More

    ಕಣಗಳಲ್ಲಿ ನಿಂತ ಸಿಂಗಟಾಲೂರು ಕಾಲುವೆ ಬಸಿನೀರು ; ಮಿರಾಕೊರನಹಳ್ಳಿ ರೈತರ ಒಕ್ಕಣಿಕೆಗೆ ಸಮಸ್ಯೆ

    ಹೂವಿನಹಡಗಲಿ: ಸಿಂಗಟಾಲೂರು ಏತ ನೀರಾವರಿ ಯೋಜನೆಯ ಮುಖ್ಯ ಕಾಲುವೆ ಬಸಿನೀರಿನಿಂದ ತಾಲೂಕಿನ ಮಿರಾಕೊರನಹಳ್ಳಿ ರೈತರು ಬೆಳೆ ಒಕ್ಕಣಿಕೆಗೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

    ಗ್ರಾಮದ ಹಿಂದೆ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಮುಖ್ಯ ಕಾಲುವೆ ಹಾದು ಹೋಗಿದ್ದರಿಂದ ನೀರು ಬಿಟ್ಟಾಗ ಗ್ರಾಮದಲ್ಲಿ ಬಸಿನೀರು ಆರಂಭವಾಗುತ್ತದೆ. ಇದರಿಂದ ರೈತರ ಒಕ್ಕಣಿಕೆ ಕಣಗಳು ಸಂಪೂರ್ಣ ಜಲಾವೃತವಾಗುತ್ತವೆ. ಹೀಗಾಗಿ ರೈತರು ಬೆಳೆ ರಾಶಿ ಮಾಡಲು ರಸ್ತೆಗಳನ್ನೇ ಅವಲಂಬಿಸಿದ್ದಾರೆ. ಇತ್ತೀಚೆಗೆ ನ್ಯಾಯಾಧೀಶರ ಆದೇಶದ ಮೇರೆಗೆ ಅಧಿಕಾರಿಗಳು ರಸ್ತೆಯಲ್ಲಿ ಒಕ್ಕಣಿಕೆ ಮಾಡುವ ರೈತರಿಗೆ ನೋಟಿಸ್ ನೀಡುತ್ತಿದ್ದಾರೆ. ಇದರಿಂದ ಗ್ರಾಮದ ರೈತರಿಗೆ ರಿಯಾಯಿತಿ ಕೊಡಬೇಕು. ಪ್ರತಿ ವರ್ಷ ಕಣಗಳು ಬಸಿ ನೀರಿನಿಂದ ಆವೃತವಾಗುತ್ತವೆ. ಆದ್ದರಿಂದ ರಸ್ತೆ ಪಕ್ಕದಲ್ಲಿ ಒಕ್ಕಣಿಕೆ ಮಾಡಲು ಅವಕಾಶ ಕೊಡಬೇಕೆಂದು ರೈತರು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts