More

    ವಿಯೆಟ್ನಾಂನಲ್ಲಿ ಒಂಬತ್ತನೇ ಶತಮಾನದ ಶಿವಲಿಂಗ ಪತ್ತೆ!

    ಹನೋಯಿ: ವಿಯೆಟ್ನಾಂನ ಮೈಸನ್ ಪ್ರದೇಶದಲ್ಲಿ ಭಾರತೀಯ ಪುರಾತತ್ವ ಇಲಾಖೆ ಸುಮಾರು 9ನೇ ಶತಮಾನದ ಬೃಹತ್ ಏಕಶಿಲಾ ಶಿವಲಿಂಗವನ್ನು ಪತ್ತೆ ಮಾಡಿದೆ. ಈ ವಿಷಯವನ್ನು ವಿದೇಶಾಂಗ ಸಚಿವ ಎಸ್. ಜೈಶಂಕರ್ ಟ್ವಿಟರ್‌ನಲ್ಲಿ ಬಹಿರಂಗಪಡಿಸಿದ್ದಾರೆ.

    ಇದನ್ನೂ ಓದಿ: ಜಾಗತಿಕ ನಾಯಕರ ಮಧ್ಯೆ ಮೋದಿ ಜನಪ್ರಿಯತೆ ಮತ್ತಷ್ಟು ಹೆಚ್ಚಳ

    ಮೈಸನ್‌ನಲ್ಲಿ ಪ್ರಾಚೀನ ಸಂಸ್ಕೃತಿ ಸಂರಕ್ಷಣಾ ಯೋಜನೆಗಳನ್ನು ಕೈಗೊಳ್ಳಲಾಗಿದ್ದು, ಉತ್ಖನನದ ವೇಳೆ ಶಿವಲಿಂಗ ಪತ್ತೆಯಾಗಿದೆ. ಮೈಸನ್ ಮಧ್ಯ ವಿಯೆಟ್ನಾಂನಲ್ಲಿನ ಭಾಗಶಃ ಹಾಳಾದ ಹಿಂದು ದೇವಾಲಯಗಳ ಸಮೂಹವಾಗಿದ್ದು, ಯುನೆಸ್ಕೋ ಇದನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಗುರುತಿಸಿದೆ.

    ಈ ಪ್ರದೇಶವನ್ನು 4ರಿಂದ 14ನೇ ಶತಮಾನದವರೆಗೆ ಚಂಪಾ ರಾಜರು ಆಳಿದ್ದು, ಈ ದೇವಾಲಯಗಳನ್ನು ಅವರ ಅವಧಿಯಲ್ಲೇ ನಿರ್ಮಿಸಲಾಗಿದೆ ಎಂಬ ಬಗ್ಗೆ ಉಲ್ಲೇಖವಿದೆ. ಇಲ್ಲಿ ಪ್ರಮುಖವಾಗಿ ಶಿವನ ದೇವಾಲಯಗಳಿದ್ದು, ಭದ್ರೇಶ್ವರ ಎಂಬ ಹೆಸರಿನಿಂದ ಶಿವನನ್ನು ಆರಾಧನೆ ಮಾಡಲಾಗುತ್ತಿತ್ತು.

    ಇದನ್ನೂ ಓದಿ: ಸಾಮಾಜಿಕ ಜಾಲತಾಣ ವೇದಿಕೆಗಳಿಗೆ ಬೆದರಿಕೆಯೊಡ್ಡಿದ ಡೊನಾಲ್ಡ್ ಟ್ರಂಪ್​…!

    ಮೈಸನ್‌ನಲ್ಲಿ ಚಂಪಾ ರಾಜರಿಂದ ನಿರ್ಮಾಣವಾದ ಸುಮಾರು 70 ದೇವಾಲಯಗಳ ಸಮೂಹವಿದ್ದು, ವಿಯೆಟ್ನಾಂ ಯುದ್ಧದ ವೇಳೆ ಅಮೆರಿಕ ನಡೆಸಿದ ಬಾಂಬ್ ದಾಳಿಯಲ್ಲಿ ದೇವಾಲಯಗಳು ಭಾಗಶಃ ನಾಶವಾಗಿವೆ. ಭಾರತೀಯ ಪುರಾತತ್ವ ಇಲಾಖೆ ಇಲ್ಲಿ ಸಂರಕ್ಷಣಾ ಯೋಜನೆ ಕೈಗೊಂಡು, ಭೂಗರ್ಭ ಸೇರಿರುವ ಪಾರಂಪರಿಕ ಮೂರ್ತಿ ಹಾಗೂ ಇತರ ಕಲಾಕೃತಿಗಳಿಗಾಗಿ ಶೋಧ ನಡೆಸುತ್ತಿದೆ.

    ‘ಗಡಿ ವಿವಾದ ಸಂಬಂಧವನ್ನು ಹಾಳುಗೆಡುವದಿರಲಿ’: ಮಾತುಕತೆಯತ್ತ ಒಲವು ತೋರಿದ ಚೀನಾ ರಾಯಭಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts