More

    ಉಳ್ಳವರಿಂದ ದಲಿತರ ಜಮೀನು ಕಬಳಿಕೆ

    ಸೂಕ್ತ ಕ್ರಮ ಕೈಗೊಳ್ಳಲು ಸಂಘಟನೆಗಳಿಂದ ತಹಸೀಲ್ದಾರ್‌ಗೆ ಮನವಿ

    ವಿಜಯವಾಣಿ ಸುದ್ದಿಜಾಲ ಹೊಸಕೋಟೆ
    ತಾಲೂಕಿನ ಹಲವು ಗ್ರಾಮದಲ್ಲಿ ಕೆಲವು ಪ್ರಭಾವಿಗಳು ಸರ್ಕಾರಿ ಜಮೀನಿನಲ್ಲಿದ್ದ ಕುಂಟೆ, ರಾಜ ಕಾಲುವೆಯನ್ನು ಮುಚ್ಚಿ ಜಮೀನು ಕಬಳಿಸುತ್ತಿದ್ದಾರೆ. ಇದನ್ನು ತಡೆದು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಅಂಬೇಡ್ಕರ್ ಸೇವಾ ಸಮಿತಿಯಿಂದ ನಗರದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ, ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
    ಸಮಿತಿ ಸಂಸ್ಥಾಪಕ ಅಧ್ಯಕ್ಷ ಸಂದೇಶ ಮಾತನಾಡಿ, ತಾಲೂಕಿನ ನಂದಗುಡಿ ಹೋಬಳಿಯ ದೊಡ್ಡ ರಾಮನಹಳ್ಳಿ ಗ್ರಾಮದ ಸರ್ವೇ ನಂ.2ರಲ್ಲಿ 121 ಎಕರೆ ಸರ್ಕಾರಿ ಜಮೀನಿದ್ದು, ದಲಿತ ಸಮುದಾಯದವರು 40 ವರ್ಷಗಳಿಂದ ಸಮೂನೆ 57, 53ರಲ್ಲಿ ಅರ್ಜಿ ಹಾಕಿ ವ್ಯವಸಾಯ ಮಾಡಿಕೊಂಡು ಜೀವನ ಕಟ್ಟಿಕೊಂಡಿದ್ದಾರೆ ಎಂದರು.
    ಆದರೆ, ಕೆಲ ವರ್ಷಗಳಿಂದ ಭೂಗಳ್ಳರು, ರಿಯಲ್ ಎಸ್ಟೇಟ್ ದಂಧೆಕೋರರು ಅಕ್ರಮವಾಗಿ ಸರ್ಕಾರಿ ಜಾಗದಲ್ಲಿದ್ದ ಕುಂಟೆ, ಕಾಲುವೆರಾಜಕಾಲುವೆ ಮುಚ್ಚಿ ಪೂರ್ತಿ ಜಮೀನಿಗೆ ನಕಲಿ ಸರ್ವೇ ದಾಖಲೆ ಸೃಷ್ಟಿಸಿ ನಕಲಿ ಸಾಗುವಳಿ ಚೀಟಿ ಪಡೆದುಕೊಂಡು 40 ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಬಡವರಿಗೆ ಅನ್ಯಾಯ ಮಾಡುವ ಮೂಲಕ ಸರ್ಕಾರಿ ಜಮೀನನ್ನ ಕಬಳಿಸುವ ಹುನ್ನಾರ ಮಾಡುತ್ತಿದ್ದಾರೆ ಎಂದು ದೂರಿದರು.
    ಕೂಡಲೇ ತಹಸಿಲ್ದಾರ್ ಎಚ್ಚೆತ್ತುಕೊಂಡು ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನಿನಲ್ಲಿ ಮಾಡುತ್ತಿರುವ ಕಾಮಗಾರಿ ನಿಲ್ಲಿಸಿ, ದೂರು ದಾಖಲಿಸಿ ನಕಲಿ ಸರ್ವೇಯನ್ನು ವಜಾಗೊಳಿಸಬೇಕು. ಹೊಸದಾಗಿ ಸರ್ವೇ ನಡೆಸಿ ದಲಿತರು, ರೈತರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts