪತ್ತೆಹಚ್ಚಿತು. ತಕ್ಷಣ ಸ್ಥಳಕ್ಕೆ ತೆರಳಿ ಸೇನೆ, ನಾಲ್ಕು ಎಕೆ-74 ರೈಫಲ್ಸ್​, 8 ಸ್ಫೋಟಕ ವಸ್ತು, 240 ಎಕೆ ರೈಫಲ್​ ಮದ್ದುಗುಂಡುಗಳನ್ನು ವಶಕ್ಕೆ ಪಡೆದಿದೆ. (ಏಜೆನ್ಸೀಸ್​)

    ಮಳೆ ಜತೆಗೆ ಬಿತ್ತು ಚಿನ್ನದ ನಾಣ್ಯಗಳು: ಗುಂಪಾಗಿ‌ ಜಮಾಯಿಸಿದ ಜನರಿಗೆ ಕಾದಿತ್ತು ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts