More

    ಅಂತರಂಗ| ತಂತ್ರಶಾಸ್ತ್ರ ದರ್ಶನ-ಭಾಗ 8

    ಪವಿತ್ರತೆಯ ಹಾಗೂ ವಿದ್ವತ್ತಿನ ಸೋಗು ಹಾಕಿ, ಅಂತರಂಗದಲ್ಲಿ ದುರಾಸೆಯ, ಇಂದ್ರಿಯಚಾಪಲ್ಯವುಳ್ಳ ಕಪಟಿ ಗುರುಗಳ ಬಗೆಗೆ ತಂತ್ರಗಳು ಎಚ್ಚರಿಸಿ, ಅವರನ್ನು ದೂರವಿಡಬೇಕೆಂದು ಹೇಳುತ್ತವೆ.
    ಶಿಷ್ಯ: ಶಿಷ್ಯನೂ ಸಹ ಆಧ್ಯಾತ್ಮಿಕ ಜೀವನ ಪ್ರಾರಂಭಿಸುವ ಮುನ್ನವೇ ಕೆಲವೊಂದು ಕನಿಷ್ಠ ಅರ್ಹತೆಗಳನ್ನು ಪಡೆದಿರಬೇಕು. ಅವನು ಕಪಟಿಯೂ, ಮೋಸಗಾರನೂ ಆಗಿರಬಾರದು. ಅವನು ಪರಮಪುರುಷಾರ್ಥಗಳನ್ನು ಹೊಂದುವ ಅಭಿಲಾಷೆಯುಳ್ಳವನಾಗಿರಬೇಕು. ಅವನಿಗೆ ವೇದಜ್ಞಾನವೂ, ಆತ್ಮನಿಗ್ರಹವೂ ಇರಬೇಕು. ಅವನು ಗುರುಬೋಧನೆಯನ್ನೂ, ಶಾಸ್ತ್ರಗಳನ್ನೂ ಅರ್ಥಮಾಡಿಕೊಳ್ಳುವಷ್ಟು ಮೇಧಾವಿಯಾಗಿರಬೇಕು. ತಂದೆ-ತಾಯಿಗಳಿಗೆ ವಿಧೇಯನಾಗಿಬೇಕು. ಕರ್ತವ್ಯನಿಷ್ಠನಾಗಿರಬೇಕು. ಅವನಿಗೆ ಉತ್ತಮಕುಲಜಾತನ ಅಹಂಕಾರ, ಧನಮದ, ವಿದ್ಯಾಮದ – ಇವುಗಳು ಇರಬಾರದು. ಅವನು ಗುರುಗಳಿಗೆ ವಿಧೇಯನಾಗಿರಬೇಕು. ಗುರುಗಳಿಗೆ ತನ್ನ ಸರ್ವಸ್ವವನ್ನೂ ತ್ಯಾಗಮಾಡಲು ಸಿದ್ಧನಿರಬೇಕು. ತಂತ್ರಗಳು ಘೊಷಿಸುತ್ತವೆ: ಶಿಷ್ಯನನ್ನು ಪರಿಗ್ರಹಿಸುವ ಮುನ್ನ ಗುರು ಅವನನ್ನು ಪರೀಕ್ಷಿಸಬೇಕು. ಹಾಗೆಯೇ ಶಿಶ್ಯನೂ ಸಹ.

    ಇಷ್ಟದೇವತಾ: ಪರಮಪುರುಷ ಪರಮೇಶ್ವರನು ‘ಏಕ’ನಾಗಿದ್ದರೂ, ಅದ್ವಯನಾಗಿದ್ದರೂ, ಅವನು ನಾನಾ ರೂಪಗಳಲ್ಲಿ, ನಾನಾ ಅವತಾರಗಳಲ್ಲಿ ವ್ಯಕ್ತವಾಗಬಲ್ಲನು. ಇವೆಲ್ಲವೂ ಅವನಿಂದ ಬೇರೆಯೇ ಅಲ್ಲ, ಸಕ್ಕರೆ ಗೊಂಬೆಗಳು ಸಕ್ಕರೆ ಇದ್ದ ಹಾಗೆ. ಸಾಧಕನು ಈ ರೂಪಗಳಲ್ಲಿ ಯಾವುದೊಂದನ್ನು ಆರಿಸಿಕೊಳ್ಳುತ್ತಾನೆಯೋ, ಅದೇ, ಅವನ ‘ಇಷ್ಟದೇವತೆ’, ಅವನ ‘ಹೃದಯದೇವತೆ’. ಅವನು ಆ ರೂಪವನ್ನು ತನ್ನ ಪೂಜೆಗೆಂದು ಧ್ಯಾನಕ್ಕೆಂದು ಆರಿಸಿಕೊಳ್ಳುತ್ತಾನೆ. ತಂತ್ರಗಳು ಈ ರೀತಿ ಸರೂಪ ಭಗವಂತನ ಪೂಜೆಯನ್ನು ಧ್ಯಾನವನ್ನು ಸಮರ್ಥಿಸುತ್ತವೆ; ಏಕೆಂದರೆ ನಾಮ-ರೂಪರಹಿತ ಪರತತ್ತ ್ವ ಧ್ಯಾನಕ್ಕಿಂತ ನಾಮ-ರೂಪ ಸಹಿತ ಭಗವಂತನ ಪೂಜೆ ಧ್ಯಾನ ಬಹಳ ಸುಲಭವಾದುದು. ಈ ಪ್ರತಿಯೊಂದು ದೇವತೆಗೂ ಪ್ರತ್ಯೇಕ ಮಂತ್ರ ಅಥವಾ ವಿವಿಧ ಮಂತ್ರಗಳು ಹಾಗೂ ಬೀಜಾಕ್ಷರಗಳು ಇರುತ್ತವೆ. ಇವುಗಳನ್ನು ತಜ್ಞ ಗುರುವಿನಿಂದ, ಸಂಪ್ರದಾಯರೀತ್ಯ ಪಡೆಯಬೇಕಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts