More

    ಹಾನಗಲ್ಲಮ್ಮ ದೇವಿ ರಥೋತ್ಸವ ಸಂಪನ್ನ

    • ಅರಕಲಗೂಡು : ಇತಿಹಾಸ ಪ್ರಸಿದ್ಧ ಹಾನಗಲ್ ಗ್ರಾಮದೇವತೆ ಶ್ರೀ ಹಾನಗಲ್ಲಮ್ಮ ರಥೋತ್ಸವ ಶನಿವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿತು. ಹಾನಗಲ್ ಗ್ರಾಮದಲ್ಲಿ ಎರಡು ದಿನಗಳ ಕಾಲ ಹಬ್ಬದ ವಾತಾವರಣ ಮನೆ ಮಾಡಿತ್ತು. ಶುಕ್ರವಾರ ಸಂಜೆಯಿಂದಲೇ ದೇವಸ್ಥಾನದಲ್ಲಿ ವಿವಿಧ ಪೂಜಾ ಕಾರ್ಯಗಳು ವಿಧಿವತ್ತಾಗಿ ಆರಂಭಗೊಂಡಿದ್ದವು. ಶ್ರೀ ಅಂಜನೇಯಸ್ವಾಮಿ ದೇವಸ್ಥಾನದಲ್ಲಿ ಸಂಪ್ರದಾಯಂದಂತೆ ಪೂಜಾ ವಿಧಾನಗಳನ್ನು ಪೂರ್ಣಗಳಿಸಿದ ನಂತರ ಭಕ್ತರು ಅಲಂಕೃತ ಸಿಡಿ ಕಂಬವೇರಿ ಭಕ್ತಿಯ ಉನ್ಮಾನದಲ್ಲಿ ದೇವಸ್ಥಾನ ಸುತ್ತ ಪ್ರದಕ್ಷಿಣೆ ಹಾಕಿದರು. ಸಿಡಿ ಉತ್ಸವವನ್ನು ಅಪಾರ ಭಕ್ತರು ಕಣ್ತುಂಬಿಕೊಂಡು ದೇವಿಗೆ ಸೇವೆಗೆ ಸಮರ್ಪಿಸಿದರು. ಶುಕ್ರವಾರ ರಾತ್ರಿ ದೇವಸ್ಥಾನ ಮುಂಭಾಗ ಕೆಂಡೋತ್ಸವ ನಡೆಯಿತು. ಭಕ್ತರು ಉರಿಯುವ ಕೆಂಡ ತುಳಿದು ಹರಕೆ ಸಮರ್ಪಣೆ ಮಾಡಿದರು. ಸರದಿ ಸಾಲಿನಲ್ಲಿ ನಿಂತು ದೇವಿ ದರ್ಶನ ಪಡೆದರು. ವಿದ್ಯುತ್ ದೀಪಗಳಿಂದ ಸಿಂಗರಿಸಿದ್ದ ಗ್ರಾಮದಲ್ಲಿ ದೇವಸ್ಥಾನ ಬಣ್ಣ ಬಣ್ಣದ ಬೆಳಕಿನಿಂದ ಝಗಮಗಿಸಿತು.
      ಶನಿವಾರ ಮಧ್ಯಾಹ್ನ ಅಲಂಕೃತ ರಥದ ಮೇಲೆ ದೇವರ ಉತ್ಸವಮೂರ್ತಿ ಕೂರಿಸಿ ಭಕ್ತರ ಜಯಘೋಷಗಳ ನಡುವೆ ತೇರು ಎಳೆಯಲಾಯಿತು. ಭಕ್ತರು ತೇರಿನತ್ತ ಹಣ್ಣು, ದವನ ಎಸೆದು ಭಕ್ತಿ ಸಮರ್ಪಿಸಿದರು. ಶನೇಶ್ವರಸ್ವಾಮಿ ಚಿಕ್ಕ ತೇರು ಇದೇ ಸಂದರ್ಭ ಹಿಂಬಾಲಿಸಿತು. ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ಮಜ್ಜಿಗೆ, ಪಾನಕ ಪ್ರಸಾದ ವಿತರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts