More

    ಅಂತರಗಂಗೆ ಜಾತ್ರೆಗೆ ಹರಿದು ಬಂದ ಭಕ್ತಸಾಗರ ; ದಕ್ಷಿಣ ಕಾಶಿ ವಿಶ್ವೇಶ್ವರನಿಗೆ ವಿಶೇಷ ಪೂಜೆ

    ಕೋಲಾರ : ನಗರದ ಅಂತರಗಂಗೆಯ ದಕ್ಷಿಣ ಕಾಶಿ ವಿಶ್ವೇಶ್ವರ ಸನ್ನಿಧಿಯಲ್ಲಿ ಕಡೇ ಕಾರ್ತಿಕ ಸೋಮವಾರದ ಅಂಗವಾಗಿ ನಡೆದ ಜಾತ್ರೆಗೆ ಭಕ್ತ ಸಾಗರ ಹರಿದು ಬಂದಿತ್ತು.

    ಕಾರ್ತಿಕ ಮಾಸದಲ್ಲಿ ಪ್ರತಿ ಸೋಮವಾರ ವಿಶೇಷ ಪೂಜೆ, ಅಭಿಷೇಕ ನಡೆದು ತಿಂಗಳ ಕೊನೇ ಸೋಮವಾರ ವಿಹಿಂಪ, ಬಜರಂಗದಳದ ನೇತೃತ್ವದಲ್ಲಿ ನಡೆದ ಜಾತ್ರೆಗೆ ಬಸವನ ಬಾಯಲ್ಲಿ ಬರುವ ಪವಿತ್ರ ಜಲಪ್ರೋಕ್ಷಣೆಗಾಗಿ ಸಾವಿರಾರು ಭಕ್ತರು ಜಮಾಯಿಸಿದ್ದರು. ಬೆಳಗ್ಗೆಯೇ ಪಂಚಾಮೃತ ಅಭಿಷೇಕ, ಹೂವಿನ ಅಲಂಕಾರ, ವಿಶೇಷ ಪೂಜೆ ನಡೆಯಿತು. ವಿಶ್ವೇಶ್ವರನ ದರ್ಶನಕ್ಕೆ ಸುಗಮ ವ್ಯವಸ್ಥೆ ಮಾಡಲಾಗಿತ್ತು. ಕೆಎಸ್ಸಾರ್ಟಿಸಿ ನೌಕರರ ಮುಷ್ಕರದಿಂದ ಬಸ್ ಇಲ್ಲದಿರುವುದು ಹಾಗೂ ಕರೊನಾ ಕಾರಣದಿಂದ ಭಕ್ತರ ಸಂಖ್ಯೆ ಕಡಿಮೆ ಇತ್ತಾದರೂ ಬೆಳಗ್ಗೆಯಿಂದ ರಾತ್ರಿವರೆಗೆ ಸುಮಾರು 50,000 ಭಕ್ತರು ಭಾಗವಹಿಸಿದ್ದರು.

    ಕಾಯಂ ಕಮಾನು ನಿರ್ಮಾಣ ಭರವಸೆ: ಬಜರಂಗದಳ ಹಾಗೂ ವಿವಿಧ ದಾನಿಗಳ ನೆರವಿನಿಂದ ಅಂತರಗಂಗೆ ರಸ್ತೆಯಿಂದ ವ್ಯವಸ್ಥೆ ಮಾಡಿದ್ದ ಉಚಿತ ಸಾರಿಗೆ ಸೇವೆಗೆ ಸಂಸದ ಎಸ್.ಮುನಿಸ್ವಾಮಿ ಗೋಪೂಜೆಯೊಂದಿಗೆ ಚಾಲನೆ ನೀಡಿ ದರ್ಶನ ಪಡೆದರು. ಈ ವೇಳೆ ಮಾತನಾಡಿ, ಅಂತರಗಂಗೆ ಜಾತ್ರೆಗೆ ಪ್ರತಿವರ್ಷ ತಾತ್ಕಾಲಿಕ ಸ್ವಾಗತ ಕಮಾನು ನಿರ್ಮಿಸುವ ಬದಲು ಈ ಜಾಗದಲ್ಲಿ ಕಾಯಂ ಕಮಾನು ನಿರ್ಮಾಣಕ್ಕೆ ಕ್ರಮದ ಭರವಸೆ ನೀಡಿದರಲ್ಲದೆ ಕ್ಷೇತ್ರವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಿ, ರಸ್ತೆ ವಿಸ್ತರಣೆ, ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು. ಬಸ್ ನಿಲ್ದಾಣ ವೃತ್ತದಲ್ಲಿ ಭಕ್ತರಿಗೆ ಬಜರಂಗದಳ, ದೇವಾಲಯ ಆವರಣದಲ್ಲಿ ನಮ್ಮ ಗೆಳೆಯರು ತಂಡದಿಂದ ಮಾಸ್ಕ್ ಸ್ಯಾನಿಟೈಸರ್ ಮತ್ತು ಸಸಿ ವಿತರಿಸಿದರೆ ಆರೋಗ್ಯ ಇಲಾಖೆಯಿಂದ ಕರೊನಾ ಜಾಗೃತಿ ಮೂಡಿಸಲಾಯಿತು.

    ಉಚಿತ ವಾಹನ ಸೇವೆ : ಬೆಟ್ಟದ ತಪ್ಪಲಲ್ಲಿನ ಜಲಕಂಠೇಶ್ವರ ಸನ್ನಿಧಿಯಲ್ಲಿ ಬಜರಂಗದಳ, ವಿಹಿಂಪ ಮತ್ತಿತರ ಸಂಘಟನೆಗಳಿಂದ ಅನ್ನದಾನ ನಡೆಯಿತು. ಶಾಂತಿ ಕಲ್ಯಾಣ ಮಂಟಪ, ಬಾಲಕೃಷ್ಣ ಜುವೆಲರ್ಸ್‌, ಅನಂತ್ ಜುವೆಲರ್ಸ್‌, ಜಿಲ್ಲಾ ಚಿನ್ನಬೆಳ್ಳಿ ವರ್ತಕರ ಸಂಘ, ನಾಗರಾಜ ಸ್ಟೋರ್ಸ್‌ ಮಾಲೀಕರು ಉಚಿತ ಬಸ್ ಮತ್ತು ವಾಹನ ಸೇವೆ ಒದಗಿಸಿಕೊಟ್ಟಿದ್ದರು.

    ಬಜರಂಗದಳ ಜಿಲ್ಲಾ ಸಂಚಾಲಕ ಬಾಬು, ಮುಖಂಡ ಬಾಲಾಜಿ, ಅಪ್ಪಿ ಆನಂದ್, ಡಿ.ಆರ್.ನಾಗರಾಜ್, ವಿಜಯಕುಮಾರ್, ಜಯಂತಿಲಾಲ್, ಸಿ. ವೆಂಕಟೇಶ್, ಕುಡಾ ಅಧ್ಯಕ್ಷ ಓಂಶಕ್ತಿ ಚಲಪತಿ, ಅರಣ್ಯ ಅಭಿವೃದ್ಧಿ ನಿಗಮ ನಿರ್ದೇಶಕ ಕೆ.ಎಸ್.ರಾಜೇಂದ್ರ, ಮುಖಂಡರಾದ ಶಬರೀಷ್, ವಿಶ್ವನಾಥ್, ಮಂಜು, ದೀಪು, ಪೃಥ್ವಿ, ಸಂಕೇತ್,ಯಶ್ವಂತ್, ಸಾಯಿಸುಮನ್, ಸಾಯಿ ಮೌಳಿ, ರಾಜೇಶ್,ಭವಾನಿ, ಯಶ್, ವಿಶಾಖ, ಯಶವಂತ್ ಉಸ್ತುವಾರಿ ವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts