More

    ಸರ್ಕಾರಿ ಆಸ್ಪತ್ರೆಗೆ ಖಾಸಗಿ ವೈದ್ಯರ ನೇಮಕ

    ರಟ್ಟಿಹಳ್ಳಿ: ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಮಾಸೂರಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಒಟ್ಟು 25 ಆಕ್ಸಿಜನ್ ಸಿಲಿಂಡರ್ ಪೂರೈಸಲಾಗಿದೆ. ಪಟ್ಟಣದಲ್ಲಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇರುವುದರಿಂದ ಖಾಸಗಿ ಬಿಎಎಂಎಸ್ ಅಥವಾ ಎಂಬಿಬಿಎಸ್ ವೈದ್ಯರ ಅವಶ್ಯಕತೆ ಇದೆ. ಸೇವೆ ಸಲ್ಲಿಸುವ ಆಸಕ್ತಿ ಇರುವ ವೈದ್ಯರನ್ನು ಅಗತ್ಯವಿದ್ದಲ್ಲಿ ನೇಮಿಸಿ, ವೇತನ ಭರಿಸುವ ವ್ಯವಸ್ಥೆ ಮಾಡಲಾಗುವುದು ಎಂದು ತಹಸೀಲ್ದಾರ್ ಕೆ. ಗುರುಬಸವರಾಜ ಹೇಳಿದರು.

    ಪಟ್ಟಣದ ಖಾಸಗಿ ವೈದ್ಯರೊಂದಿಗೆ ಸೋಮವಾರ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಆಸ್ಪತ್ರೆಗೆ ಬರುವ ರೋಗಿಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ರೋಗಿಯಲ್ಲಿ ಕೋವಿಡ್-19 ಲಕ್ಷಣಗಳು ಇರಲಿ, ಬಿಡಲಿ ಸಂದೇಹ ಬಂದ ಕೂಡಲೆ ಅವರನ್ನು ತಪಾಸಣೆಗೆ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಕಳುಹಿಸಿ ಕೊಡಬೇಕು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಈಗಾಗಲೇ ಕೃಷಿ ಸಚಿವ ಬಿ.ಸಿ. ಪಾಟೀಲ ಅವರ ನಿರ್ದೇಶನದಂತೆ ಪ್ರತ್ಯೇಕ ಕೋವಿಡ್ ಸೆಂಟರ್ ವ್ಯವಸ್ಥೆ ಮಾಡಲಾಗುತ್ತಿದೆ. ಇಲ್ಲಿಗೆ 15 ಆಕ್ಸಿಜನ್ ಜಂಬೋ ಸಿಲಿಂಡರ್ ಮತ್ತು ಮಾಸೂರಿಗೆ 10 ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಮಾಡಲಾಗಿದೆ. ವೈದ್ಯರನ್ನು ನೇಮಿಸುವ ಅವಕಾಶವಿದೆ. ಸೇವೆ ಸಲ್ಲಿಸುವ ಇಚ್ಛೆ ಇದ್ದ ವೈದ್ಯರು ನಮ್ಮನ್ನು ಸಂರ್ಪಸಬೇಕು. ರಟ್ಟಿಹಳ್ಳಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ಹೋಗಿ-ಬರಲು ಪ್ರತ್ಯೇಕ ಪ್ರವೇಶ ದ್ವಾರ ನಿರ್ವಿುಸಲಾಗಿದೆ. ಪಪಂ ಸಹಯೋಗದೊಂದಿಗೆ 24 ಬೆಡ್ ವ್ಯವಸ್ಥೆ ಮಾಡಲಾಗಿದೆ ಎಂದರು.

    ಡಾ. ವಿ.ಎನ್. ಜೋಷಿ, ಡಾ. ಪ್ರಶಾಂತ ಬಸವನಾಳಮಠ, ಡಾ. ಗುರುರಾಜ ಶಂಭಣ್ಣನವರ, ಡಾ. ಹುಗ್ಗಣ್ಣನವರ, ಪಪಂ ಮುಖ್ಯಾಧಿಕಾರಿ ಉಮೇಶ ಗುಡ್ಡದ, ಆರೋಗ್ಯ ಕಿರಿಯ ಸಹಾಯಕ ನಾಗರಾಜ ಪ್ಯಾಟಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts