More

    1 ವರ್ಷದ ಮಗುವಿನೊಂದಿಗೆ ದಂಪತಿ ಪಾದಯಾತ್ರೆ

    ಅರಕೇರಾ: ಸಮೀಪದ ಕೆ.ಹನುಮಂತ್ರಾಯ ನಗರದ ಗ್ರಾಮಸ್ಥರು ಶ್ರೀಶೈಲಕ್ಕೆ ಬುಧವಾರ ಪಾದಯಾತ್ರೆ ಕೈಗೊಂಡರು. ಗ್ರಾಮದ ಆರಾಧ್ಯ ದೈವ ಭಾಗಮ್ಮ ಹಾಗೂ ಮಾರೆಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪಾದಯಾತ್ರೆ ಆರಂಭಿಸಿದರು. ಗ್ರಾಮಸ್ಥರು 15 ವರ್ಷಗಳಿಂದ ಶಿವರಾತ್ರಿ ಸಂದರ್ಭದಲ್ಲಿ ಶ್ರೀಶೈಲಕ್ಕೆ ಪಾದಯಾತ್ರೆ ಕೈಗೊಳ್ಳುತ್ತಿದ್ದಾರೆ. ಈ ವರ್ಷ 21 ಕ್ಕೂ ಹೆಚ್ಚು ಭಕ್ತರು ತೆರಳಿದರು. ಲಕ್ಷ್ಮೀ ಮೌನೇಶ ದಂಪತಿ ಒಂದು ವರ್ಷದ ಮಗು ಮಲ್ಲಯ್ಯನೊಂದಿಗೆ ಪಾದಯಾತ್ರೆ ಕೈಗೊಂಡಿದ್ದಾರೆ. ಗ್ರಾಮಸ್ಥರು ಪಾದಯಾತ್ರಿಗಳನ್ನು ಗ್ರಾಮದ ಹೊರವಲಯದವರೆಗೆ ಹೋಗಿ ಬೀಳ್ಕೊಟ್ಟರು. ಫೆ.28 ರಂದು ಶ್ರೀಶೈಲ ತಲುಪಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts