More

    22 ವರ್ಷಗಳಿಂದ ಪತ್ನಿಯ ತವರು ಮನೆಯಲ್ಲಿ ಹೋಳಿ ಹಬ್ಬಕ್ಕೆ ಹೋಗಿಲ್ಲ; 10 ದಿನ ರಜೆ ನೀಡಿ ಎಂದು ಪತ್ರ ಬರೆದ ಇನ್ಸ್​ಪೆಕ್ಟರ್!

    ಉತ್ತರ ಪ್ರದೇಶ: ಮದುವೆಯಾಗಿ 22 ವರ್ಷ ಕಳೆದರೂ ಒಂದು ಬಾರಿಯ ಹೆಂಡತಿಯ ತವರು ಮನೆಯಲ್ಲಿ ನಡೆಯುವ ಸಂಭ್ರಮದ ಹೋಳಿ ಹಬ್ಬಕ್ಕೆ ಹೋಗಲು ಸಾಧ್ಯವಾಗಿಲ್ಲ. ಈ ಬಾರಿ ದಂಪತಿಗಳಾಗಿ ತವರು ಮನೆಗೆ ಹೋಗಬೇಕೆಂದು ಪತ್ನಿ ಬಯಸಿದ್ದಾಳೆ. ಹೀಗಾಗಿ ನನಗೆ 10 ದಿನ ರಜೆ ನೀಡಬೇಕೆಂದು ಇನ್ಸ್​ಪೆಕ್ಟರ್ ಒಬ್ಬರು ಎಸ್​ಪಿಗೆ ಪತ್ರ ಬರೆದಿದ್ದಾರೆ. ಇನ್ಸ್ ಪೆಕ್ಟರ್ ಮನವಿಗೆ ಸ್ಪಂದಿಸಿರುವ ಎಸ್​ಪಿ 10 ದಿನ ಸಾಧ್ಯವಿಲ್ಲ ಎಂದು ಹೇಳಿ 5 ದಿನ ರಜೆ ನೀಡಿದ್ದಾರೆ.

    ಇದನ್ನೂ ಓದಿ: ಸಿಲಿಂಡರ್ ಸ್ಫೋಟಕ್ಕೆ ಛಿದ್ರವಾಗಿ ಹೋಯ್ತು ಬಾಲಕನ ದೇಹ!

    ಇದೀಗ ಇನ್ಸ್​ಪೆಕ್ಟರ್ ರಜೆ ಕೋರಿ ಎಸ್​ಪಿಗೆ ನೀಡಿರುವ ಅರ್ಜಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಘಟನೆ ನಡೆದಿರುವ ಉತ್ತರ ಪ್ರದೇಶದ ಫರೂಕಾಬಾದ್‌ನಲ್ಲಿರುವ ಫತೇಘರ್‌ ಎಂಬಲ್ಲಿ. ಇಲ್ಲಿನ ಪೊಲೀಸ್ ಲೈನ್‌ನಲ್ಲಿ ಇನ್ಸ್‌ಪೆಕ್ಟರ್ ಆಗಿರುವ ಅಶೋಕ್ ಕುಮಾರ್ ಹೋಳಿ ರಜೆ ನೀಡುವಂತೆ ಪತ್ರ ಬರೆದವರು. ಎಸ್​ಪಿ ಅಶೋಕ್ ಮೀನಾ ಅವರಿಗೆ ರಜೆಗಾಗಿ ಅರ್ಜಿ ಸಲ್ಲಿಸಿದ್ದರು.

    ಅರ್ಜಿಯಲ್ಲಿ ಇನ್ಸ್‌ಪೆಕ್ಟರ್ ಅಶೋಕ್ ಕುಮಾರ್, ಮದುವೆಯಾಗಿ 22 ವರ್ಷಗಳಾಗಿವೆ. ಇಷ್ಟು ವರ್ಷಗಳಲ್ಲಿ ಒಂದು ಬಾರಿಯೂ ಹೆಂಡತಿಯೊಂದಿಗೆ ಹೋಳಿಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಇದರಿಂದ ಪತ್ನಿ ತುಂಬಾ ಕೋಪಗೊಂಡಿದ್ದು, ಈ ವರ್ಷ ಹೋಳಿ ಹಬ್ಬದಂದು ಪತ್ನಿ ತನ್ನ ತಾಯಿಯ ಮನೆಗೆ ಹೋಗಬೇಕೆಂದು ಒತ್ತಾಯಿಸುತ್ತಿದ್ದಾಳೆ. ಈ ಕಾರಣಕ್ಕಾಗಿ ಹೋಳಿ ರಜೆಯ ಅವಶ್ಯಕತೆಯಿದೆ. ದಯವಿಟ್ಟು 10 ದಿನಗಳ ರಜೆ ನೀಡಿ ಎಂದು ಬರೆದುಕೊಂಡಿದ್ದಾರೆ. (ಏಜೆನ್ಸೀಸ್)

    ಇದನ್ನೂ ಓದಿ: ಹೆಂಡತಿಯನ್ನು 11 ವರ್ಷ ಮನೆಯಲ್ಲಿ ಕೂಡಿ ಹಾಕಿದ ಲಾಯರ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts