More

    ರೈತರ ಒಕ್ಕಲೆಬ್ಬಿಸಲು ಅರಣ್ಯ ಇಲಾಖೆ ಹುನ್ನಾರ? : ಎ.ನಕ್ಕಲಹಳ್ಳಿ ಗ್ರಾಮಸ್ಥರ ಆಕ್ರೋಶ ಅರಣ್ಯಾಧಿಕಾರಿಗಳ ಕಚೇರಿ ಎದುರು ಧರಣಿ

    ಶಿಡ್ಲಘಟ್ಟ : ತಾಲೂಕಿನ ಎ.ನಕ್ಕಲಹಳ್ಳಿ ಸರ್ವೇ ನಂ.30ರಲ್ಲಿ 70-80 ವರ್ಷಗಳಿಂದ ಉಳುಮೆ ಮಾಡುತ್ತಿರುವ ರೈತರನ್ನು ಒಕ್ಕಲೆಬ್ಬಿಸಲು ಮುಂದಾಗಿರುವ ಅರಣ್ಯ ಇಲಾಖೆ ಕ್ರಮ ಖಂಡಿಸಿ ಸೋಮವಾರ ನಗರದ ವಲಯ ಅರಣ್ಯಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ಅನುಭೋಗದಲ್ಲಿರುವ ರೈತರಿಗೆ ಉಳುಮೆ ಮಾಡಲು ಅವಕಾಶ ನೀಡುವಂತೆ ಒತ್ತಾಯಿಸಿದರು.

    ಹಲವು ವರ್ಷಗಳಿಂದ ಈ ಜಮೀನನ್ನೇ ನಂಬಿಕೊಂಡು 120-130 ಕುಟುಂಬಗಳು ಬದುಕು ನಡೆಸುತ್ತಿವೆ, 1991-92ರಲ್ಲಿ ದರಕಾಸ್ತು ಮೂಲಕ ಜಮೀನು ಮಂಜೂರು ಮಾಡುವಂತೆ ಫಾರಂ ನಂ.53ರಲ್ಲಿ ಅರ್ಜಿ ಸಲ್ಲಿಸಿದ್ದಾರೆ, ಆದರೆ ಈಗ ಏಕಾಏಕಿ ಜಮೀನು ಅರಣ್ಯ ಇಲಾಖೆಗೆ ಸೇರಿದ್ದು ಎನ್ನುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳು, ಯಾರೂ ಉಳುಮೆ ಮಾಡಬೇಡಿ ಎನ್ನುವ ಮೂಲಕ ರೈತರನ್ನು ಹೆದರಿಸುವ ಕೆಲಸಕ್ಕೆ ಮುಂದಾಗಿದ್ದಾರೆ ಮುಖಂಡ ಈರಪ್ಪ ಆರೋಪಿಸಿದರು.
    ಪಹಣಿ ಮಾಡಿಕೊಡುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ಸಾಲದ್ದಕ್ಕೆ ಾರಂ ನಂ.57 ರಲ್ಲಿ ಅರ್ಜಿ ಸಲ್ಲಸಿದ್ದೇವೆ, ಹಾಗಾಗಿ ಅನುಭೋಗದಲ್ಲಿರುವ ರೈತರಿಗೆ ಉಳುಮೆ ಮಾಡಲು ಅವಕಾಶ ನೀಡಬೇಕೆಂದು ಒತ್ತಾಯಿಸಿದರು.

    ಅಹವಾಲು ಆಲಿಸಿದ ವಲಯ ಅಧಿಕಾರಿ ದಿವ್ಯಾ, ಸರ್ವೇ ನಂ.30ರಲ್ಲಿನ ಅರಣ್ಯ ಇಲಾಖೆಗೆ ಸೇರಿದ ಜಾಗದ ಒತ್ತುವರಿ ತೆರವುಗೊಳಿಸಲು ಮುಂದಾಗಿದ್ದೇವೆ, ಇಲಾಖೆಗೆ ಸೇರಿದ ಜಮೀನಿನಲ್ಲಿ ಉಳುಮೆ ಮಾಡಲು ಅವಕಾಶ ನೀಡುವುದಿಲ್ಲ,ತಹಸೀಲ್ದಾರ್ ಅವರನ್ನು ಭೇಟಿ ಮಾಡಿ ಜಂಟಿ ಸರ್ವೇ ಕಾರ್ಯ ಮಾಡಿಸುವ ಮೂಲಕ ಸರ್ಕಾರಿ ಜಾಗವಿದ್ದಲ್ಲಿ ರೈತರು ಉಳುಮೆ ಮಾಡಿಕೊಳ್ಳಲು ನಮ್ಮ ಅಭ್ಯಂತರವಿಲ್ಲ ಎಂದು ಸ್ಪಷ್ಟಪಡಿಸಿದರು.

    ಗ್ರಾಮಸ್ಥರಾದ ನಾಗರಾಜು, ಶೋಭಾ ಕೃಷ್ಣಪ್ಪ, ಡಿ.ಎನ್.ಕೃಷ್ಣಪ್ಪ, ಕೃಷ್ಣಾರೆಡ್ಡಿ, ನಾರಾಯಣರೆಡ್ಡಿ, ವೆಂಕಟೆಶಪ್ಪ, ಲಗುಮಪ್ಪ, ಶ್ರೀನಿವಾಸ್, ಚೌಡಮ್ಮ, ಕವಿತಾ, ಮುನಿಯಪ್ಪ, ನೀಲಮ್ಮ, ರವಣಮ್ಮ, ಮಂಜುನಾಥ್ ಇತರರಿದ್ದರು.

    ಪ್ರಭಾವಿಗಳಿಗೆ ಪಹಣಿ : ಹಲವು ವರ್ಷಗಳಿಂದ ಈ ಜಮೀನಿನಲ್ಲಿ ಉಳುಮೆ ಮಾಡುತ್ತಿರುವ ಬಡ ರೈತರಿಗೆ ಕಂದಾಯ ಇಲಾಖೆ ಅಧಿಕಾರಿಗಳು ಇದುವರೆಗೂ ಪಹಣಿ ಮಾಡಿಕೊಟ್ಟಿಲ್ಲ, ಆದರೆ ಕೆಲ ಪ್ರಭಾವಿಗಳಿಗೆ ಮಾತ್ರ ಈ ಜಮೀನಿನ ಪಹಣಿ ಮಾಡಿಕೊಟ್ಟಿದ್ದಾರೆ ಎಂದು ರೈತರು ದೂರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts