More

    ಭಾರತಕ್ಕೆ ಅಮೆರಿಕಾ ದೇಣಿಗೆಯಾಗಿ ನೀಡುತ್ತೆನೆಂದ ವೆಂಟಿಲೇಟರ್​ಗಳಿಗೆ ಹಣ ಪಡೆಯುತ್ತಿದ್ದೆಯೇ?

    ನವದೆಹಲಿ: ಭಾರತಕ್ಕೆ, ಅಮೆರಿಕಾ ನೀಡಲಿರುವ ವೆಂಟಿಲೇಟರ್​ಗಳಿಗೆ 2.6 ಮಿಲಿಯನ್​ ಡಾಲರ್​ ಮೊತ್ತ ಪಾವತಿಸಬೇಕು ಎನ್ನುವ ಮಾಧ್ಯಮಗಳ ವರದಿ ಸುಳ್ಳು ಎಂದು ಯುನೈಟೆಡ್ ಸ್ಟೇಸ್ ಫಾರ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ (ಯುಎಸ್ಎಐಡಿ) ತಿಳಿಸಿದೆ.

    ಯುನೈಟೆಡ್ ಸ್ಟೇಸ್ ಫಾರ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ (ಯುಎಸ್ಎಐಡಿ) ನಿರ್ದೇಶಕರು ಈ ಬಗ್ಗೆ ಸ್ಪಷ್ಟೀಕರಣ ನೀಡಿ ಅಮೆರಿಕಾ ಭಾರತಕ್ಕೆ ದೇಣಿಗೆಯಾಗಿ ವೆಂಟಿಲೇಟರ್​ಗಳನ್ನು ನೀಡುತ್ತಿದೆ. ಮಾಧ್ಯಮಗಳಲ್ಲಿ ಹಣ ಪಾವತಿ ಮಾಡಲಾಗುತ್ತದೆ ಎಂಬ ವರದಿ ಸುಳ್ಳು ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ  ಮೊಮ್ಮಗಳು ಬ್ಯಾಂಕಿಗೆ ಹಾಜರು; ಅಜ್ಜಿಯ ಹಣೆ ಮೇಲೆ ಬೆವರು!

    ಕರೊನಾ ವೈರಸ್​ ವಿರುದ್ಧ ಭಾರತ ನಡೆಸಿರುವ ಹೋರಾಟಕ್ಕೆ ಶ್ಲಾಘನೆ ವ್ಯಕ್ತಪಡಿಸಿದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ರಾಷ್ಟ್ರಕ್ಕೆ ವೆಂಟಿಲೇಟರ್​ಗಳನ್ನು ದೇಣಿಗೆ ನಿಡುವುದಾಗಿ ಘೋಷಿಸಿದ್ದರು. ಆದರೆ ರಾಷ್ಟ್ರದ ಮಾಧ್ಯಮಗಳಲ್ಲಿ ವೆಂಟಿಲೇಟರ್​ಗಳನ್ನು ಅಮೆರಿಕಾ ದೇಣಿಯಾಗಿ ನೀಡುತ್ತಿಲ್ಲ ಬದಲಿಗೆ ಹಣ ಪಡೆಯಲಿದೆ. ಇದಕ್ಕಾಗಿ ರಾಷ್ಟ್ರ 2.6 ಮಿಲಿಯನ್​ ಡಾಲರ್​ ಹಣ ಪಾವತಿ ಮಾಡಬೇಕು ಎಂಬ ವರದಿ ಬಿತ್ತರ ಮಾಡಿದ್ದವು.

    ಅಮೆರಿಕಾ ನೀಡುವ ಪ್ರತಿ ವೆಂಟಿಲೇಟರ್​ಗೆ ಸಾಗಾಣಿಕೆ ವೆಚ್ಚ ಇಲ್ಲದೆ 9.6 ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಭಾರತಕ್ಕೆ ಅಮೆರಿಕಾ ಉಚಿತವಾಗಿ ವೆಂಟಿಲೇಟರ್​ ನೀಡುವುದಾಗಿ ತಿಳಿಸಿ ಹಣ ಪಡೆಯುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿ ಬಿತ್ತರವಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಅಮೆರಿಕಾ ಸ್ಪಷ್ಟೀಕರಣ ನೀಡಿದೆ.

    ಅಮೆರಿಕಾ ಭಾರತಕ್ಕೆ 200 ವೆಂಟಿಲೇಟರ್​ಗಳನ್ನು ಉಚಿತವಾಗಿ ನೀಡಲಿದೆ. ಮೊದಲ ಹಂತವಾಗಿ 50 ವೆಂಟಿಲೇಟರ್​ಗಳಿ ಶೀಘ್ರವೇ ಭಾರತ ತಲುಪಲಿದೆ ಎಂದು ಟ್ರಂಪ್​ ಘೋಷಿಸಿದ್ದರು. (ಏಜೆನ್ಸೀಸ್​)

    VIDEO| ನಿನ್ನೆ ದೇವೇಗೌಡರ ಜತೆ ಡಿಕೆಶಿ ಭೋಜನ; ಇವತ್ತು ಎಚ್‌ಡಿಕೆ ಜತೆ ಡಿಕೆ ಸುರೇಶ್ ಕ್ಷೇತ್ರ ಪ್ರವಾಸ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts