More

    ಚಾಕು ತೋರಿಸಿ, ಟಾಯ್ಲೆಟ್​ ಪೇಪರ್​ ಕದ್ದ ಕಳ್ಳರ ಗ್ಯಾಂಗ್​: ಇವೆಲ್ಲವೂ ಕೊರೊನಾ ಎಫೆಕ್ಟ್​

    ಹಾಂಗ್​ಕಾಂಗ್​: ಟಾಯ್ಲೆಟ್​ ಪೇಪರ್​ನ್ನು ಅಂಗಡಿಗಳಿಗೆ ಡೆಲಿವರಿ ಮಾಡುವ ವ್ಯಕ್ತಿಗೆ ಚಾಕು ತೋರಿಸಿ ಟಾಯ್ಲೆಟ್​ ಪೇಪರ್​ನ್ನೇ ಕದ್ದಿರುವ ಘಟನೆ ಹಾಂಗ್​ಕಾಂಗ್​ನಲ್ಲಿ ನಡೆದಿದೆ.

    ಚೀನಾದಲ್ಲಿ ಕೊರೊನಾ ವೈರಸ್​ ತನ್ನ ಮೃತ್ಯು ರೂಪ ತೋರಿಸಿರುವುದುರಿಂದಾಗಿ ಅನೇಕ ಕಾರ್ಖಾನೆಗಳು ಮುಚ್ಚಿವೆ. ಟಾಯ್ಲೆಟ್​ ಪೇಪರ್​, ಸ್ಯಾನಿಟರಿ ಪ್ಯಾಡ್​ ಸೇರಿದಂತೆ ಅನೇಕ ವಸ್ತುಗಳ ಕಾರ್ಖಾನೆಗಳು ಮುಚ್ಚಿದ್ದು ಲಭ್ಯವಿರುವ ಸಾಮಾಗ್ರಿಗಳ ಬೆಲೆಯೂ ಗಗನಕ್ಕೇರಿದೆ. ಹೀಗಿರುವಾಗ ಟಾಯ್ಲೆಟ್​ ಪೇಪರನ್ನೇ ಕದಿಯುವ ಪ್ಲ್ಯಾನ್​ನ್ನು ಕಳ್ಳರ ಗುಂಪೊಂದು ಮಾಡಿದೆ.

    ಇಂದು ಬೆಳಗ್ಗೆ ಮೋಂಗ್​ಕಾಕ್​​ನ ಸೂಪರ್​ ಮಾರ್ಕೆಟ್​ ಬಳಿ ಟಾಯ್ಲೆಟ್​ ಪೇಪರ್​ ಡೆಲಿವರಿ ಮಾಡುವ ವ್ಯಕ್ತಿ ಹೋಗುತ್ತಿರುವಾಗ ಮೂರು ಜನ ಕಳ್ಳರ ಗ್ಯಾಂಗ್​ ಆತನನ್ನು ಅಡ್ಡಗಟ್ಟಿದೆ. ಚಾಕು ತೋರಿಸಿ ಆತನ ಬಳಿ ಇದ್ದ ಟಾಯ್ಲೆಟ್​ ಪೇಪರ್​ನ್ನು ಕದ್ದೊಯ್ದಿದೆ. ಸುಮಾರು 130 ಡಾಲರ್​ ಬೆಲೆಯ ಟಾಯ್ಲೆಟ್​ ಪೇಪರ್​​ನ್ನು ಕದ್ದಿರುವುದಾಗಿ ಹೇಳಲಾಗಿದೆ.

    ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದು ಕಳ್ಳರಿಗಾಗಿ ಹುಡುಕಾಟ ಆರಂಭಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts