More

    ತೆರಿಗೆ ವಂಚಿತ ನರಗುಂದ ಎಪಿಎಂಸಿ

    ಶಿವಾನಂದ ಹಿರೇಮಠ ಗದಗ
    ತಾಂತ್ರಿಕ ಸಮಸ್ಯೆ ಎದುರಾದ ಕಾರಣ ಜಿಲ್ಲೆಯ ನರಗುಂದ ಪಟ್ಟಣದ 102 ಎಕರೆ ಪ್ರದೇಶದ ಎಪಿಎಂಸಿ ಮಾರುಕಟ್ಟೆ ಸ್ಥಳಿಯ ಪುರಸಭೆ ತೆರಿಗೆ ವ್ಯಾಪ್ತಿಯಿಂದ ಹೊರಗೂಳಿದಿದೆ. ಹೀಗಾಗಿ ಪುರಸಭೆಗೆ ಸಂಗ್ರಹ ಆಗಬೇಕಿದ್ದ ಲಾಂತರ ರೂ. ತೆರಿಗೆ ಬೊಕ್ಕಸಕ್ಕೆ ಕೊರತೆಯಾಗಿದೆ. ಕಳೆದೊಂದ ದಶಕದಿಂದ ಈ ಸಮಸ್ಯೆ ಬಗೆಹರಿಯದೇ ಸಮಸ್ಯೆಯಾಗಿಯೇ ಉಳಿದಿದೆ.
    ಎಪಿಎಂಸಿ ಮಾರುಕಟ್ಟೆಯ ಅನುಮೋದಿ ವಿನ್ಯಾಸ ನೆ ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿ ತೋಡಕು ಎದುರಾದ ಕಾರಣ ಸ್ಥಳಿಯ ಪುರಸಭೆ ದಾಖಲೆಗಳಲ್ಲಿ ನರಗುಂದ ಎಪಿಎಂಸಿ ವಿನ್ಯಾಸಕ್ಕೆ ಅಂತಿಮ ಅನುಮೋದನೆ ದೊರೆತಿಲ್ಲ. ಹೀಗಾಗಿ, ತೆರಿಗೆ ವಸೂಲಿ ಮಾಡಲು ಪುರಸಭೆಗೆ ಹಕ್ಕು ಇಲ್ಲದಂತಾಗಿ, ಆಡಳಿತಾತ್ಮಕ ಸಮಸ್ಯೆ ಎದುರಾಗಿದೆ. 2012ರಲ್ಲಿ ಎಪಿಎಂಸಿ ಮಾರುಕಟ್ಟೆ ಆರಂಭ ಆದಾಗಿನಿಂದ ಈ ಸಮಸ್ಯೆ ಇದೆ. ಪುರಸಭೆ ಮತ್ತು ನರಗುಂಧ ಎಪಿಎಂಸಿ ಮಂಡಳಿ ನಡುವೆ ಹಲವು ಬಾರಿ ಸಭೆ ನಡೆದರೂ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ವಿಳಂಬವಾಗಿದೆ.

    ಏನಿದು ಸಮಸ್ಯೆ:
    ಕರ್ನಾಟಕ ಮುನ್ಸಿಪಾಲಟಿ ಅಧಿನಿಯಮ 1964ರ ಪ್ರಕಾರ ಪುರಸಭೆಯಲ್ಲಿ ಖಾತೆ ದಾಖಲಾಗಲು ಎಪಿಎಂಸಿ ಆಸ್ತಿಯ ವಿನ್ಯಾಸ ನೆ ಸ್ಥಳಿಯ ನಗರಯೋಜನೆ ಪ್ರಾಧಿಕಾರದಿಂದ ಅನುಮೋದನೆ ಆಗಿರಬೇಕೆಂದು ಎಪಿಎಂಸಿ ಮೂಲಗಳು ತಿಳಿಸಿವೆ. ಆದರೆ, ಕೃಷಿ ಮಾರಾಟ ಮಂಡಳದಿಂದ ಅನುಮೋದನೆ ಆಗಿರುವ ವಿನ್ಯಾಸವನ್ನೇ ಸ್ಥಳಿಯ ಪಟ್ಟಣ ಪಂಚಾಯಿತಿ, ಪುರಸಭೆ, ನಗರ ಸಭೆ ಅನುಮೋದಿಸಬೇಕು ಎಂದು ಕೃಷಿ ಮಾರಾಟ ಮಂಡಳ ವಾದಿಸುತ್ತಿದೆ. ಹೀಗಾಗಿ ನರಗುಂದ ಸೇರಿದಂತೆ ರಾಜ್ಯದ ಹಲವು ಎಪಿಎಂಸಿಗಳು ಸ್ಥಳಿಯ ತೆರಿಗೆ ವ್ಯಾಪ್ತಿಗೆ ಬಾರದೇ ಹೊರಗುಳಿದಿವೆ. ನರಗುಂದ ಪಟ್ಟಣದಲ್ಲೂ ಪುರಸಭೆ ವ್ಯಾಪ್ತಿಗೆ ಎಪಿಎಂಸಿ ಬಾರದಿರುವುದರಿಂದ ಪುರಸಭೆಯಿಂದ ಖಾತಾ ಸೃಷ್ಟಿಸಲು ಸಾಧ್ಯವಾಗಿಲ್ಲ.

    ಪ್ರಕ್ರಿಯೆ ಏನು?
    2018ಕ್ಕೂ ಮೊದಲು ನಿಯಮ ಸರಳವಿದ್ದ ಹಿನ್ನೆಲೆ ರಾಜ್ಯದ ಹಲವಡೆ ಕೃಷಿ ಮಾರಾಟ ಮಂಡಳ ಅನುಮೋದಿತ ವಿನ್ಯಾಸಕ್ಕೆ ಸ್ಥಳಿಯ ಸಂಸ್ಥೆಗಳು ಅನುಮತಿ ನೀಡಿ, ದಾಖಲೆ ಮಾಡಿಕೊಂಡಿವೆ. ಆನಂತರ ಕಾನೂನು ಕ್ಲಿಷ್ಟವಾಯಿತು. ನರಗುಂದ ಎಪಿಎಂಸಿ ಮಾತ್ರ ಪುರಸಭೆ ವ್ಯಾಪ್ತಿಗೆ ದಾಖಲಾಗದೇ ಹಾಗೆ ಉಳಿಯಿತು. ಉದ್ಭವಿಸಿರುವ ಆಡಳಿತಾತ್ಮಕ ಮತ್ತು ತಾಂತ್ರಿಕ ಸಮಸ್ಯೆ ಪರಿಹರಿಸುವುದಕ್ಕೆ ಸರ್ಕಾರದ ಮಟ್ಟದಲ್ಲಿ ನೆ ಅನುಮೋದನೆಗೆ ಎಪಿಎಂಸಿ ಮಂಡಳಿಯಿಂದ ಕಳುಹಿಸಲಾಗಿದೆ.

    ಅಭಿವೃದ್ಧಿಗೆ ಹಿನ್ನಡೆ?
    ಕಳೆದ ಒಂದು ದಶಕದಿಂದಲೂ ಪುರಸಭೆಗೆ ಎಪಿಎಂಸಿ ಯಿಂದ ತೆರಿಗೆ ವಸೂಲಿ ಆಗದ ಹಿನ್ನೆಲೆ ಪುರಸಭೆಯಿಂದಲೂ ಎಪಿಎಂಸಿ ಅಭಿವೃದ್ಧಿಗೆ ಅನುದಾನ ವಿನಿಯೋಗ ಆಗಿಲ್ಲ. ಕೃಷಿ ಉತ್ಪನ್ನ ಮಾರಾಟದಿಂದ ಬರುವ ಸೆಸ್​ ಹಣದಲ್ಲೇ ಎಪಿಎಂಸಿಯಲ್ಲಿ ರಸ್ತೆ ಸೇರಿದಂತೆ ಮೂಲಭೂತ ಅಭಿವೃದ್ಧಿ ಕೆಲಸಗಳ ನಡೆಬೇಕಿದೆ. 2018ರ ನಂತರ ಎಪಿಎಂಸಿ ಕಾನೂನು ತಿದ್ದುಪಡಿ ನಂತೆ ಶೇ. ಸೆಸ್​ ಹಣವನ್ನು 1.50 ರೂ. ಬದಲಾಗಿ 60 ಪೈಸೆಗೆ ಇಳಿಸಿದ ಪರಿಣಾಮ ಸೆಸ್​ ಕೂಡ ನಿಗದಿತ ಪ್ರಮಾಣದಲ್ಲಿ ಸಂಗ್ರಹ ಆಗುತ್ತಿಲ್ಲ. ಎರಡೂ ವರ್ಷಗಳ ಹಿಂದೆ 2.28 ಕೋಟಿ ರೂ. ಇದ್ದ ಸೆಸ್​ ಸಂಗ್ರಹವು ಈಗ 55 ಲಕ್ಷಕ್ಕೆ ಇಳಿಕೆ ಆಗಿದೆ. ಹಾಗಾಗಿ ಪುರಸಭೆ ವ್ಯಾಪ್ತಿಗೆ ಎಪಿಎಂಸಿ ಒಳಪಡುವುದು ಅಗತ್ಯವಿದೆ.

    ನರಗುಂದ ಎಪಿಎಂಸಿ:
    ಎಪಿಎಂಸಿಯಲ್ಲಿ 102 ಎಕರೆ ಮಾರ್ಕೆಟ್​ ಯಾರ್ಡ್​ ಇದೆ. ವಿವಿಧ ಸುತ್ತಳೆತ 180 ಪ್ಲಾಟ್​ ಸೃಷ್ಟಿ ಸಲಾಗಿದೆ. 59 ಪ್ಲಾಟ್​ಗಳನ್ನು ಗುತ್ತಿಗೆ ನೀಡಲಾಗಿದೆ. 4 ಗೋಡೌನ್​, 35 ಪ್ಲಾಟ್​ ಗಳನ್ನು ಬಾಡಿಗೆ ನೀಡಲಾಗಿದೆ. ನಿಯಮ ಪ್ರಕಾರ ಖಾಲಿ ಮತ್ತು ಎಪಿಎಂಸಿ ಕಚೇರಿ ಹೊರತುಪಡಿಸಿ ಬಳಕೆ ಮಾಡಿದ ನಿವೇಶನಗಳಿಗೆ ಪುರಸಭೆ ತೆರಿಗೆ ವಿಧಿಸಬೇಕಿದೆ.

    ಸೆಸ್​ ಬಳಕೆ ಹೇಗೆ?
    ಎಪಿಎಂಸಿ ನಲ್ಲಿ ನಡೆಯುವ ಟ್ರೇಡಿಂಗ್​ ನಿಂದ 100 ರೂ. ಗೆ 60 ಪೈಸೆ ಸೆಸ್​ ಪಡೆಯಲಾಗುತ್ತದೆ. ಈ 60 ಪೈಸೆಯಲ್ಲಿ 5 ಪೈಸೆ ಮಂಡಳಿಗೆ, 10 ಪೈಸೆ ಅವರ್ತ ನಿಧಿಗೆ, 1 ಪೈಸೆ ತಂತ್ರಾಂಶ ನಿರ್ವಹಣೆ, 44 ಪೈಸೆಯಲ್ಲಿ ಎಪಿಎಂಸಿ ಸಾಮಾನ್ಯ ಖರ್ಚು ಭರಿಸಿ, ಉಳಿದ ಮೊತ್ತವನ್ನು ಅಭಿವೃದ್ಧಿಗೆ ಬಳಸಿಕೊಳ್ಳಲಾಗುತ್ತದೆ. 2021 -22 ರಲ್ಲಿ 47 ಲಕ್ಷ ರೂ. ಸೆಸ್​, 2020&21ರಲ್ಲಿ 55 ಲಕ್ಷ ರೂ. ಸೆಸ್​, 2019 -20 ರಲ್ಲಿ 2.82 ಕೋಟಿ ರೂ. ಸೆಸ್​ ನರಗುಂದ ಎಪಿಎಂಸಿಯಲ್ಲಿ ಸಂಗ್ರಹವಾಗಿತ್ತು.

    ಕೋಟ್​:
    ಕಳೆದ ಒಂದು ದಶಕದಿಂದ ಸಮಸ್ಯೆ ಇರುವುದು ನಿಜ. ಈ ಸಮಸ್ಯೆ ಬಗೆಹರಿಸಲು ಅಂತಿಮ ನಿರ್ಣಯ ಸದ್ಯದಲ್ಲೆ ತೆಗೆದುಕೊಳ್ಳಲಾಗುವುದು. ಆಡಳಿತಾತ್ಮ ವಿಷಯದಲ್ಲಿ ಪತ್ರ ವ್ಯವಹಾರ ಜರುಗಿದೆ. ಅನುಮೋದನೆ ನಂತರ ಎಪಿಎಂಸಿ, ನಿವೇಶನ ಮತ್ತು ಕಟ್ಟಡದ ಅಳತೆ ಮಾಡಿದ ನಂತರ ತೆರಿಗೆ ನಿಗದಿ ಪಡಿಸಲಾಗುವುದು.
    – ಅಮಿತ್​ ತಾರದಾಳೆ
    ಪುರಸಭೆ ಮುಖ್ಯಾಧಿಕಾರಿ, ನರಗುಂದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts