More

    ತೆಂಡುಲ್ಕರ್ ಪುತ್ರ ಅರ್ಜುನ್ ಮುಂಬೈ ಪರ ದೇಶೀಯ ಕ್ರಿಕೆಟ್‌ಗೆ ಪದಾರ್ಪಣೆ

    ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಅವರ ಪುತ್ರ ಹಾಗೂ ಉದಯೋನ್ಮುಖ ಎಡಗೈ ವೇಗಿ ಅರ್ಜುನ್ ತೆಂಡುಲ್ಕರ್ ಮುಂಬೈ ಸೀನಿಯರ್ ತಂಡದ ಪರ ಶುಕ್ರವಾರ ಪದಾರ್ಪಣೆ ಮಾಡಿದರು. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಹರಿಯಾಣ ವಿರುದ್ಧದ ಪಂದ್ಯದಲ್ಲಿ ಮುಂಬೈ ಪರ ಆಡಿದ ಅರ್ಜುನ್ 1 ವಿಕೆಟ್ ಕಬಳಿಸಿದರು. ಆದರೆ ಅವರಿಗೆ ಗೆಲುವಿನ ಸ್ವಾಗತ ಸಿಗಲಿಲ್ಲ. ಮುಂಬೈ ತಂಡಕ್ಕೆ 8 ವಿಕೆಟ್‌ಗಳಿಂದ ಸತತ 3ನೇ ಸೋಲಿನ ನಿರಾಸೆಯೂ ಎದುರಾಯಿತು. ಇದರಿಂದ ಟೂರ್ನಿಯಲ್ಲಿ ಮುಂಬೈ ತಂಡದ ಸವಾಲು ಕೂಡ ಅಂತ್ಯಗೊಂಡಿದೆ.

    ಬಿಕೆಸಿ ಗ್ರೌಂಡ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ 19.3 ಓವರ್‌ಗಳಲ್ಲಿ 143 ರನ್‌ಗೆ ಆಲೌಟ್ ಆಯಿತು. ಪ್ರತಿಯಾಗಿ ಹರಿಯಾಣ ತಂಡ 17.4 ಓವರ್‌ಗಳಲ್ಲಿ 2 ವಿಕೆಟ್‌ಗೆ 144 ರನ್ ಗಳಿಸಿ ಜಯಿಸಿತು. 3 ಓವರ್‌ಗಳಲ್ಲಿ 34 ರನ್ ಬಿಟ್ಟುಕೊಟ್ಟ 21 ವರ್ಷದ ಅರ್ಜುನ್‌ಗೆ ಆರಂಭಿಕ ಚೈತ್ಯಾ ಬಿಷ್ಣೋಯಿ (4) ಚೊಚ್ಚಲ ವಿಕೆಟ್ ಆದರು. ಅನುಭವಿ ಧವಳ್ ಕುಲಕರ್ಣಿ ಜತೆಗೆ ಹೊಸ ಚೆಂಡು ಹಂಚಿಕೊಂಡ ಅರ್ಜುನ್, ತಾನೆಸೆದ 2ನೇ ಓವರ್‌ನಲ್ಲೇ ಅಂದರೆ 10ನೇ ಎಸೆತದಲ್ಲೇ ವಿಕೆಟ್ ಕಬಳಿಸಿದರು. ಆದರೆ ಬಳಿಕ ಹೆಚ್ಚಿನ ರನ್ ಬಿಟ್ಟುಕೊಟ್ಟರು. ಈ ಮುನ್ನ 11ನೇ ಆಟಗಾರನಾಗಿ ಬ್ಯಾಟಿಂಗ್‌ಗೆ ಇಳಿದಿದ್ದ ಅರ್ಜುನ್‌ಗೆ ಒಂದೂ ಎಸೆತ ಎದುರಿಸುವ ಅವಕಾಶ ಸಿಕ್ಕಿರಲಿಲ್ಲ.

    ಇದನ್ನೂ ಓದಿ: ಜೋ ರೂಟ್ ದಾಖಲೆಯ ಶತಕ, ಇಂಗ್ಲೆಂಡ್ ಭಾರಿ ಮುನ್ನಡೆ

    ಮೊದಲಿಗೆ ಮುಂಬೈನ 20 ಸದಸ್ಯರ ತಂಡದಲ್ಲಿ ಸ್ಥಾನ ಪಡೆಯದಿದ್ದ ಅರ್ಜುನ್, ಆಟಗಾರರ ಸಂಖ್ಯೆಯನ್ನು 22ಕ್ಕೆ ಏರಿಸಿದಾಗ ಅವಕಾಶ ಪಡೆದಿದ್ದರು. ಮುಂಬೈ ತಂಡದ ಪರ ದೇಶೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿರುವುದರಿಂದ ಅರ್ಜುನ್ ಈಗ ಮುಂಬರುವ ಐಪಿಎಲ್ ಆಟಗಾರರ ಹರಾಜು ಪಟ್ಟಿಯಲ್ಲಿ ಸ್ಥಾನ ಪಡೆಯಲು ಕೂಡ ಅರ್ಹತೆ ಸಂಪಾದಿಸಿದ್ದಾರೆ.

    ಅರ್ಜುನ್ ಈ ಹಿಂದೆ ಮುಂಬೈ ಪರ ವಿವಿಧ ವಯೋಮಿತಿ ತಂಡಗಳಲ್ಲಿ ಆಡಿದ್ದರು. 19 ವಯೋಮಿತಿ ಕ್ರಿಕೆಟ್‌ನಲ್ಲಿ ಅವರು ಭಾರತ ತಂಡವನ್ನೂ ಪ್ರತಿನಿಧಿಸಿದ್ದಾರೆ. 2013ರಲ್ಲಿ ಸಚಿನ್ ತೆಂಡುಲ್ಕರ್ ಹರಿಯಾಣ ಪರವೇ ದೇಶೀಯ ಕ್ರಿಕೆಟ್‌ನಲ್ಲಿ ಕೊನೆಯ ಪಂದ್ಯವಾಡಿದ್ದರು. ಇದೀಗ ಅವರ ಪುತ್ರ ಅದೇ ತಂಡದ ವಿರುದ್ಧವೇ ದೇಶೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿರುವುದು ವಿಶೇಷವಾಗಿದೆ.

    ಬಲಿಷ್ಠವಾಗಿದೆ ಭಾರತೀಯ ಮಹಿಳಾ ಕ್ರಿಕೆಟ್ ಭವಿಷ್ಯ! ಯಾಕೆ ಗೊತ್ತೇ?

    ಕೇಂದ್ರ ಸಚಿವರ ಕ್ರಿಕೆಟ್ ಅಜ್ಞಾನಕ್ಕೆ ಎರಡೇ ಪದಗಳಲ್ಲಿ ಟಾಂಗ್ ಕೊಟ್ಟ ಹನುಮ ವಿಹಾರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts