More

    ಪಾಕಿಸ್ತಾನದ ಸೈನಿಕರಿಗೆ ಮದ್ರಾಸ್ ರೆಜಿಮೆಂಟ್​ನ ಡೆಕ್ಕನ್ ಡೆವಿಲ್ಸ್ ಕಂಡರೆ ಭಯ

    ಚಿಕ್ಕಮಗಳೂರು: ಪಾಕಿಸ್ತಾನದ ಸೈನಿಕರಿಗೆ ಮದ್ರಾಸ್ ರೆಜಿಮೆಂಟ್​ನ ಡೆಕ್ಕನ್ ಡೆವಿಲ್ಸ್ ಕಂಡರೆ ಎಲ್ಲಿಲ್ಲದ ಭಯ ಕಾಡುತ್ತಿತ್ತು ಎಂದು ಕ್ಯಾಪ್ಟನ್ ಇಂದಾವರ ಕೃಷ್ಣೇಗೌಡ ಹೇಳಿದರು.

    ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯೋತ್ಸವ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು.

    ಗಡಿಯಲ್ಲಿ ತಕರಾರು ಬಂದರೆ ಈಗಲೂ ರಕ್ತ ಇಮ್ಮಡಿಯಾಗುತ್ತದೆ. ಈಗಲೂ ಕರೆದರೆ ಸೇನೆಯಲ್ಲಿ ಸೇವೆ ಸಲ್ಲಿಸಲು ಸಿದ್ಧನಾಗಿದ್ದೇನೆ. 18 ತಿಂಗಳು ಕಾರ್ಗಿಲ್ ಯದ್ಧದ ಕರ್ತವ್ಯ ನಿರ್ವಸಿದ್ದು, ಕಾರ್ಗಿಲ್ ಗೆದ್ದ ಸಂಭ್ರಮದಲ್ಲಿ ರಾಷ್ಟ್ರಧ್ವಜ ಹಾರಿಸಲು 1,600 ಮೀಟರ್ ಎತ್ತರದ ಸ್ಥಳಕ್ಕೆ ತೆರಳುವ ತುಡಿತವಿತ್ತು. ಆದರೆ ವಿಶೇಷ ತರಬೇತಿ ಪಡೆದ ಸೈನಿಕರು ರೋಪ್ ಕ್ಲೈಂಬಿಗ್ ಮೂಲಕ ಮಾತ್ರ ಸ್ಥಳಕ್ಕೆ ಹೋಗಬೇಕಾಗಿದ್ದರಿಂದ ಅಲ್ಲಿಗೆ ಹೋಗಲು ಸಾಧ್ಯವಾಗಲಿಲ್ಲ ಎಂದು ವಿಷಾದಿಸಿದರು.

    ಭಾರತದ ಪ್ರಾಂತ್ಯದಿಂದ ಪಾಕಿಸ್ತಾನದ ಸೇನೆಯನ್ನು ಹಿಮ್ಮೆಟ್ಟಿಸಿ ಪಾಕ್ ವಶದಲ್ಲಿದ್ದ ಕಾಶ್ಮೀರದ ಕಾರ್ಗಿಲ್ ಪ್ರಾಂತ್ಯವನ್ನು ಹಿಂಪಡೆಯವಲ್ಲಿ ಭಾರತೀಯ ಸೇನೆ ಯಶಸ್ವಿಯಾದ ದಿನವನ್ನು ಕಾರ್ಗಿಲ್ ವಿಜಯ ದಿವಸ್ ಎಂದು ಆಚರಿಸಲಾಗುತ್ತಿದೆ. ಭಾರತೀಯ ಸೇನೆಯಲ್ಲಿ 30 ವರ್ಷ ಸೇವೆ ಸಲ್ಲಿಸಿದ ಹೆಮ್ಮೆ ನನ್ನದು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts