More

    ಸಿಂಗಲ್ ಚೋಲ್ ಹೊಸ ಅಡಕೆಗೆ ಮಾರುಕಟ್ಟೆಯಲ್ಲಿ ಐತಿಹಾಸಿಕ ಧಾರಣೆ

    ಪುತ್ತೂರು: ಅಡಕೆ ಧಾರಣೆ ವಾರದ ಆರಂಭದಲ್ಲೇ ಏರುಗತಿಯಲ್ಲಿದೆ, ಆದರೆ ರಬ್ಬರ್ ದರ ಇಳಿಕೆಯಾಗುತ್ತಿದೆ.
    5 ರೂಪಾಯಿ ಏರಿಕೆಯಾಗಿ ಹೊಸ ಅಡಕೆ (ಹೊಸ ಕೊಲು) 337 ರೂ, 8 ರೂ. ಏರಿಕೆಯಾಗಿ ಹೊಸ ಅಡಕೆ (ಸಿಂಗಲ್ ಚೋಲ್) 405 ರೂ, 10 ರೂ. ಏರಿಕೆಯಾಗಿ ಹಳೇ ಅಡಕೆ (ಡಬಲ್ ಚೋಲ್) 410 ರೂ.ನಲ್ಲಿ ಖರೀದಿಯಾಗಿದೆ. ಸಿಂಗಲ್ ಚೋಲ್ ಹೊಸ ಅಡಕೆಗೆ ಈ ಧಾರಣೆ ಬಂದಿರುವುದು ಇದೇ ಮೊದಲು.
    ಆಗಸ್ಟ್ ಮೊದಲ ವಾರದಿಂದ ಸೆಪ್ಟೆಂಬರ್ ಮೊದಲ ವಾರದವರೆಗೆ ಕ್ಯಾಂಪ್ಕೊ ಮಾರುಕಟ್ಟೆಯಲ್ಲಿ ಹಳೇ ಅಡಕೆ 390 ರೂ, ಹೊಸ ಅಡಕೆ (ಸಿಂಗಲ್ ಚೋಲ್) 360-385 ರೂ.ನಲ್ಲಿ ವ್ಯವಹರಿಸಿತ್ತು. 2 ತಿಂಗಳ ಹಿಂದೆ ಅಡಕೆಗೆ 350 ರೂ. ಧಾರಣೆ ತಲುಪುತ್ತಿದ್ದಂತೆ ಕರಾವಳಿಯಾದ್ಯಂತ ಅಡಕೆ ಬೆಳೆಗಾರರಲ್ಲಿದ್ದ ಅಡಕೆ ದಾಸ್ತಾನು ಬಹುತೇಕ ಖಾಲಿಯಾಗಿದೆ. ಉತ್ತರ ಭಾರತದಲ್ಲೂ ಅಡಕೆಗೆ ಬೇಡಿಕೆ ಹೆಚ್ಚಾಗಿದ್ದು, ಕರಾವಳಿ ಸೇರಿದಂತೆ ವಿವಿಧ ಮೂಲಗಳ ಅಡಕೆ ಬೇಡಿಕೆಯಷ್ಟು ಪೂರೈಕೆ ಸಾಧ್ಯವಾಗದ ಕಾರಣ ಅನಿವಾರ್ಯವಾಗಿ ಹೆಚ್ಚು ಬೆಲೆ ನೀಡಿ ಅಡಕೆ ಖರೀದಿಸುತ್ತಿದ್ದಾರೆ ಎನ್ನಲಾಗಿದೆ.

    ಮುಕ್ತ ಮಾರುಕಟ್ಟೆಯಲ್ಲಿ ಹೊಸ ಅಡಕೆ 335-400 ರೂ., ಹೊಸ ಅಡಕೆ (ಸಿಂಗಲ್ ಚೋಲ್) 400-408 ರೂ., ಹಳೇ ಅಡಕೆ (ಡಬಲ್ ಚೋಲ್) 405- 415 ರೂ.ಗೆ ಖರೀದಿಯಾಗಿದೆ.
    3 ರೂ. ಇಳಿಕೆಯಾಗಿ ರಬ್ಬರ್ ಆರ್‌ಎಸ್‌ಎಸ್ 149 ರೂ, 4 ರೂ. ಇಳಿಕೆಯಾಗಿ ಆರ್‌ಎಸ್‌ಎಸ್ 5- 137 ರೂ, 2 ರೂ. ಇಳಿಕೆಯಾಗಿ ಲಾಟ್ 117 ರೂ., 3 ರೂ. ಇಳಿಕೆಯಾಗಿ ಸ್ಕ್ರಾಪ್-1-79 ರೂ., 1 ರೂ. ಇಳಿಕೆಯಾಗಿ ಸ್ಕ್ರಾಪ್ 2- 71 ರೂ.ನಲ್ಲಿ ಖರೀದಿಯಾಗಿದೆ.
    ತೆಂಗಿನಕಾಯಿ ಸಣ್ಣ ಗಾತ್ರ(ಕೆಜಿಗೆ) 24-26 ರೂ, ಮಧ್ಯಮ ಗಾತ್ರ 28-29 ರೂ, ದೊಡ್ಡ ಗಾತ್ರ 30ರಿಂದ 35 ರೂ, ಕೊಬ್ಬರಿ 80-90 ರೂ, ಕಾಳುಮೆಣಸು- 320-330 ರೂ, ಕೊಕೋ 60 ರೂ. ಧಾರಣೆ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts