More

    ಎಪಿಎಂಸಿ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ

    ಬೆಳಗಾವಿ: ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕೊನೆಯ (20 ತಿಂಗಳು) ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಉಚಗಾವಿ ಕ್ಷೇತ್ರದ ಯುವರಾಜ ಕದಂ ಹಾಗೂ ಹುದಲಿ ಕ್ಷೇತ್ರದ ಮಹಾದೇವಿ ಖನಗೌಡರ ಅವಿರೋಧವಾಗಿ ಆಯ್ಕೆಯಾದರು.

    ನಗರದ ಎಪಿಎಂಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಕಾಂಗ್ರೆಸ್‌ನ ಉಚಗಾವಿ ಕ್ಷೇತ್ರದ ಯುವರಾಜ ಕದಂ, ಬಿಜೆಪಿ ಬೆಂಬಲಿತ ಹಿರೇಬಾಗೇವಾಡಿ ಕ್ಷೇತ್ರದ ರೇಣುಕಾ ಪಾಟೀಲ, ದೇಸೂರ ಕ್ಷೇತ್ರದ ಸಂಜೀವ ಮಾದರ ಹಾಗೂ ಸಾಂಬ್ರಾ ಕ್ಷೇತ್ರದ ಲಗಮಣ್ಣ ನಾಯಕ ನಾಮಪತ್ರ ಸಲ್ಲಿಸಿದ್ದರು. ಅದರಲ್ಲಿ ಮೂವರು ನಾಮಪತ್ರ ವಾಪಸ್ ಪಡೆದುಕೊಂಡಿದ್ದರಿಂದ ಕಾಂಗ್ರೆಸ್ ಬೆಂಬಲಿತ ಯುವರಾಜ ಕದಂ ಅವಿರೋಧ ಆಯ್ಕೆಯಾಗಿದ್ದಾರೆ.

    ಉಪಾಧ್ಯಕ್ಷ ಸ್ಥಾನಕ್ಕಾಗಿ ಯಳ್ಳೂರ ಕ್ಷೇತ್ರದ ಮಹೇಶ ಜುವೇಕರ್, ಹುದಲಿ ಕ್ಷೇತ್ರದ ಮಹಾದೇವಿ ಖನಗೌಡರ ನಾಮಪತ್ರ ಸಲ್ಲಿಸಿದ್ದರು. ಮಹೇಶ ಜುವೇಕರ್ ನಾಮಪತ್ರ ವಾಪಸ್ ಪಡೆದುಕೊಂಡಿದ್ದರಿಂದ ಕಾಂಗ್ರೆಸ್ ಬೆಂಬಲಿತ ಮಹಾದೇವಿ ಖನಗೌಡರ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

    ಎಪಿಎಂಸಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕಾಗಿ ಎಪಿಎಂಸಿಯ ಚುನಾಯಿತ 14 ಸದಸ್ಯರಲ್ಲಿ ತೀವ್ರ ಪೈಪೋಟಿ ನಡೆದಿತ್ತು. ಕೆಲ ಸದಸ್ಯರು ಅಧ್ಯಕ್ಷ ಸ್ಥಾನಕ್ಕಾಗಿ ತಮ್ಮನ್ನು ಪರಿಗಣಿಸುವಂತೆ ಶಾಸಕ ಸತೀಶ ಜಾರಕಿಹೊಳಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಮಾಜಿ ಶಾಸಕ ಸಂಜಯ ಪಾಟೀಲ ಮನೆಗೆ ಅಲೆದಾಡುತ್ತಿದ್ದರು. ಆದರೆ, ಕೊನೆಯ ಗಳಿಗೆಯಲ್ಲಿ ಶಾಸಕ ಸತೀಶ ಜಾರಕಿಹೊಳಿ ಎಲ್ಲ ಸದಸ್ಯರ ಸಭೆ ನಡೆಸಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅವಿರೋಧ ಆಯ್ಕೆಗೆ ಸೂಚನೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts