More

    ಇತ್ತ ಸಿಎಂ ಸೇತುವೆ ಉದ್ಘಾಟನೆ ಮಾಡ್ತಾಯಿದ್ರೆ, ಅತ್ತ ಸಂಪರ್ಕ ರಸ್ತೆ ಕೊಚ್ಚಿ ಹೋಗ್ತಾಯಿತ್ತು….!

    ಪಟನಾ: ಅದೇನೋ ಮುಖ್ಯಮಂತ್ರಿಗೂ ಅಲ್ಲಿನ ಸೇತುವೆಗಳಿಗೂ ಆಗಿ ಬರೋದೇ ಇಲ್ಲವೇನೋ ಎಂಬಂತಾಗಿದೆ. ಅದರಲ್ಲೂ ಈ ಪ್ರವಾಹದ ಪರಿಸ್ಥಿತಿಯಲ್ಲಿ ಸಿಎಂ ಉದ್ಘಾಟಿಸಿದ ಯೋಜನೆಗಳು ವಿಪಕ್ಷದ ವ್ಯಂಗ್ಯಕ್ಕೆ ಗುರಿಯಾಗುತ್ತಿವೆ.

    ಕಳೆದ ತಿಂಗಳಷ್ಟೇ ಬಿಹಾರ್​ ಸಿಎಂ ನಿತೀಶ್​ಕುಮಾರ್​ ಉದ್ಘಾಟಿಸಿದ್ದ ಸೇತುವೆಯ ಸಂಪರ್ಕ ರಸ್ತೆ ಪ್ರವಾಹದಿಂದಾಗಿ ಕೊಚ್ಚಿ ಹೋಗಿತ್ತು. ಇದೀಗ ಅಂಥದ್ದೇ ಮತ್ತೊಂದು ಪ್ರಕರಣ ವರದಿಯಾಗಿದೆ. ಗೋಪಾಲ್​ಗಂಜ್​ ಜಿಲ್ಲೆಯ ‘ಬಂಗ್ರಾ ಘಾಟ್​ನ ಮಹಾ ಸೇತು’ವೆಯನ್ನು ಸಿಎಂ ನಿತೀಶ್​ಕುಮಾರ್​ ವಿಡಿಯೋ ಸಂವಾದದ ಮೂಲಕ ಬೆಳಗ್ಗೆಯಷ್ಟೇ ಉದ್ಘಾಟಿಸಿದ್ದರು. ಆದರೆ, ಸ್ಥಳದಲ್ಲಿದ್ದ ವಾಸ್ತವವೇ ಬೇರೆಯಾಗಿತ್ತು.

    ಇದನ್ನೂ ಓದಿ; ಏರ್​ ಇಂಡಿಯಾ ವಿಮಾನ ದುರಂತದ ಸಂತ್ರಸ್ತರಿಗೆ ಸಿಗಲಿದೆ 1.19 ಕೋಟಿ ರೂ. ಪರಿಹಾರ…! ಲೆಕ್ಕಾಚಾರ ಹೇಗೆ? 

    ಇತ್ತ ಉದ್ಘಾಟನೆ ನಡೆಯುತ್ತಿದ್ದರೆ, ಅತ್ತ ಸ್ಥಳದಲ್ಲಿ ಕೊಚ್ಚಿಹೋದ ಸಂಪರ್ಕ ರಸ್ತೆಯನ್ನು ದುರಸ್ತಿ ಮಾಡಲಾಗುತ್ತಿತ್ತು. ಸರಣ್​ ಜಲಾಶಯದಲ್ಲಿ ಬಿರುಕು ಕಂಡುಬಂದ ಕಾರಣ ಡ್ಯಾಮ್​ನಿಂದ ಭಾರಿ ಪ್ರಮಾಣದಲ್ಲಿ ನೀರು ಹೊರಗೆ ಬಿಡಲಾಗುತ್ತಿತ್ತು. ಏಕಾಏಕಿ ನೀರು ಹೆಚ್ಚಿದ್ದರಿಂದ ಸೇತುವೆಯ ಸಂಪರ್ಕ ರಸ್ತೆ ಕೊಚ್ಚಿ ಹೋಗಿತ್ತು. ಹೀಗಾಗಿ ಅಧಿಕಾರಿಗಳು ತರಾತುರಿಯಲ್ಲಿ ರಸ್ತೆಯ ದುರಸ್ತಿ ಕಾರ್ಯದಲ್ಲಿ ತೊಡಗಿದ್ದರು.

    ಇದೇ ಸೇತುವೆಯ ಸಂಪರ್ಕ ರಸ್ತೆ 12 ದಿನಗಳ ಹಿಂದೆಯೂ ಕೊಚ್ಚಿ ಹೋಗಿತ್ತು ಎನ್ನಲಾಗಿದೆ. ಹೀಗಿದ್ದರೂ ಸೇತುವೆಯನ್ನು ಉದ್ಘಾಟಿಸುವ ತರಾತುರಿ ಏಕೆ ಎಂದು ವಿಪಕ್ಷ ನಾಯಕ ತೇಜಶ್ವಿ ಯಾದವ್​ ಪ್ರಶ್ನಿಸಿದ್ದಾರೆ.

    ಇದನ್ನೂ ಓದಿ; ರಷ್ಯಾದ್ದಲ್ಲ, ಚೀನಾ ಲಸಿಕೆಯೇ ಮೊದಲು…! ಜೂನ್​ನಲ್ಲಿಯೇ ಬಳಕೆಯಾಗುತ್ತಿದೆ ಕ್ಯಾನ್​ಸಿನೋ ಔಷಧ 

    ಇದಕ್ಕೂ ಒಂದು ತಿಂಗಳ ಮುಂಚೆ ಗಂಡಕ್​ ನದಿ ಅಡ್ಡಲಾಗಿ ಕಟ್ಟಿದ್ದ ಸತ್ತರ್​ಘಾಟ್​ ಸೇತುವೆಯ ಸಂಪರ್ಕ ರಸ್ತೆಯೂ ಕೊಚ್ಚಿ ಹೋಗಿತ್ತು. ಇದನ್ನು ಜೂನ್​ನಲ್ಲಿ ಸಿಎಂ ಉದ್ಘಾಟಿಸಿದ್ದರು.

    https://www.vijayavani.net/more-than-88000-bsnl-employees-will-be-fired-says-bjp-mp/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts