More

    ಹಸೆಮಣೆ ಏರಲು ಸಜ್ಜಾದ ಟೀಂ ಇಂಡಿಯಾ ಓಪನರ್; ಜನವರಿಯಲ್ಲಿ ರಾಹುಲ್ ಮದುವೆ?

    ನವದೆಹಲಿ: ಟೀಂ ಇಂಡಿಯಾ ಉಪನಾಯಕ ಕೆ.ಎಲ್ ರಾಹುಲ್ ಹಾಗೂ ಅತಿಯಾ ಶೆಟ್ಟಿ ಕಳೆದ ಕೆಲವು ಸಮಯದಿಂದ ಡೇಟಿಂಗ್​ನಲ್ಲಿದ್ದಾರೆ. ರಾಹುಲ್-ಅತಿಯಾ ಜೋಡಿ ಒಟ್ಟಾಗಿ ಸಾಕಷ್ಟು ಕಡೆಗಳಲ್ಲಿ ಸುತ್ತಾಡಿದ್ದಾರೆ. ಈ ಫೋಟೋಗಳು ಸಾಕಷ್ಟು ವೈರಲ್ ಆಗಿತ್ತು. ಇದಾಗುತ್ತಿದ್ದಂತೆ ಇವರಿಬ್ಬರು ಸಧ್ಯದಲ್ಲೇ ಮದುವೆಯಾಗುತ್ತಾರೆ ಎಂಬ ಮಾತುಗಳು ಕೇಳಿ ಬಂದಿತ್ತು.

    ಹಸೆಮಣೆ ಏರಲು ಸಜ್ಜಾದ ಟೀಂ ಇಂಡಿಯಾ ಓಪನರ್; ಜನವರಿಯಲ್ಲಿ ರಾಹುಲ್ ಮದುವೆ?

    ಇದೀಗ ರಾಹುಲ್-ಅತಿಯಾ ಜೋಡಿ ಜನರಿ ಮೊದಲ ವಾರದಲ್ಲಿ ವಿವಾಹವಾಗಲ್ಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಈಗಾಗಲೇ ಎರಡೂ ಕುಟುಂಬಗಳ ನಡುವೆ ಮಾತಕಥೆ ನಡೆದಿದ್ದು, ಹೊಸ ವರ್ಷದ ಆರಂಭದಲ್ಲಿ ಮದುವೆ ಕಾರ್ಯಕ್ರಮ ನಡೆಯಲಿದೆಯಂತೆ.

    ಹಸೆಮಣೆ ಏರಲು ಸಜ್ಜಾದ ಟೀಂ ಇಂಡಿಯಾ ಓಪನರ್; ಜನವರಿಯಲ್ಲಿ ರಾಹುಲ್ ಮದುವೆ?

    ಜನವರಿ ಮೊದಲ ವಾರದಲ್ಲಿ ವಿವಾಹ ಕಾರ್ಯಕ್ರಮ ನಡೆಯಲಿರುವುದರಿಂದ ರಾಹುಲ್​ ಬಿಸಿಸಿಐನಿಂದಲೂ ರಜೆ ಕೇಳಿದ್ದಾರೆ. ಇದಕ್ಕೆ ಒಪ್ಪಿದ ಬಿಸಿಸಿ ರಾಹುಲ್​ಗೆ ರಜೆ ನೀಡಿದೆ ಎಂದು ವರದಿಯಾಗಿದೆ. ಹೀಗಾಗಿ ಮದುವೆ ಸಿದ್ಧತೆಯ ಕಾರಣದಿಂದಲೇ ಇತ್ತೀಚೆಗೆ ಮುಕ್ತಾಯವಾದ ನ್ಯೂಜಿಲೆಂಡ್ ಸರಣಿಯಿಂದಲೂ ರಾಹುಲ್ ಹಿಂದೆ ಸರಿದಿದ್ದರು ಎನ್ನಲಾಗುತ್ತಿದೆ.

    ಹಸೆಮಣೆ ಏರಲು ಸಜ್ಜಾದ ಟೀಂ ಇಂಡಿಯಾ ಓಪನರ್; ಜನವರಿಯಲ್ಲಿ ರಾಹುಲ್ ಮದುವೆ?

    ರಾಹುಲ್-ಅತಿಯಾ ಜೋಡಿ ಡೇಟಿಂಗ್​ನಲ್ಲಿದ್ದರು. ಇತ್ತೀಚೆಗೆ ಮುಕ್ತಾಯವಾದ ಟಿ-20 ವಿಶ್ವಕಪ್​ ರಾಹುಲ್ ಜತೆಗೆ ಅತಿಯಾ ಕೂಡಾ ಆಸ್ಟ್ರೇಲಿಯಾಗೆ ಪ್ರಯಾಣಿಸಿದ್ದರು. ಬಾಂಗ್ಲಾದೇಶ ವಿರುದ್ಧದ ಪಂದ್ಯಂದು ಅತಿಯಾ ಮೈದಾನಕ್ಕೂ ಬಂದಿದ್ದರು. ಅಂತೆಯೇ ನ.05ರಂದು ಅತಿಯಾ ಹುಟ್ಟುಹಬ್ಬದಂದು ತಮ್ಮಿಬ್ಬರ ರೊಮ್ಯಾಟಿಂಕ್ ಫೋಟೋವೊಂದು ಪೋಸ್ಟ್ ಮಾಡಿ ರಾಹುಲ್ ಶುಭಾಶಯ ತಿಳಿಸಿದ್ದರು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts