More

    ಬೌದ್ಧಿಕ ಮಟ್ಟ ವೃದ್ಧಿಸುವ ಆಟೋಟ ಸಹಕಾರಿಯಾಗಿದೆ ಎಂದ ಕ್ಷೇತ್ರ ಸಮನ್ವಯಾಧಿಕಾರಿ ಶಿವರಾಜ ಪೂಜಾರಿ

    ಅರಕೇರಾ: ಕ್ರೀಡೆಗಳು ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಿಸುವುದಲ್ಲದೇ ಮಕ್ಕಳಲ್ಲಿನ ಬೌದ್ಧಿಕ ಮಟ್ಟ ಹೆಚ್ಚಿಸಲು ಸಹಕರಿಸುತ್ತದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಶಿವರಾಜ ಪೂಜಾರಿ ಹೇಳಿದರು.

    ಸಮೀಪದ ಶಿವಂಗಿ ಗ್ರಾಮದಲ್ಲಿ ದೇವದುರ್ಗ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ಸೋಮವಾರ ಆಯೋಜಿಸಿದ್ದ ಅರಕೇರಾ ವಲಯ ಮಟ್ಟದ ಪ್ರೌಢ ಶಾಲಾ ಮಕ್ಕಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಕ್ರೀಡಾಪಟುಗಳು ನಿರ್ಣಯಕರ ತೀರ್ಪನ್ನು ಗೌರವಿಸುವ ಜತೆಗೆ ಶಿಸ್ತು ಬದ್ಧರಾಗಿ ಕ್ರೀಡಾ ನಿಯಮಗಳನ್ನು ಪಾಲಿಸಬೇಕು. ಮೂರು ವರ್ಷಗಳಿಂದ ಕರೊನಾ ಸಾಂಕ್ರಾಮಿಕ ರೋಗದಿಂದ ವಿದ್ಯಾರ್ಥಿಗಳ ಕಲಿಕೆ ಮತ್ತು ಕ್ರೀಡೆಗೆ ಕಂಟಕ ಬಂದಿತ್ತು. ಇದೀಗ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗಿದ್ದು, ಉತ್ಸಾಹಕರಾಗಿ ಕ್ರೀಡೆಯಲ್ಲಿ ಭಾಗವಹಿಸುತ್ತಿರುವುದು ಸಂತಸ ತಂದಿದೆ ಎಂದರು.

    ಗ್ರಾಮದ ಹಿರಿಯ ಮುಖಂಡ ರಾಜಶೇಖರಪ್ಪ ಗೌಡ ದಳಪತಿ ಮಾತನಾಡಿ, ಕ್ರೀಡಾಪಟುಗಳು ಗೆದ್ದಾಗ ಹಿಗ್ಗದೆ, ಸೋತಾಗ ಕುಗ್ಗದೆ ಎರಡನ್ನೂ ಸಮಾನ ದೃಷ್ಟಿಯಿಂದ ಸ್ವೀಕರಿಸಿ ಕ್ರೀಡಾಭಿಮಾನ ಮೆರೆಯಬೇಕೆಂದು ಕಿವಿಮಾತು ಹೇಳಿದರು.

    ಎಸ್‌ಡಿಎಂಸಿ ಅಧ್ಯಕ್ಷರಾದ ಹನುಮಯ್ಯ ಪೆದ್ದೆರ್, ಶರಣಗೌಡ ಹಾಲಂ ಗೌಡ್ರ, ಭೂ ದಾನಿಗಳಾದ ಚಿದಾನಂದಪ್ಪ, ರಾಚನಗೌಡ, ಮುಖಂಡರಾದ ರಾಜಶೇಖರಪ್ಪ ಗೌಡ ದಳಪತಿ, ರಂಗಪ್ಪ, ಧನಂಜಯ್ಯ, ಕೆ.ವೆಂಕಟೇಶ ನಾಯಕ, ದೌಲತ್‌ಬೀ ಬುಡಾನ್‌ಸಾಬ್, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಎಂ.ವಿ.ಕವಡಿಮಟ್ಟಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹನುಮಂತ್ರಾಯ ಶಾಖೆ, ಪ್ರೌಢ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಮಹಿಬೂಬ್ ಅಲಿ, ಉಪಾದ್ಯಕ್ಷ ವಿಶ್ವನಾಥ ಪಾಟೀಲ್, ಪಿಡಿಒ ಸಿ.ಬಿ.ಪಾಟೀಲ್, ಸಿಆರ್‌ಪಿ ಶ್ರೀಶೈಲ ತಳವಾರ, ಶ್ರುತಿ ಸಂಸ್ಕೃತಿ ಸಂಸ್ಥೆ ತಾಲೂಕು ಸಂಯೋಜಕ ರಾಮಣ್ಣ ಎನ್.ಗಣೇಕಲ್, ಮುಖ್ಯಶಿಕ್ಷಕ ಶಿವಜಾತಪ್ಪ, ಪ್ರಭಾಕರ ಪತ್ತಾರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts