More

    ಪುದುಚೇರಿ: ಕಾಂಗ್ರೆಸ್ ತೊರೆದ ಮತ್ತೊಬ್ಬ ಶಾಸಕ

    ಪುದುಚೇರಿ: ಪುದುಚೇರಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ಮತ್ತಷ್ಟು ಬಿಕ್ಕಟ್ಟು ಸಂಭವಿಸಿದೆ. ನಾಲ್ಕು ಶಾಸಕರ ರಾಜೀನಾಮೆ ನಂತರ ಈಗ ಮತ್ತೊಬ್ಬ ಕಾಂಗ್ರೆಸ್ ಶಾಸಕ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ನಾಲ್ಕು ಬಾರಿ ಶಾಸಕರಾಗಿರುವ ಪುದುಚೇರಿಯ ಲಕ್ಷ್ಮೀನಾರಾಯಣ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಪಕ್ಷದಲ್ಲಿ ತಮ್ಮನ್ನು ಹತ್ತಿಕ್ಕಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

    ಲೆಪ್ಟಿನಂಟ್ ಗವರ್ನರ್ ತಮಿಳುಸಾಯಿ ಸೌಂದರ್ಯರಾಜನ್ ಅವರು ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತಪಡಿಸುವಂತೆ ಕಾಂಗ್ರೆಸ್​ಗೆ ಸೂಚಿಸಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

    ವಿಶ್ವಾಸಮತ ಸಾಭೀತಪಡಿಸಲು ರಾಜ್ಯಪಾಲರು ಫೆ 22 ರ ಸಂಜೆ 5 ಗಂಟೆಗೆ ಸಮಯ ನಿಗದಿ ಮಾಡಿದ್ದಾರೆ. ಕಾಂಗ್ರೆಸ್, ಡಿಎಂಕೆ 14 ಸ್ಥಾನಗಳನ್ನು ಹೊಂದಿದ್ದರೆ, ವಿರೋಧ ಪಕ್ಷಗಳು ಕೂಡ 14 ಸ್ಥಾನಗಳನ್ನು ಹೊಂದಿವೆ. ಇಬ್ಬರು ಕಾಂಗ್ರೆಸ್ ಶಾಸರು ಸೇರಿದಂತೆ ಮೂವರು ನಾಮನಿರ್ದೇಶಿತ ಶಾಸಕರು ಕಾಂಗ್ರೆಸ್​ಗೆ ರಾಜೀನಾಮೆ ನೀಡಿದ್ದಾರೆ.

    ಈ ಮೂಲಕ ಪುದುಚೇರಿ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ವಿ ನಾರಾಯಣಸ್ವಾಮಿ ನೇತೃತ್ವದ ಕಾಂಗ್ರೆಸ್ ಅಲ್ಪಮತಕ್ಕೆ ಕುಸಿದಿದೆ. ವಿರೋಧ ಪಕ್ಷಗಳು ವಿಧಾನಸಭೆಯಲ್ಲಿ ವಿಶ್ವಾಸ ಮತ ಸಾಬೀತು ಮಾಡುವಂತೆ ರಾಜ್ಯಪಾಲರಿಗೆ ಬೇಡಿಕೆ ಸಲ್ಲಿಸಿದ್ದವು. ಕಿರಣ್ ಬೇಡಿ ಅವರನ್ನು ಹಿಂದಕ್ಕೆ ಕರೆಯಿಸಿಕೊಂಡ ನಂತರ ತಮಿಳುಸಾಯಿ ಸೌಂದರ್ಯರಾಜನ್ ಅವರಿಗೆ ಪುದುಚೇರಿ ಹೊಣೆ ಹೊರಿಸಲಾಗಿದೆ.

    33 ಸದಸ್ಯ ಬಲದ ಪುದುಚೇರಿ ವಿಧಾನಸಭೆಯಲ್ಲಿ ಕಾಂಗ್ರೆಸ್ ಡಿಎಂಕೆ ಮೈತ್ರಿಯ 17 ಶಾಸಕರು ಇದ್ದರೆ, (ನಾಮನಿರ್ದೇಶಿತರೂ ಸೇರಿದಂತೆ) ವಿರೋಧ ಪಕ್ಷದಲ್ಲಿರುವ ಬಿಜೆಪಿ, ಎಐಎಡಿಎಂಕೆ ಹಾಗೂ ಪಕ್ಷೇತರರ ಸಂಖ್ಯೆ 16 ಇದೆ. ಜಾನ್ ಕುಮಾರ್ ಅವರ ರಾಜೀನಾಮೆ ಸಲ್ಲಿಸುವ ಮೂಲಕ ಕಾಂಗ್ರೆಸ್​ಗೆ ಸಂಕಷ್ಟಕ್ಕೆ ಒಳಗಾಗಿದೆ. ಇದೀಗ ವಿಧಾನಸಭೆ ಬಲ 28 ಕ್ಕೆ ಕುಸಿದಿದೆ.

    ಮುಖ್ಯಮಂತ್ರಿ ವಿ ನಾರಾಯಣಸ್ವಾಮಿ ಅವರಿಗೆ ಆಪ್ತರಾಗಿದ್ದ ಜಾನ್ ಕುಮಾರ್ ಅವರು ಇತ್ತೀಚೆಗೆ ದೆಹಲಿಯಲ್ಲಿ ಬಿಜೆಪಿ ಮುಖಂಡರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ಬೆಳವಣಿಗೆಯ ನಂತರ ಅವರು ರಾಜೀನಾಮೆ ನೀಡಿದ್ದಾರೆ. ಅವರು ಬಿಜೆಪಿ ಸೇರಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಬರುವ ಮೇ ನಲ್ಲಿ ಪುದುಚೇರಿ ವಿಧಾನಸಭೆಗೆ ಚುನಾವಣೆ ನಡೆಯಲಿದೆ. (ಏಜೇನ್ಸಿಸ್)

    ಮಹಿಳೆಯ ದೂರನ್ನು ಹೊಗಳಿಕೆಯೆಂದು ಹೇಳಿ ರಾಹುಲ್​ ಗಾಂಧಿಗೆ ಮಂಕುಬೂದಿ ಎರಚಿದ ಪುದುಚೇರಿ ಸಿಎಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts