More

    ಮೂರು ಮತ್ತೊಂದು ಶಾಸಕರ ನಡುವೆ ವಿಧೇಯಕಕ್ಕೆ ಅನುಮೋದನೆ!

    ಬೆಂಗಳೂರು: ವಿರಳ ಸಂಖ್ಯೆಯಲ್ಲಿ ಹಾಜರಿದ್ದ ಶಾಸಕರು, ಜೆಡಿಎಸ್ ಶಾಸಕರ ಧರಣಿ, ಸಚಿವರ ಕೊರತೆ ನಡುವೆಯೇ ಶಾಸನವೊಂದಕ್ಕೆ ವಿಧಾನಸಭೆ ಅನುಮೋದನೆ ನೀಡಿತು.
    ಗುರುವಾರ ಸಂಜೆ ವೇಳೆ ಕರ್ನಾಟಕ ಕೃಷ್ಣ ಜಲಾನಯನ ಪ್ರದೇಶಾಭಿವೃದ್ಧಿ ಪ್ರಾಧಿಕಾರ (ನಿರಸನಗೊಳಿಸುವ) ವಿಧೇಯಕ, 2021ರ ಪರ್ಯಾಲೋಚನೆ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗಿತ್ತು. ಈ ವೇಳೆ ಕಾಂಗ್ರೆಸ್‌ನ ಮುಖ್ಯ ಸಚೇತಕ ಅಜಯ್ ಧರ್ಮಸಿಂಗ್ ಸೇರಿ ನಾಲ್ವರು ಶಾಸಕರು ಸದನದೊಳಗಿದ್ದರು. ಆಡಳಿತ ಪಕ್ಷದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್, ದೊಡ್ಡನಗೌಡ ಸೇರಿ 8-10 ಮಂದಿ ಶಾಸಕರು ಹಾಜರಿದ್ದರು. ಅಲ್ಲಿದ್ದ 3-4 ಸಚಿವರು ಗುಂಪಲ್ಲಿ ಮಾತನಾಡುತ್ತಿದ್ದರು. ಜೆಡಿಎಸ್‌ನವರು ಸ್ಪೀಕರ್ ಪೀಠದ ಮುಂದೆ ಧರಣಿಯಲ್ಲಿದ್ದರು.

    ಕೃಷ್ಣ ಜಲಾನಯನ ಪ್ರದೇಶದಲ್ಲಿನ ಎಲ್ಲಾ ನೀರಾವರಿ ಯೋಜನೆಗಳ ಯೋಜನೆ, ವಿಚಾರಣೆ, ಅಂದಾಜು, ಕಾರ್ಯಗತಗೊಳಿಸುವಿಕೆ, ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಪ್ರಸ್ತುತ ಕೃಷ್ಣಭಾಗ್ಯ ಜಲ ನೀರಾವರಿ ನಿಗಮ ಮತ್ತು ಕರ್ನಾಟಕ ನೀರಾವರಿ ನಿಗಮದ ಅಡಿಯಲ್ಲಿ ಕೈಗೊಳ್ಳಲಾಗುತ್ತಿದೆ. ಆದ್ದರಿಂದ ಕೃಷ್ಣ ಜಲಾನಯನ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಅಧಿನಿಯಮ, 1992ನ್ನು ನಿರಸನಗೊಳಿಸಲಾಗುತ್ತಿದೆ ಎಂದು ಸರ್ಕಾರದ ಪರವಾಗಿ ಗೃಹ ಸಚಿವ ಬೊಮ್ಮಾಯಿ ವಿವರಿಸಿದರು. ಈ ಕಾಯ್ದೆ ಬಗ್ಗೆ ಸಭೆಯಲ್ಲಿ ಇದ್ದ ಮೂರು ಮತ್ತೊಂದು ಮಂದಿಯೂ ಅಭಿಪ್ರಾಯ ನೀಡಲು ಇಚ್ಛಿಸದೆ ಇದ್ದುದರಿಂದ ಅನುಮೋದನೆ ಪಡೆದುಕೊಳ್ಳಲಾಯಿತು. ಈ ಸಂದರ್ಭದಲ್ಲಿ ವಿಧೇಯಕವನ್ನು ಮತಕ್ಕೆ ಹಾಕಿ ಎಂದು ಧರಣಿ ನಿರತ ಜೆಡಿಎಸ್ ಶಾಸಕರು ಘೋಷಣೆ ಹಾಕಿದರು.

    ಸಿಎಂ ಮನವೊಲಿಕೆಯಿಂದಾಗಿ ಪಟ್ಟು ಸಡಿಲಿಸಿದ ರೇವಣ್ಣ; ಯಡಿಯೂರಪ್ಪ ಮಾತಿಗೆ ಮೆತ್ತಗಾಗಿ ಧರಣಿ ಕೈಬಿಟ್ಟ ಜೆಡಿಎಸ್

    ಬಿಜೆಪಿ ಪ್ರಶ್ನೆ, ಸಚಿವರ ಉತ್ತರ, ಜೆಡಿಎಸ್ ಧರಣಿ!; ಪರಿಷತ್ ಕಲಾಪ ಮುಂದೂಡಿಕೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts