More

    ಕರ್ನಾಟಕ ರಾಜ್ಯ ಕಾನೂನು ವಿವಿ ಸಂಶೋಧನಾ ಸಹಾಯಕರಿಗೆ ವೇತನ ಎಷ್ಟಿರುತ್ತದೆ?

    ಹುಬ್ಬಳ್ಳಿ : ನವನಗರದಲ್ಲಿರುವ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಸಹಾಯಕ ಹುದ್ದೆಗಳನ್ನು ಮಾಸಿಕ ಸಂಚಿತ ವೇತನದ ಆಧಾರದ ಮೇಲೆ ಎರಡು ವರ್ಷದ ಅವಧಿಗೆ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
    ವಿವಿಯಲ್ಲಿನ ‘ಜಲ ಸಂಪನ್ಮೂಲ ನಿರ್ವಹಣೆ ಮತ್ತು ಕಾನೂನು’ ಹಾಗೂ ‘ಪ್ರಜಾಪ್ರಭುತ್ವ ಮತ್ತು ಸಂವಿಧಾನಾತ್ಮಕ ಸರ್ಕಾರ’ ಈ ಎರಡೂ ಸಂಶೋಧನಾ ಕೇಂದ್ರಗಳಲ್ಲಿ ಹಿರಿಯ ಸಂಶೋಧನಾ ಸಹಾಯಕ-2 ಹುದ್ದೆಗಳು ಹಾಗೂ ಕಿರಿಯ ಸಂಶೋಧನಾ ಸಹಾಯಕ- 4 ಹುದ್ದೆಗಳಿವೆ.

    ಇದನ್ನೂ ಓದಿ:  ದೇಶದಲ್ಲಿ 5ಕ್ಕೆ ಇಳಿಯುತ್ತಾ ಸರ್ಕಾರಿ ಸ್ವಾಮ್ಯದ ಬ್ಯಾಂಕ್​ಗಳ ಸಂಖ್ಯೆ?

    ಕಾನೂನು ವಿಷಯದಲ್ಲಿ ಸ್ನಾತಕೋತ್ತರ ಪದವಿ (ಎಲ್​ಎಲ್​ಎಂ) ಕನಿಷ್ಠ ಶೇ 55 ಅಂಕಗಳೊಂದಿಗೆ ಪಾಸಾಗಿರಬೇಕು. ಸಂಶೋಧನಾ ಪ್ರಾಜೆಕ್ಟ್​​​/ ಲೇಖನಗಳ ಪ್ರಕಟಣೆಯ ಮೂಲಕ ಗುರುತಿಸಬಹುದಾದ ಸಂಶೋಧನಾ ಸಾಮರ್ಥ್ಯವಿರುವ ಅಭ್ಯರ್ಥಿಗಳಿಗೆ ಆದ್ಯತೆ ಇರುತ್ತದೆ. ಈ ಅರ್ಹತೆಯೊಂದಿಗೆ ಹಿರಿಯ ಸಂಶೋಧನಾ ಸಹಾಯಕ ಹುದ್ದೆಗಳಿಗೆ ಅಭ್ಯರ್ಥಿಗಳು ಪಿಎಚ್​​ಡಿ/ ನೆಟ್/ ಸೆಟ್ ಅರ್ಹತೆ ಹೊಂದಿರಬೇಕು. ಕ್ರಮವಾಗಿ ಹುದ್ದೆಗಳ ಅಭ್ಯರ್ಥಿಗಳಿಗೆ ಮಾಸಿಕ 60,000 ಹಾಗೂ 30,000/- ವೇತನವಿರುತ್ತದೆ.
    ವಯೋಮಿತಿ- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷ, ಎಸ್​ಸಿ, ಎಸ್​ಟಿ, ಪ್ರವರ್ಗ 1ರ ಅಭ್ಯರ್ಥಿಗಳಿಗೆ 40 ವರ್ಷ ನಿಗದಿಪಡಿಸಲಾಗಿದೆ.

    ಇದನ್ನೂ ಓದಿ:  ರಾಜ್ಯಸಭೆ ಚುನಾವಣೆಯಲ್ಲಿ ಮತ ಚಲಾಯಿಸಲು 35 ಕೋಟಿ ರೂ. ಆಫರ್​..!

    ಆಸಕ್ತ ಅಭ್ಯರ್ಥಿಗಳು ವಿವಿಯ ಜಾಲತಾಣದಲ್ಲಿ ಲಭ್ಯವಿರುವ ಅರ್ಜಿ ನಮೂನೆಗಳನ್ನು ಡೌನ್​ಲೋಡ್ ಮಾಡಿಕೊಂಡು ಭರ್ತಿ ಮಾಡಿ ಹಾರ್ಡ್ ಹಾಗೂ ಸಾಫ್ಟ್ ಪ್ರತಿಯನ್ನು ‘ಕುಲಸಚಿವರು, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ನವನಗರ, ಹುಬ್ಬಳ್ಳಿ- 580025’ ([email protected]) ಈ ವಿಳಾಸಕ್ಕೆ ಜುಲೈ 30ರೊಳಗಾಗಿ ಕಳುಹಿಸಬೇಕು. ಹೆಚ್ಚಿನ ವಿವರಗಳಿಗೆ www.kslu.ac.in ಸಂಪರ್ಕಿಸಬಹುದು.

    ಕಾಜಿರಂಗ್ ರಾಷ್ಟ್ರೀಯ ಉದ್ಯಾನದಲ್ಲಿ ಅತಿದೊಡ್ಡ ಹೈಲ್ಯಾಂಡ್ ನಿರ್ಮಾಣಕ್ಕೆ ಕೇಂದ್ರದ ಗ್ರೀನ್ ಸಿಗ್ನಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts