More

    ನಾಡದ್ರೋಹದ ಕೆಲಸ ಮಾಡಿದ ಪಾಲಿಕೆ ಉದ್ಯೋಗಿ!; 33 ವರ್ಷ ಕೆಲಸ ಮಾಡಿ, ಕೊನೇ ದಿನ ಹೇಳಿದ್ದೇನು ಗೊತ್ತಾ?

    ಬೆಳಗಾವಿ: ಕನ್ನಡ-ಮರಾಠಿ ಭಾಷಾ ಸಂಘರ್ಷ ಹೊಸದೇನಲ್ಲ. ಈಗಲೂ ಆಗಾಗ ಕನ್ನಡ-ಕನ್ನಡಿಗರ ವಿರುದ್ಧವಾಗಿ ಬೆಳಗಾವಿ ಸುತ್ತಮುತ್ತಲ ಪ್ರದೇಶಗಳಲ್ಲಿ ಕನ್ನಡಿಗರ ಸ್ವಾಭಿಮಾನ ಕೆದಕುವಂಥ ಘಟನೆಗಳು ನಡೆಯುತ್ತಿರುತ್ತವೆ. ಅಂಥದ್ದೇ ಇನ್ನೊಂದು ಘಟನೆ ನಡೆದಿದೆ.

    ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ 33 ವರ್ಷಗಳ ಕಾಲ ದುಡಿದು, ಮೇ 31ರಂದು ನಿವೃತ್ತಿಯಾದ ದ್ವಿತೀಯ ದರ್ಜೆ ಸಹಾಯಕ ತನ್ನ ಬೀಳ್ಕೊಡುಗೆ ಸಮಾರಂಭದ ಸಂದರ್ಭದಲ್ಲೇ ನಿಜವಾದ ಮುಖವನ್ನು ತಾನೇ ಬಯಲು ಮಾಡಿಕೊಂಡಿದ್ದಾನೆ. ಈತನದ್ದು ನಾಡದ್ರೋಹದ ಕೆಲಸ ಎಂದು ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿದ್ದು, ರಾಜ್ಯದ ಕೆಲವೆಡೆಯೂ ಆಕ್ರೋಶ ವ್ಯಕ್ತವಾಗಿದೆ.

    ಶಿವಾಜಿ ಕಳಸೇಕರ ಎಂಬ ಈ ವ್ಯಕ್ತಿಯನ್ನು ಪಾಲಿಕೆಯ ಆಯುಕ್ತರು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕಳಸೇಕರ ಕೊನೆಯಲ್ಲಿ “ಜೈ ಮಹಾರಾಷ್ಟ್ರ” ಎಂದು ಘೋಷಣೆ ಹಾಕಿದ್ದರಿಂದ ಅಲ್ಲಿದ್ದ ಎಲ್ಲರಿಗೂ ಮುಜುಗರವಾಯಿತು. ಆದರೆ ಯಾರೂ ಪ್ರಶ್ನಿಸಲಿಲ್ಲ, ಆಕ್ಷೇಪವೆತ್ತಲಿಲ್ಲ.

    ನಿವೃತ್ತಿಯಾಗುವವರೆಗೂ ಕರ್ನಾಟಕದ ಹಾಗೂ ಕನ್ನಡಿಗರ ಅನ್ನ ಉಂಡ ಈ ಉದ್ಯೋಗಿ ನಾಡದ್ರೋಹಿ ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ತೀವ್ರವಾಗಿ ಖಂಡಿಸಿದೆ. ಮಾತ್ರವಲ್ಲದೆ ಈ ನೌಕರನಿಗೆ ನೋಟೀಸು ನೀಡಿ ಕ್ಷಮಾಪಣೆ ಕೇಳಲು ತಿಳಿಸಬೇಕು. ಕ್ಷಮಾಪಣೆ ಕೇಳುವವರೆಗೂ ಪಿಂಚಣಿಯನ್ನು ತಡೆ ಹಿಡಿಯಬೇಕು ಎಂದು ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಆಗ್ರಹಿಸಿದ್ದಾರೆ.

    ಶಾವಿಗೆ-ಸಂಡಿಗೆ ಒಣಗಿಸಲು ಬಳಕೆಯಾದ ಸುವರ್ಣಸೌಧ!; ಕೆಲಸ ಕಳೆದುಕೊಂಡ ಮಹಿಳೆ, ಇಂಜಿನಿಯರ್​ಗೆ ನೋಟಿಸ್​..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts