More

    ಪ್ರೊ ಕಬಡ್ಡಿಯಲ್ಲಿ 700 ರೈಡ್‌ ಪಾಯಿಂಟ್‌ ಕಲೆಹಾಕಿದ ಅರ್ಜುನ್‌ ದೇಶ್ವಾಲ್‌, 10ನೇ ಆವೃತ್ತಿಯಲ್ಲಿ ಜೈಪುರ ಪಿಂಕ್‌ ಪ್ಯಾಂಥರ್ಸ್‌ಗೆ ಮೊದಲ ಗೆಲುವು

    ಬೆಂಗಳೂರು:ಅರ್ಜುನ್‌ ದೇಶ್ವಾಲ್‌ ಅವರ ಅಮೋಘ ಆಟದ ನೆರವಿನಿಂದ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌ 10ನೇ ಆವೃತ್ತಿಯಲ್ಲಿಸೋಮವಾರ ಮೊದಲ ಜಯ ದಾಖಲಿಸಿದೆ. ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿನಡೆದ ಪಂದ್ಯದಲ್ಲಿಮೊದಲಾರ್ಧದ ಅಂತ್ಯಕ್ಕೆ 12-20 ಅಂಕಗಳಿಂದ ಹಿನ್ನಡೆ ಅನುಭವಿಸಿದ್ದ 9ನೇ ಆವೃತ್ತಿಯ ಚಾಂಪಿಯನ್ಸ್‌ ದ್ವಿತೀಯಾರ್ಧದಲ್ಲಿ35-32 ಅಂಕಗಳಿಂದ ಜಯ ಸಾಧಿಸಿತು. ಪಂದ್ಯದಲ್ಲಿ 15 ಅಂಕಗಳನ್ನು ಗಳಿಸಿದ ದೇಶ್ವಾಲ್‌, ಪಿಕೆಎಲ್‌ ವೃತ್ತಿಜೀವನದಲ್ಲಿ 700ನೇ ರೈಡ್‌ ಪಾಯಿಂಟ್ಸ್‌ ದಾಖಲಿಸಿದರು.

    ಪಂದ್ಯದ ಆರಂಭದ ನಿಮಿಷಗಳಲ್ಲಿಉಭಯ ತಂಡಗಳು ಸಮಬಲ ಸಾಧಿಸಿ 7ನೇ ನಿಮಿಷದಲ್ಲಿ5-5ರ ಸಮಬಲ ಸಾಧಿಸಿದವು. ಆದಾಗ್ಯೂ, ಸೋನು ಸೂಪರ್‌ ರೈಡ್‌ ಮೂಲಕ ಜೈಂಟ್ಸ್‌ ತಂಡಕ್ಕೆ 8-5 ರಲ್ಲಿಮುನ್ನಡೆ ಸಾಧಿಸಲು ಸಹಾಯ ಮಾಡಿದರು. 10ನೇ ನಿಮಿಷದಲ್ಲಿಎದುರಾಳಿಯನ್ನು ಆಲೌಟ್‌ ಮಾಡಿದ ಜೈಂಟ್ಸ್‌ ತಂಡ ಮುನ್ನಡೆಯನ್ನು ಮತ್ತಷ್ಟು ವಿಸ್ತರಿಸಿಕೊಂಡಿತು.

    ಸೋನು ರೈಡ್‌ ಪಾಯಿಂಟ್‌ ಪಡೆದರೆ, ಫಝಲ್‌ ಅತ್ರಾಚಲಿ ವಿ.ಅಜಿತ್‌ ಕುಮಾರ್‌ ಅವರನ್ನು ಟ್ಯಾಕಲ್‌ ಮಾಡಿದರು. 18ನೇ ನಿಮಿಷದಲ್ಲಿ ಜೈಂಟ್ಸ್‌ 18-10 ಅಂಕಗಳ ಮುನ್ನಡೆ ಸಾಧಿಸಿದ್ದರಿಂದ ಜೈಪುರ ರಕ್ಷ ಣಾತ್ಮಕ ಆಟಕ್ಕೆ ಒತ್ತು ನೀಡಿತು. ಆದಾಗ್ಯೂ ಸೋನು ಅವರ ಅಮೋಘ ಆಟವು ಮೊದಲಾರ್ಧದಲ್ಲಿ ಗುಜರಾತ್‌ 20-12ರಲ್ಲಿಮೇಲುಗೈ ಸಾಧಿಸಲು ನೆರವಾಯಿತು.

    ದ್ವಿತೀಯಾರ್ಧದ ಆರಂಭಿಕ ನಿಮಿಷಗಳಲ್ಲಿ ಪ್ಯಾಂಥರ್ಸ್‌ ರೋಹಿತ್‌ ಗುಲಿಯಾ ಅವರನ್ನು ಟ್ಯಾಕಲ್‌ ಮಾಡಿತು. ಆದರೆ ಜೈಂಟ್ಸ್‌ ಇನ್ನೂ 20-14 ರಲ್ಲಿಉತ್ತಮ ಮುನ್ನಡೆಯನ್ನು ಕಾಯ್ದುಕೊಂಡಿತು. 27ನೇ ನಿಮಿಷದಲ್ಲಿಅರ್ಜುನ್‌ ದೇಶ್ವಾಲ್‌ ನಾಲ್ಕೈದು ಬಾರಿ ರೈಡ್‌ ಮೂಲಕ ಅಂಕ ತಂದು ಇತ್ತಂಡಗಳ ನಡುವಿನ ಅಂತರವನ್ನು ಕಡಿಮೆ ಮಾಡಿದರು. ಇದಾದ ಕೆಲವೇ ಕ್ಷ ಣಗಳಲ್ಲಿ ದೇಶ್ವಾಲ್‌ ಸೂಪರ್‌ ರೈಡ್‌ ಮಾಡಿ ಜೈಂಟ್ಸ್‌ ತಂಡವನ್ನು ಮ್ಯಾಟ್‌ ಮೇಲೆ ಒಬ್ಬ ಸದಸ್ಯನನ್ನಾಗಿ ಮಾಡಿದರು. 31ನೇ ನಿಮಿಷದಲ್ಲಿ ವಿಕಾಶ್‌ ಜಗ್ಲಾನ್‌ ಗಳಿಸಿದ ಅಂಕದಿಂದ ಪ್ಯಾಂಥರ್ಸ್‌ 26-25 ಅಂಕಗಳ ಮುನ್ನಡೆ ಸಾಧಿಸಿತು. ದೇಶ್ವಾಲ್‌ ಮತ್ತೊಂದು ಅದ್ಭುತ ರೈಡ್‌ ಮೂಲಕ ಪಿಕೆಎಲ್‌ನಲ್ಲಿ ತಮ್ಮ 700 ನೇ ರೈಡ್‌ ಪಾಯಿಂಟ್‌ ದಾಖಲಿಸಿದರು.

    ಸೋನು ರೈಡ್‌ ಪಾಯಿಂಟ್‌ ಗಳಿಸಿದರೆ, ಜೈಂಟ್ಸ್‌ 37 ನೇ ನಿಮಿಷದಲ್ಲಿ ದೇಶ್ವಾಲ್‌ ಅವರನ್ನು ಟ್ಯಾಕಲ್‌ ಮಾಡಿ ಪ್ಯಾಂಥರ್ಸ್‌ ಸ್ಕೋರ್‌ಗೆ ಹತ್ತಿರವಾಯಿತು. ಆದಾಗ್ಯೂ, ಜೈಪುರದ ತಂಡವು ರಾಕೇಶ್‌ ಅವರನ್ನು ಟ್ಯಾಕಲ್‌ ಮಾಡಿತು ಮತ್ತು 31-29 ರಲ್ಲಿಅಲ್ಪ ಮುನ್ನಡೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಪಂದ್ಯದ ಕೊನೆಯ ನಿಮಿಷಗಳಲ್ಲಿಭವಾನಿ ರಜಪೂತ್‌ ಸೂಪರ್‌ ರೈಡ್‌ ಮೂಲಕ ಪ್ಯಾಂಥರ್ಸ್‌ ಪರ ಗೆಲುವಿಗೆ ಸಹಿ ಹಾಕಿದರು. ಜೈಪುರ ತಂಡವು ಆಟದ ಉಳಿದ ಅವಧಿಯಲ್ಲಿ ಮುನ್ನಡೆಯಲ್ಲಿಉಳಿಯುವುದನ್ನು ಖಚಿತಪಡಿಸಿಕೊಂಡಿತಲ್ಲದೆ, ವಿಜೇತರಾಗಿ ಮ್ಯಾಟ್‌ನಿಂದ ಹೊರನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts