More

    ವಿದ್ಯಾರ್ಥಿಗಳ ಭವಿಷ್ಯಕ್ಕೆ ಎನ್ನೆಸ್ಸೆಸ್ ಸಹಕಾರಿ

    ಅಳವಂಡಿ: ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣ, ಸಹೋದರತ್ವ ಭಾವ, ದೇಶಪ್ರೇಮ, ಧೈರ್ಯ, ಶಿಸ್ತು, ತಾಳ್ಮೆ ವೃದ್ಧಿಗೆ ಎನ್ನೆಸ್ಸೆಸ್ ಸಹಕಾರಿಯಾಗಿದೆ ಎಂದು ನಿವೃತ್ತ ಪ್ರಾಚಾರ್ಯ ಡಿ.ಜಿ. ಲಕ್ಕನಗೌಡರ ತಿಳಿಸಿದರು. ಗ್ರಾಮದ ಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಎನ್ನೆಸ್ಸೆಸ್ ಶಿಬಿರದ ಮುಕ್ತಾಯ ಸಮಾರಂಭ ಉದ್ದೇಶಿಸಿ ಬುಧವಾರ ಮಾತನಾಡಿದರು.

    ಕರ್ನಾಟಕ ವಿದ್ಯಾವರ್ಧಕ ಸಮಿತಿ ಅಧ್ಯಕ್ಷ ಭುಜಂಗಸ್ವಾಮಿ ಇನಾಮದಾರ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಎನ್ನೆಸ್ಸೆಸ್ ಸಹಕಾರಿಯಾಗಿದೆ. ರಾಷ್ಟ್ರ ನಿರ್ಮಾಣದಲ್ಲಿ ಯುವ ಜನತೆ, ಅದರಲ್ಲೂ ಗ್ರಾಮೀಣರು ಹೆಚ್ಚಾಗಿ ಪಾಲ್ಗೊಳ್ಳಬೇಕೆಂಬ ಉದ್ದೇಶದಿಂದ ಶಿಬಿರ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

    ಪ್ರಾಚಾರ್ಯ ಚಂದ್ರಶೇಖರ ದೊಡ್ಡಮನಿ, ನಿವೃತ್ತ ಪ್ರಾಚಾರ್ಯ ಎಂ.ಎಸ್. ಹೊಟ್ಟಿನ, ಪ್ರಮುಖರಾದ ಮಹಾನಂದಿ, ನವೀನ ಇನಾಮದಾರ, ಎಸ್.ಎಸ್.ಅಂಗಡಿ, ವಿಜಯಕುಮಾರ ಹೊಟ್ಟಿನ, ಮಲ್ಲಪ್ಪ ಅಂಬಿಗೇರ, ವಿ.ಎಚ್.ಪುಲೇಶಿ, ಮಂಜುನಾಥ ಕೊಪ್ಪಳ, ಹನುಮಂತ ಲಮಾಣಿ, ವಿಜಯಕುಮಾರ, ಸಂಪಕ್ಕ, ವಾಸವಿ, ಶಕುಂತಲಾ, ನೀಲಪ್ಪ ಹಕ್ಕಂಡಿ, ಅಂಬರೀಶ ಬೋಚನಹಳ್ಳಿ, ಮಹೇಶ ಮಾಳೆಕೊಪ್ಪ, ಬಸವರಾಜ, ಚನ್ನಯ್ಯ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts