More

    ಅಡಕೆ ಬೆಳೆಗಾರರಿಗೆ 100 ಕೋಟಿ ರೂ. ಬಿಡುಗಡೆ ಮಾಡಿ: ಬೇಳೂರು

    ಶಿವಮೊಗ್ಗ: ಅಡಕೆ ಬೆಳೆ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಘೋಷಿಸಿರುವ 10 ಕೋಟಿ ರೂ. ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ. ಹಾಗಾಗಿ ಕನಿಷ್ಠ 100 ಕೋಟಿ ರೂ. ಬಿಡುಗಡೆ ಮಾಡಬೇಕೆಂದು ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಸರ್ಕಾರಕ್ಕೆ ಒತ್ತಾಯ ಮಾಡಿದರು.
    ಮಲೆನಾಡಲ್ಲಿ ಅಡಕೆ ಎಲೆಚುಕ್ಕಿ ರೋಗ ರೈತನನ್ನು ಈಗಾಗಲೇ ಬಲಿ ಪಡೆದಿದೆ. ಹಾಗಾಗಿ ತ್ವರಿತವಾಗಿ ರೋಗವನ್ನು ನಿಯಂತ್ರಣಕ್ಕೆ ತರಬೇಕಿದೆ. ಇಲ್ಲವಾದರೆ ಮತ್ತಷ್ಟು ರೈತರು ಕೂಡ ಅದೇ ದಾರಿಯನ್ನು ಹಿಡಿಯುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಸರ್ಕಾರ ತ್ವರಿತವಾಗಿ 100 ಕೋಟಿ ರೂ. ಬಿಡುಗಡೆ ಮಾಡುವ ಮೂಲಕ ರೋಗ ನಿಯಂತ್ರಣಗೆ ಒತ್ತು ನೀಡಬೇಕು ಎಂದು ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಎಲೆ ಚುಕ್ಕೆ ರೋಗ, ಅತಿವೃಷ್ಟಿಯಿಂದ ಈ ಬಾರಿ ಅಡಕೆ ಇಳುವರಿ ಕಡಿಮೆಯಾಗಿದೆ. ಈ ನಡುವೆ ಭೂತಾನ್ ಅಡಕೆ ರೈತಾನನ್ನು ಕಂಗಾಲು ಮಾಡಿದೆ. ನಮ್ಮ ದೇಶದ ಅಡಕೆಗೆ ಬೆಲೆ ಬಂದಾಗ ಭೂತಾನ್‌ನಿಂದ ಆಮದು ಮಾಡಿಕೊಳ್ಳುತ್ತಿರುವುದು ಖೇದಕರ ಎಂದು ಬೇಸರ ವ್ಯಕ್ತಪಡಿಸಿದರು.
    ಜಿಲ್ಲಾ ವಕ್ತಾರ ರಮೇಶ್ ಶಂಕರಘಟ್ಟ, ವೈ.ಬಿ.ಚಂದ್ರಕಾಂತ್, ಕೆಪಿಸಿಸಿ ಸದಸ್ಯ ವೈ.ಎಚ್.ನಾಗರಾಜ್, ಪ್ರಮುಖರಾದ ಸಿ.ಎಸ್.ಚಂದ್ರಭೂಪಾಲ್, ಜಿ.ಡಿ.ಮಂಜುನಾಥ್, ಚಂದ್ರಶೇಖರ್ ಮುಂತಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts