More

    ಪ್ರಜಾಪ್ರಭುತ್ವ ಸ್ಥಾಪಿಸಿದ್ದು ಬಸವಣ್ಣ

    ಅರಕೇರಾ: ಬಸವಾದಿ ಶರಣರ ಆಚಾರ, ವಿಚಾರ, ಸಂದೇಶಗಳನ್ನು ಯುವ ಪೀಳಿಗೆ ಅರ್ಥ ಮಾಡಿಕೊಳ್ಳಲಿ ಎಂದು ಪ್ರಾಚಾರ್ಯೆ ವಿದ್ಯಾವತಿ ಹಿರೇಮಠ ಹೇಳಿದರು.

    ತಾಲೂಕಿನ ಜಾಗೀರ ಜಾಡಲದಿನ್ನಿ ಗ್ರಾಮದ ನೀಲಾಂಬಿಕೆ ಬಸವ ಯೋಗಾಶ್ರಮದಲ್ಲಿ ಹಮ್ಮಿಕೊಂಡಿದ್ದ ಬಸವಾದಿ ಶರಣರ ಚಿಂತನಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದರು.

    ಬಸವಣ್ಣ ರಾಜಬೀದಿ, ರಾಜತೇಜ ಹಾಗೂ ಭಕ್ತಿ ಈ ಮೂರು ಪದಗಳನ್ನು ಬಳಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಾರಿಗೆ ತಂದರು. ಆ ಮೂಲಕ ರಾಜಕೀಯ ಸಿದ್ಧಾಂತವನ್ನು ರೂಪಿಸಿದರು. ಬಸವಣ್ಣ ತಾನು ಹುಟ್ಟಿದ ಜಾತಿ ನಿರಾಕರಣೆ ಮಾಡಿದರು. ಕೆಳವರ್ಗದವರ ಜೊತೆ ಸಮೀಕರಣ ಮಾಡಿಕೊಂಡರು. ಸಮ ಸಮಾಜವನ್ನು ಬಸವಣ್ಣ ನಿರ್ಮಿಸಿದರು ಎಂದರು.

    ನೀಲಾಂಬಿಕೆ ಬಸವ ಯೋಗಾಶ್ರಮದ ಅಧ್ಯಕ್ಷ ವೀರಭದ್ರ ಸ್ವಾಮೀಜಿ ಮಾತನಾಡಿ, ಬಸವಣ್ಣ ಸ್ಥಗಿತ ಸ್ಥಿತಿಯನ್ನು ಪ್ರಶ್ನಿಸುವುದನ್ನು ಕಲಿಸಿಕೊಟ್ಟರು. ಸ್ತ್ರೀಯರಿಗೆ ಅಸ್ಮಿತೆ ಒದಗಿಸಿದ್ದಲ್ಲದೆ ಮಹಿಳೆಗೆ ಘನತೆಯ ಬದುಕನ್ನು ಒದಗಿಸಿಕೊಟ್ಟರು. ಬಸವಣ್ಣ ಆರಾಧನೆಯ ಜತೆಗೆ ತತ್ವ ಪಾಲನೆ ಅಗತ್ಯ. ಆತ್ಮ ಸಾಕ್ಷಿಯಾಗಿ ನಡೆದುಕೊಳ್ಳಬೇಕು. ಅಂದಾಗ ಮಾತ್ರ ಬಸವ ಪರಂಪರೆ ಮುಂದುವರಿಯಲು ಸಾಧ್ಯ ಎಂದರು.

    ಪಿಯು, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಬಿ.ವಿರುಪನಗೌಡ ಗಣದಿನ್ನಿ, ಉಪನ್ಯಾಸಕಿ ಬುದ್ಧಿವಂತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts