More

    ಹಿಂದು ವಿರೋಧಿ ಹೇಳಿಕೆ ಬ್ಯಾನರ್​ನಲ್ಲಿ ಮುದ್ರಿಸಿ ಛೀಮಾರಿ ಹಾಕಿಸಿಕೊಂಡು, ಕ್ಷಮೆ ಕೇಳಿದ ಪಾಕಿಸ್ತಾನದ ಮುಖಂಡ

    ಲಾಹೋರ್​: ಹಿಂದು ವಿರೋಧಿ ಘೋಷಣೆ ಪ್ರಕಟಿಸಿದ್ದಕ್ಕೆ ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್​ ಖಾನ್​ ಪಕ್ಷದ ಮುಖ್ಯಸ್ಥ ಕ್ಷಮೆ ಕೇಳಿದ್ದಾನೆ. ಆತನ ಪರ ಇದ್ದ ಬ್ಯಾನರ್​ಗಳಲ್ಲಿ ಇದ್ದ ಹಿಂದು ವಿರೋಧಿ ಘೋಷಣೆಯನ್ನು ಖಂಡಿಸಿ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು.

    ಆಡಳಿತ ಪಕ್ಷ ತೆಹರಿಕ್​ ಎ ಇನ್ಸಾಫ್​ ಪಕ್ಷ ಮುಖಂಡ ಮಿಯಾನ್​ ಅಕ್ರಮ್​ ಉಸ್ಮಾನ್​ ಎಂಬಾತ ಕಾರ್ಯಕ್ರಮವೊಂದಕ್ಕೆ ಸಂಬಂಧಪಟ್ಟಂತೆ ಬ್ಯಾನರ್​ ಕಟ್ಟಲಾಗಿತ್ತು. ಅದರಲ್ಲಿ (ಹಿಂದು ಬಾತ್​ ಸೆ ನಹಿ, ಲಾತ್​ ಸೆ ನಹಿ ಮಾನತಾ ಹೈ) ಹಿಂದು ಮಾತಿಗೆ ಬಗ್ಗಲ್ಲ, ಪೆಟ್ಟಿಗೆ ಬಗ್ಗುತ್ತಾನೆ ಎಂದು ಬರೆಯಲಾಗಿತ್ತು.

    ಬ್ಯಾನರ್​ನಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​, ಮಹಮ್ಮದ್​ ಅಲಿ ಜಿನ್ನಾ ಮತ್ತು ತನ್ನ ಫೋಟೋವನ್ನು ಬ್ಯಾನರ್​ನಲ್ಲಿ ಉಸ್ಮಾನ್​ ಮುದ್ರಿಸಿದ್ದ. ಈ ಬಗ್ಗೆ ಖಂಡನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಉಸ್ಮಾನ್​ ಟ್ವೀಟರ್​ನಲ್ಲಿ ಕ್ಷಮೆ ಯಾಚಿಸಿದ್ದಾನೆ. ಅಲ್ಲದೆ ಉಭಯ ಗಡಿಗಳಲ್ಲಿ ಹಿಂದುಗಳು ಶಾಂತಿಯುತ ಜೀವನ ನಡೆಸಬೇಕು ಎಂದು ಬರೆದುಕೊಂಡಿದ್ದಾನೆ.

    ಮಾನವ ಹಕ್ಕುಗಳ ಸಚಿವೆ ಶಿರೀನ್ ಮಜಾರಿ ಟ್ವೀಟ್​ನಲ್ಲಿ ಉಸ್ಮಾನ್ ಅವರ ಈ ನಡೆಯನ್ನು ಖಂಡಿಸಲಾಗಿದೆ. ಅವರು ತಕ್ಷಣ ಆ ಬ್ಯಾನರ್​ಗಳನ್ನು ಹಿಂಪಡೆದಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ ಉಸ್ಮಾನ್​ ಅವರ ನಡೆಯನ್ನು ಖಂಡಿಸಿ ಇದು ವ್ಯಕ್ತಿಯೊಬ್ಬನ ಅವಮಾನಕರ ಮತ್ತು ಅಜ್ಞಾನದ ವಿಧಾನ ಎಂದು ಜರಿದಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts