More

    ಪಿಜಿ ಕೋರ್ಸ್ ಪ್ರವೇಶಕ್ಕೆ ಮತ್ತೊಂದು ಅವಕಾಶ ಕಲ್ಪಿಸಿದ ಬೆಂ.ನಗರ ವಿವಿ

    ಬೆಂಗಳೂರು: ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಕೋರ್ಸುಗಳಿಗೆ ಮೊದಲ ಸುತ್ತಿನ ಪ್ರವೇಶಾತಿಯಲ್ಲಿ ಬಾಕಿ ಉಳಿದಿರುವ ಸೀಟುಗಳ ಪ್ರವೇಶಾತಿಗಾಗಿ ಅರ್ಜಿ ಆಹ್ವಾನಿಸಿದೆ.
    ಸಂಬಂಧಪಟ್ಟ ಕೋರ್ಸುಗಳಿಗೆ ಅರ್ಜಿಗಳನ್ನು ವಿವಿ ವೆಬ್‌ಸೈಟ್ ಠಿಠಿ://ಚ್ಚ್ಠಿ.ಚ್ಚ.ಜ್ಞಿ ನಲ್ಲಿ ಡೌನ್‌ಲೋಡ್ ಮಾಡಿಕೊಂಡು ನ.26ರೊಳಗೆ ಸಲ್ಲಿಸಬಹುದು. ದಂಡ ಶುಲ್ಕ ಸಹಿತ ಅರ್ಜಿ ಸಲ್ಲಿಸಲು ನ.27 ಕೊನೆಯ ದಿನವಾಗಿದೆ.
    ಅರ್ಹತಾ ಪಟ್ಟಿ ಪ್ರಕಟಿಸುವುದು ಮತ್ತು ಸಮಾಲೋಚನೆಯನ್ನು ನ.29ರಂದು ನಡೆಸಲಾಗುತ್ತದೆ. ಕೋರ್ಸುಗಳ ಪ್ರವೇಶಕ್ಕೆ ಅರ್ಹತೆ, ಸೀಟ್ ಮ್ಯಾಟ್ರಿಕ್ಸ್ ಮತ್ತು ಕೋರ್ಸುಗಳ ಶುಲ್ಕದ ಮಾಹಿತಿಗೆ ವಿವಿ ವೆಬ್‌ಸೈಟ್ ಅನ್ನು ಸಂಪರ್ಕಿಸಬಹುದು ಎಂದು ವಿವಿ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts