More

    ಅಪ್ಪಣ್ಣ ಅನಿಷ್ಟ ಪದ್ಧತಿ ನಿರ್ಮೂಲಕ ನಂದೇಶ್ವರ

    ನಂದೇಶ್ವರ: ಬಸವಾದಿ ಶರಣರ 12 ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರ ಜತೆಗೆ ಹೆಚ್ಚಿನ ಒಡನಾಟದಲ್ಲಿ ಇದ್ದವರು ಹಡಪದ ಅಪ್ಪಣ್ಣ. ಬಹುಶ: ನಮ್ಮ ನಾಡಿನಲ್ಲಿ ಬಸವಣ್ಣನವರು ಜನಿಸದೇ ಇದ್ದಿದ್ದರೇ ಇಂದು ನಾವು ಹಡಪದ ಅಪ್ಪಣ್ಣ, ಮಾದಾರ ಚನ್ನಯ್ಯ, ಅಂಭಿಗರ ಚೌಡಯ್ಯ ನವರಂತಹ ಮಹಾನ ಶರಣರ ಹೆಸರು ನಾವು ಕೇಳುತ್ತಿರಲಿಲ್ಲ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

    ಸಮೀಪದ ಸತ್ತಿ ಗ್ರಾಮದಲ್ಲಿ ಶಿವಶರಣ ಹಡಪದ ಅಪ್ಪಣ್ಣನವರ 889ನೇ ಜಯಂತ್ಯುತ್ಸವ ನಿಮಿತ್ತ ಶನಿವಾರ ಹಮ್ಮಿಕೊಂಡಿದ್ದ ಅಥಣಿ ತಾಲೂಕು ಹಡಪದ ಸಮಾಜದ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

    ಹಡಪದ ಅಪ್ಪಣ್ಣ ಕಾಯಕಯೋಗಿ. ಅನಿಷ್ಟ ಪದ್ಧತಿ ತೆಗೆದು ಹಾಕುವಂತೆ ಬಸವಣ್ಣನವರಿಗೆ ಸಲಹೆ ಕೊಟ್ಟಿದ್ದೇ ಅಪ್ಪಣ್ಣನವರು. ಕಾಯಕದ ಆಧಾರದ ಮೇಲೆ ನಿರ್ಮಾಣಗೊಂಡಿದ್ದ ಜಾತಿ ವ್ಯವಸ್ಥೆಯನ್ನು ತೆಗೆದುಹಾಕಲು ಲಿಂಗಾಯತರು ಎಂಬ ಪದ ಟಂಕಿಸಲಾಯಿತು. ಈ ಪ್ರಕ್ರಿಯೆಗೆ ಹಡಪದ ಅಪ್ಪಣ್ಣನವರೇ ಪ್ರೇರಣೇ ಎಂದರು.

    ಶಾಸಕ ರಾಜು ಕಾಗೆ, ಅಥಣಿ ಗಚ್ಚಿನ ಮಠದ ಶಿವಬಸವ ಸ್ವಾಮೀಜಿ, ಶೆಟ್ಟರ ಮಠದ ಮರುಳಸಿದ್ದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸತ್ತಿ ಕಾಡಯ್ಯ ಹಿರೇಮಠ, ಭೀಮಾಶಂಕರ ಶರಣರು, ಬಸವರಾಜ ನಾವಿ, ಸಮುದಾಯದ ಉಪಾಧ್ಯಕ್ಷ ಸಂತೋಷ ಹಡಪದ, ಶಿವಾನಂದ ಹುನ್ನೂರ ಮಾತನಾಡಿದರು. ಶಿವರುದ್ರ ಘೂಳಪ್ಪನವರ, ಶ್ರೀಶೈಲ ನಾಯಿಕ, ಬಸವರಾಜ ನಾವಿ, ಜಡೆಪ್ಪ ಕುಂಬಾರ, ಶ್ರೀಶೈಲ ಗಸ್ತಿ, ದಾದಾಗೌಡ ಪಾಟೀಲ, ಬಾಪುಗೌಡ ಪಾಟೀಲ, ಬಸವರಾಜ ಭಜರಂಗಿ, ರಮೇಶ ಕಾಗಲೆ, ಸಂಜು ನಾವಿ, ಚನ್ನಪ್ಪ ನಾವಿ, ವಿಜಯ ಹುದ್ದಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts