More

    ಅಂತರಂಗ| ನಾಯಿ ತಡೆಯಲಾಗದ ಬಾಯಾರಿಕೆಯಿಂದ ಹಸಿಯ ಮಣ್ಣನ್ನು ನೆಕ್ಕುತ್ತಿತ್ತು..ಮುಂದೆ?!

    ಅಂತರಂಗ| ನಾಯಿ ತಡೆಯಲಾಗದ ಬಾಯಾರಿಕೆಯಿಂದ ಹಸಿಯ ಮಣ್ಣನ್ನು ನೆಕ್ಕುತ್ತಿತ್ತು..ಮುಂದೆ?!ಒಬ್ಬ ದಾರಿಹೋಕನಿಗೆ ತುಂಬ ಬಾಯಾರಿಕೆ ಉಂಟಾಯಿತು. ಆತ ಅತ್ತ ಇತ್ತ ದೃಷ್ಟಿ ಹರಿಸಿದನು. ದಾರಿಯ ಪಕ್ಕದಲ್ಲಿ ಹೆಚ್ಚು ಆಳವಿಲ್ಲದ ಒಂದು ಬಾವಿ ಇದ್ದುದು ಕಂಡುಬಂದಿತು. ಆತ ಆ ಬಾವಿಯಲ್ಲಿ ಇಳಿದು ನೀರನ್ನು ಕುಡಿದನು. ಬಾಯಾರಿಕೆ ನಿವಾರಣೆಯಾಯಿತು. ಆತ ಬಾವಿಯಿಂದ ಹೊರಕ್ಕೆ ಬಂದನು. ಒಂದು ನಾಯಿ ಬಾಯಾರಿಕೆಯಿಂದ ಏದುಸಿರು ಬಿಡುತ್ತಿತ್ತು. ನಾಲಗೆಯನ್ನು ಹೊರಗೆ ಚಾಚಿತ್ತು. ತಡೆಯಲಾಗದ ಬಾಯಾರಿಕೆಯಿಂದ ಹಸಿಯ ಮಣ್ಣನ್ನು ನೆಕ್ಕುತ್ತಿತ್ತು.

    ಬಾಯಾರಿಕೆಯ ದಣಿವನ್ನು ಆರಿಸಿಕೊಂಡ ಆ ವ್ಯಕ್ತಿಯು, ನಾಯಿಗೆ ತುಂಬ ಬಾಯಾರಿಕೆಯಾಗಿದೆ ಎಂದು ಅರಿತುಕೊಂಡನು. ಆತ ಬಾವಿಗೆ ಇಳಿದನು. ತನ್ನ ಚರ್ಮದ ಪಾದರಕ್ಷೆಯಲ್ಲಿ ನೀರನ್ನು ತುಂಬಿಸಿ ಅದನ್ನು ಬಾಯಲ್ಲಿ ಕಚ್ಚಿಕೊಂಡು ಮೇಲೆ ಬಂದು ನಾಯಿಗೆ ಕುಡಿಸಿದನು. ದೇವರು ಈ ವ್ಯಕ್ತಿಯ ಕರ್ಮವನ್ನು ಮೆಚ್ಚಿದನು ಹಾಗೂ ಅವನನ್ನು ಕ್ಷಮಿಸಿಬಿಟ್ಟನು. ಪ್ರಾಣಿಗಳ ಮೇಲೆ ದಯೆ ತೋರಿದರೆ ಪುಣ್ಯ ಲಭಿಸುವುದೇ? ‘ಪ್ರತಿಯೊಂದು ಜೀವಿಯೊಂದಿಗೂ ದಯೆ ತೋರಿದರೆ ಪುಣ್ಯ ಲಭಿಸುವುದು’ ಎಂಬುದು ಪ್ರವಾದಿ ಮುಹಮ್ಮದ(ಸ)ರ ಅಭಿಪ್ರಾಯ. ವ್ಯಾಪಾರಿಗಳು ವ್ಯಾಪಾರದಲ್ಲಿ ಹೆಚ್ಚು ಆಣೆ ಹಾಕಬಾರದು. ಅದರಿಂದ ಸಮೃದ್ಧಿ ಹೊರಟುಹೋಗುತ್ತದೆ. ಅಕ್ರಮ ದಾಸ್ತಾನು ಮಾಡುವ ವ್ಯಾಪಾರಿ ಪಾಪಿಯಾಗಿರುತ್ತಾನೆ. ಪದಾರ್ಥಗಳಿಗೆ ಬೆಲೆ ಹೆಚ್ಚಲಿ ಎಂದು ಆತ ಕಾಯುತ್ತಾನೆ. ಈ ಮನೋವೃತ್ತಿ ಜನರನ್ನು ಕಠೋರ ಹೃದಯಿಗಳನ್ನಾಗಿ, ನಿರ್ದಯಿಗಳನ್ನಾಗಿ ಮಾಡುತ್ತದೆ ಎಂದು ಪೈಗಂಬರರ ಅಭಿಪ್ರಾಯವಾಗಿದೆ.

    ಒಂದು ವಸ್ತುವನ್ನು ಮಾರುವಾಗ ಅದರಲ್ಲಿರುವ ಕುಂದು ಕೊರತೆಗಳನ್ನು ತಿಳಿಯಪಡಿಸಬೇಕು. ಅದು ಧರ್ಮಸಮ್ಮತ. ಒಟ್ಟಾರೆ ಗ್ರಾಹಕರನ್ನು ಮೋಸ ಮಾಡುವುದು ಇಸ್ಲಾಂ ಧರ್ಮದಲ್ಲಿ ನಿಷಿದ್ಧವಾಗಿದೆ.

    1) ದೇವರ ಹೆಸರಿನಲ್ಲಿ ಒಪ್ಪಂದ ಮಾಡಿ ಅದನ್ನು ಮುರಿಯುವವರು

    2) ಒಬ್ಬ ಒಳ್ಳೆಯ ಮನುಷ್ಯನನ್ನು ಅಪಹರಿಸಿ ಅವನನ್ನು ಗುಲಾಮನನ್ನಾಗಿ ಮಾಡಿಕೊಂಡು ಮಾರುವವರು

    3)ಕಾರ್ವಿುಕನನ್ನು ನೇಮಕ ಮಾಡಿಕೊಂಡು ಅವನಿಂದ ಸಂಪೂರ್ಣ ಸೇವೆಯನ್ನು ಪಡೆದುಕೊಂಡು ಕೂಲಿಯನ್ನು ನೀಡದಿರುವವರು

    – ಈ ಮೂರು ಬಗೆಯ ಜನರ ವಿರುದ್ಧ ಅಲ್ಲಾಹನು ಮೊಕದ್ದಮೆಯನ್ನು ಹೂಡುವನು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts