More

    ಸೋಂಕಿತ ಮಹಿಳೆ ಜತೆ ಇದ್ದವರ ಆತಂಕ

    ಹೊಳೆನರಸೀಪುರ: ತಾಲೂಕಿನ ಹಾಸ್ಟೆಲ್‌ವೊಂದರಲ್ಲಿ ಕ್ವಾರಂಟೈನ್ ಆಗಿದ್ದ ಕುಟುಂಬವೊಂದರ ಮಹಿಳೆಗೆ ಕರೊನಾ ಸೋಂಕು ದೃಢಪಟ್ಟಿದೆ. ಆದ್ದರಿಂದ, ಅದೇ ಕಟ್ಟಡದಲ್ಲಿ ಕ್ವಾರಂಟೈನಲ್ಲಿ ಇರುವ ಮತ್ತೆರಡು ಕುಟುಂಬಗಳಿಗೆ ಸೇರಿದ ನಾಲ್ವರು ಸದಸ್ಯರಲ್ಲಿ ಆತಂಕ ಮನೆಮಾಡಿದೆ.

    ಹಳ್ಳಿಮೈಸೂರು ಹೋಬಳಿ ದೊಡ್ಡಕಾಡನೂರು ಗ್ರಾಮದ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಮುಂಬೈಯಿಂದ ಆಗಮಿಸಿದ್ದ ಒಟ್ಟು 3 ಕುಟುಂಬಗಳನ್ನು ಕ್ವಾರಂಟೈನ್ ಮಾಡಲಾಗಿತ್ತು. ಈ ಪೈಕಿ ಒಂದು ಕುಟುಂಬದ ಐವರು ಸದಸ್ಯರ ಪೈಕಿ ಒಬ್ಬ ಮಹಿಳೆಗೆ ಸೋಂಕು ದೃಢಪಟ್ಟಿದ್ದು, ಉಳಿದವರ ವರದಿ ಬರಬೇಕಾಗಿದೆ.

    ಬಾಕಿ ಎರಡು ಕುಟುಂಬಗಳಿಗೆ ಸೇರಿದ ನಾಲ್ವರು ಸದಸ್ಯರನ್ನು ಪ್ರತ್ಯೇಕ ಎರಡು ಕೋಣೆಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಆದರೆ, ಶೌಚಗೃಹ ಮತ್ತು ಸ್ನಾನದ ಕೊಠಡಿಗಳನ್ನು ಎಲ್ಲರೂ ಬಳಕೆ ಮಾಡಿದ್ದು, ಮುಂಜಾಗ್ರತೆ ಕ್ರಮ ಕೈಗೊಂಡಿದ್ದರೂ ಅವರಲ್ಲಿ ಆತಂಕ ಮನೆಮಾಡಿದೆ.

    ಒತ್ತಾಯ: ಸೋಂಕಿತ ಮಹಿಳೆ ಮತ್ತು ಕುಟುಂಬ ಸದಸ್ಯರನ್ನು ಸ್ವಗ್ರಾಮದವರು ಭೇಟಿ ಮಾಡಿದ್ದರೇ ಎಂಬುದನ್ನು ಪರಿಶೀಲಿಸಿ, ಸಂಪರ್ಕಿತರೆಲ್ಲರನ್ನು ಗುರುತಿಸಿ, ಆರೋಗ್ಯ ತಪಾಸಣೆ ನಡೆಸಿ, ಅಗತ್ಯವಿದ್ದರೆ ಕ್ವಾರಂಟೈನ್ ಮಾಡುವಂತೆ ದೊಡ್ಡಕಾಡನೂರು ಗ್ರಾ.ಪಂ. ಅಧ್ಯಕ್ಷ ಎ.ಡಿ.ಶಾಂತರಾಜು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts