More

    ಪೌಷ್ಟಿಕ ಆಹಾರ ಸೇವನೆಯಿಂದ ಆರೋಗ್ಯ ವೃದ್ಧಿ


    ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಾಗರತ್ನಾ ಸಲಹೆ ಪೋಷಣ್ ಮಾಸಾಚರಣೆ ಅಭಿಯಾನ

    ಅರಕೇರಾ: ಪೌಷ್ಟಿಕ ಆಹಾರ, ಹಣ್ಣು, ತರಕಾರಿ, ವಿವಿಧ ಬಗೆಯ ಕಾಳುಗಳನ್ನು ಸೇವಿಸುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಸಹಾಯಕ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ನಾಗರತ್ನಾ ಹೇಳಿದರು.
    ಪಟ್ಟಣದಲ್ಲಿರುವ ಅಂಗನವಾಡಿ ಕೇಂದ್ರ-03ರಲ್ಲಿ ಆರೋಗ್ಯ ಇಲಾಖೆ ಮತ್ತು ಶಿಶು ಅಭಿವೃದ್ಧಿ ಯೋಜನೆ ಇಲಾಖೆ ಆಯೋಜಿಸಿದ್ದ ಪೋಷಣ್ ಮಾಸಾಚರಣೆಯಲ್ಲಿ ಮಾತನಾಡಿ, ಮಕ್ಕಳಿಗೆ ಪೌಷ್ಟಿಕ ಆಹಾರದ ಪೂರೈಕೆ ಅಗತ್ಯ. ಹೀಗಾಗಿ ಆರು ತಿಂಗಳ ಮೇಲ್ಪಟ್ಟ ಮಕ್ಕಳಿಗೆ ಪೂರಕ ಆಹಾರದ ಕುರಿತು ಅರಿವು ಮೂಡಿಸುವುದಕ್ಕಾಗಿ ಸರ್ಕಾರ ಪೋಷಣ್ ಅಭಿಯಾನ ಹಮ್ಮಿಕೊಂಡಿದೆ. ಸ್ವಚ್ಛತೆಯೊಂದಿಗೆ ಮಕ್ಕಳ ಆರೋಗ್ಯಕ್ಕಾಗಿ ಪಾಲಕರು ಪೌಷ್ಟಿಕ ಆಹಾರ ನೀಡಬೇಕೆಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts