More

    ವಾಸ್ತುಶಿಲ್ಪ ಪರಿಚಯಿಸಿದ್ದು ಜಕಣಾಚಾರಿ

    ಬೆಳಗಾವಿ: ಶಿಲ್ಪಕಲೆಯನ್ನು ಜಗತ್ತಿಗೆ ಪರಿಚಯಿಸಿದ್ದು ಅಮರಶಿಲ್ಪಿಜಕಣಾಚಾರಿ ಎಂದು ವಿಶ್ವಕರ್ಮ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಆರ್.ಶ್ರೀನಿವಾಸ ಆಚಾರ್ಯ ಹೇಳಿದ್ದಾರೆ.

    ಜಿಲ್ಲಾಡಳಿತ, ಜಿಪಂ, ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಆಶ್ರಯದಲ್ಲಿ ನಗರದ ಬಸವರಾಜ ಕಟ್ಟೀಮನಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಲ್ಪಕಲೆ ನಮ್ಮ ದೇಶದ ಸಂಸ್ಕೃತಿ ಹಾಗೂ ಹೆಮ್ಮೆ. ಜಕಣಾಚಾರಿ ಅವರು ನಾಡಿಗೆ ನೀಡಿದ ಕೊಡುಗೆ ಅಪಾರ. ರಾಜ, ಮಹಾರಾಜರ ಕಾಲದಿಂದ ಇಲ್ಲಿಯವರೆಗೂ ಅಮರಶಿಲ್ಪಿ ಕಾಯಕದ ಮೂಲಕ ಅಮರವಾಗಿದ್ದಾರೆ ಎಂದರು.

    ಅಮರಶಿಲ್ಪಿ ಜಕಣಾಚಾರಿ ಹುಟ್ಟು, ಜೀವನ ಚರಿತ್ರೆ, ಅವರು ನೀಡಿದಂತಹ ವಾಸ್ತುಶಿಲ್ಪ ಕಲೆ, ಬೇಲೂರು-ಹಳೆಬೀಡು ಶಿಲ್ಪ ಕಲೆಯ ಕೊಡುಗೆಯ ಕುರಿತು ಆರ್.ಶ್ರೀನಿವಾಸ ಆಚಾರ್ಯ ಅವರು ವಿಶೇಷ ಉಪನ್ಯಾಸ ನೀಡಿದರು. ಎಡಿಸಿ ಅಶೋಕ ದುಡಗುಂಟಿ ಜಕಣಾಚಾರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಸತ್ಯನಾರಾಯಣ ಭಟ್, ತಂಡದಿಂದ ಕನಕದಾಸರ, ಪುರಂದರದಾಸರ ಕೀರ್ತನೆ, ಸಂಗೀತ ಕಾರ್ಯಕ್ರಮ ಜರುಗಿದವು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಡಾ.ನಿರ್ಮಲಾ ಬಟ್ಟಲ, ವಿಶ್ವಕರ್ಮ ಸಮಾಜದ ಮುಖಂಡರಾದ ಎನ್.ಎಸ್. ಶಂಕರಾಚಾರ್ಯ, ಕಲ್ಲಪ್ಪ ಬಡಿಗೇರ, ಸಿ.ವೈ. ಪತ್ತಾರ, ಸುರೇಶ ಪೋತದಾರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts